ಜು.17.ಇಂದು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀ ಆದಿತ್ಯ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಕದಂಬ KAS ಅಕಾಡಮಿಯ 5ನೇ ಬ್ಯಾಚಿನ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಾರಂಭದ ಉದ್ಘಾಟನೆಯನ್ನು ಶ್ರೀ ಕನಕದಾಸ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಗೌರಿ ವಾಲಿಕಾರ ಅವರು ಸ್ಪರ್ಧಾರ್ಥಿಗಳಿಗೆ ಸ್ಪೂರ್ತಿದಾಯಕ ವಾಕ್ಯವನ್ನು ಕಪ್ಪು ಹಲಗೆ ಮೇಲೆ ಬರೆಯುವ ಮೂಲಕ ಉದ್ಘಾಟಿಸಿದರು.ನಂತರ ಅವರು ಮಾತನಾಡಿ ವಿದ್ಯಾರ್ಥಿಗಳ ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ತಂದೆ ತಾಯಿಗಳ ಶ್ರಮದ ಬೆವರಿನ ಫಲವೇ ಸಾಧನೆ ಮಾಡಲು ಸ್ಪೂರ್ತಿ .ಸ್ಪರ್ಧಾರ್ಥಿಗಳು ಸೋತರೂ ಕೂಡ ಎದೆಗುಂದದೆ ಸತತ ಪ್ರಯತ್ನದ ಮೂಲಕ ಯಶಸ್ಸನ್ನ ಪಡೆಯಬೇಕು ಹಾಗೂ ಜೀವನದಲ್ಲಿ ಮಹತ್ವದ ಕಾರ್ಯವನ್ನ ಸಾಧನೆಯ ರೂಪದಲ್ಲಿ ಕಾಣಬೇಕು ಹಿಂದಿನ ಎಲ್ಲಾ ನೋವುಗಳನ್ನು ಮರಿಯಬೇಕು ಬಡತನ ಸಾಧನೆಗೆ ಎಂದೂ ಅಡ್ಡ ಬಾರದು ಎಂಬ ಸ್ಪೂರ್ತಿದಾಯಕ ಮಾತುಗಳನ್ನು ವಿದ್ಯಾರ್ಥಿಗಳೊಂದಿಗೆ, ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕದಂಬ ಅಕಾಡೆಮಿಯ ನಿರ್ದೇಶಕರೊಬ್ಬರಾದ ಶ್ರೀ ರಮೇಶ್ ಹಲಗೆಯವರು ಹುಟ್ಟುವಾಗ ನಮ್ಮ ಹಣೆಯಲ್ಲಿ ಏನನ್ನು ಬರೆದಿಲ್ಲ ನಾವು ಹೀಗೆ ಬದುಕಬೇಕು ಇಂಥದ್ದೇ ಉನ್ನತ ಜೀವನವನ್ನು ನಡೆಸಬೇಕು ಸಮಾಜದಲ್ಲಿ ನಾವು ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಬೇಕು ಎಂಬುದು ನಮ್ಮ ಕೈಯಲ್ಲೇ ಇದೆ ನಮ್ಮ ತಾಳ್ಮೆ, ಆತ್ಮಸ್ಥೈರ್ಯ, ಸತತ ಪ್ರಯತ್ನ ಇವೆಲ್ಲವೂ ನಮ್ಮನ್ನು ಉತ್ತುಂಗ ಸ್ಥಾನಕ್ಕೆ ಒಯ್ಯುತ್ತವೆ ಎಂದು ತಿಳಿಸಿದರು. ಹಾಗೆ ಈ ಕಾರ್ಯಕ್ರಮದಲ್ಲಿ ಕದಂಬ ಅಕಾಡೆಮಿಯ ಪ್ರಧಾನ ನಿರ್ದೇಶಕರಾದ, ಶಂಕರ್ ವಾಲಿಕಾರ್, ಮಾರುತಿ ಸೋಮಲಾಪುರ್, ತಾಯಪ್ಪ ತಿಡಿಗೋಳ ಮತ್ತು ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು. ಶರಣಕುಮಾರ್ ಹಲಗಿ ಪ್ರಾಸ್ತವಿಕ ನುಡಿಗಳಾಡಿದರು ಶ್ರೀಮತಿ ಶಶಿಕಲಾ ಪಾಟೀಲ್ ಕಾರ್ಯಕ್ರಮವನ್ನು ನಿರ್ವಹಿಸಿದರು.