ಏಪ್ರಿಲ್ 14.ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಧನೂರು ನಗರಸಭೆ ವ್ಯಾಪ್ತಿಯ ಸರ್ವೆ ನಂಬರು 17 ಏಳರಾಗಿಕ್ಯಾಂಪನಲ್ಲಿ 2011ರಲ್ಲಿ ಬಡವ, ನಿರ್ಗತಿಕರಿಗಾಗಿ ಹಂಚಿಕೆಯಾದ ನಿವೇಶನಗಳಲ್ಲಿ ಬರೋಬ್ಬರಿ ಅರ್ಧದಷ್ಟು ಅಂದರೆ 190ನಿವೇಶನಗಳು ಕಾನೂನುಬಾಹಿರ ಹಂಚಿಕೆಯೆಂದು ಗೌರವಾನ್ವಿತ ಲೋಕಾಯುಕ್ತರು 2016ರಲ್ಲಿಯೇ ನೀಡಿದ್ದ ತೀರ್ಪನ್ನು ಕಾರ್ಯಗತ ಮಾಡದೆ ಸಂಬಂಧಿಸಿದ ಎಲ್ಲಾ 13 ಅಧಿಕಾರಿಗಳ ವಿರುದ್ದ 2019ರ ಮಾರ್ಚನಲ್ಲಿ ಲೋಕಾಯುಕ್ತ ದೂರುದಾರನಾದ ಯಶವಂತಕೋವಿ ಕಲಬುರಗಿ ಹೈಕೋರ್ಟನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರ ನಿಮಿತ್ಯ ಹೈಕೋರ್ಟ ಈ ಹಿಂದೆಯೇ ಅಫಿಡೆವಿಟ್ ಸಲ್ಲಿಸಲು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮತ್ತು ರಾಜೀವಗಾಂಧಿ ಗ್ರಾ.ವಸತಿನಿಮಗ ನಿಯಮಿತದ ಎಂ.ಡಿಯವರಿಗೆ ಸೂಚಿಸಿದ್ದರೂ ಅವರೆಲ್ಲರೂ ನಿರ್ಲಕ್ಷ್ಯವಹಿಸಿದ್ದರಿಂದ ಕೊನೆಗೆ 5000/- ರೂ.ಗಳ ಮೊತ್ತದೊಂದಿಗೆ ಅಫಿಡೆವಿಟ್ ಸಲ್ಲಿಸಲು ಕೊನೆ ಅವಕಾಶವೆಂದು ಖಡಕ್ಕಾಗಿ ಗಡುವನ್ನು ದಿನಾಂಕ 13-4-2023 ಎಂದು ನೀಡಿತ್ತು.
ಈ ನಿಮಿತ್ಯ ಎಲ್ಲಾ 11 ಮೇಲಾಧಿಕಾರಿಗಳಿಗೆ ನೀಡಿದ್ದರಿಂದ ಸದರಿ ದಿನಾಂಕದಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಧಾನಸೌಧ ಬೆಂಗಳೂರು, ಸರ್ಕಾರದ ಕಾರ್ಯದರ್ಶಿಗಳು ನಗರಾಭಿವೃದ್ದಿ ಇಲಾಖೆ ವಿಕಾಸಸೌಧ ಬೆಂಗಳೂರು, ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಪ್ರಧಾನ ಕಾರ್ಯದರ್ಶಿಗಳು ವಸತಿ ಇಲಾಖೆ ಬೆಂಗಳೂರು, ಅಧಿನ ಕಾರ್ಯದರ್ಶಿ – 2 ವಸತಿ ಇಲಾಖೆ ಬೆಂಗಳೂರು, ಅಧಿನ ಕಾರ್ಯದರ್ಶಿ – 3 ವಸತಿ ಇಲಾಖೆ ಬೆಂಗಳೂರು, ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ ಕಲಬುರಗಿ, ರಾಯಚೂರು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಲಿಂಗಸಗೂರು ಉಪವಿಭಾಗ ಲಿಂಗಸಗೂರು, ತಹಶೀಲ್ದಾರರು ಸಿಂಧನೂರು, ಪೌರಾಯುಕ್ತರು ನಗರಸಭೆ ಸಿಂಧನೂರು ಎಲ್ಲಾ 11 ಜನ ಮೇಲಾಧಿಕಾರಿಗಳೆಲ್ಲ ಖುದ್ದು ಹಾಜರಿದ್ದು ಗೌರವಾನ್ವಿತ ನ್ಯಾಯಾಧೀಶರು ಆದೇಶದಂತೆ 5000/- ರೂ.ಗಳನ್ನು ನ್ಯಾಯಾಲಯಕ್ಕೆ ಪಾವತಿಸುವುದರ ಜೊತೆಗೆ ರಿಜಿಸ್ಟ್ರಿಯಲ್ಲಿ ಅಫಿಡೆವಿಟ್ ಅನ್ನು ಸಲ್ಲಿಸಿರುತ್ತಾರೆ.
ಸಲ್ಲಿಕೆಯನ್ನು ಗಮನಿಸಲಾಗಿದೆ. ಕಾರಣ ಪಟ್ಟಿಯಲ್ಲಿ ಪ್ರತಿವಾದಿ ನಂ. 4 ಪರ ಹಾಜರಿರುವ ವಕೀಲರಾದ ಶ್ರೀ ಅಶೋಕ ಟಿ. ಕಟ್ಟಿಮನಿ ಅವರ ಹೆಸರು ತೋರಿಸಲು ಕಛೇರಿಗೆ ಸೂಚಿಸಿರುತ್ತಾರೆ. ಹಾಗೆಯೇ ಪ್ರಕರಣವನ್ನು 12-7-2023ಕ್ಕೆ ಗೌರವಾನ್ವಿತರು ಮುಂದೂಡಿರುವುದಿದೆ.