ಮಸ್ಕಿ : ಪಟ್ಟಣದ ತಹಶೀಲ್ದಾರರ ಕಾರ್ಯಲಯದಲ್ಲಿ
ಪ್ರೊ ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ಮಸ್ಕಿ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಪ್ರೀತಿಸಿ ಮರಿಯಮ್ಮ ಎಂಬ ದಲಿತ ಮಹಿಳೆ ಹಾಗೂ ನಾಯಕ ಸಮಾಜದ ಯುವಕ ಹನುಮಯ್ಯ ಎಂಬುವವರು ಮದುವೆಯಾಗಿದ್ದರು.ಇದನ್ನು ಸಹಿಸಿಕೊಳ್ಳದ ಕುಟುಂಬದ ಎಲ್ಲಾ ಸದಸ್ಯರು ಕೂಡಿಕೊಂಡು ನೀನು ಕೀಳು ಜಾತಿಯವಳು ಎಂದು ನಿಂದಿಸಿ,ಅವಮಾನಿಸಿದ್ದಲ್ಲದೆ, ಆಕೆಗೆ ಊಟದಲ್ಲಿ ವಿಷ ಹಾಕಿ ಕೊಂದಿರುತ್ತಾರೆ ಆದ್ದರಿಂದ ಇವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಸ್ಕಿಯ ಮಾನ್ಯ ತಹಶೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಮಂತ್ರಿಗಳಿಗೆ ಈ ಒಂದು ಮನವಿ ಪತ್ರದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ ಬಳಗಾನೂರು,ದೊಡ್ಡಪ್ಪ ಮುರಾರಿ,ದಾನಪ್ಪ ನಿಲೋಗಲ್,ಕಾಸಿಮಪ್ಪ ಡಿ.ಮುರಾರಿ,ದುರ್ಗಾ ಪ್ರಸಾದ ತೋರಣದಿನ್ನಿ,ದ್ಯಾಮಣ್ಣ ಸಂತೆಕೆಲ್ಲೂರು,ರಡ್ಡೆಪ್ಪ ಕುಣಿಕೆಲ್ಲೂರು,ಪರುಶುರಾಮ್ ದೀನಸಮುದ್ರ,ಮಂಜುನಾಥ ಮುಸ್ಲಿಕಾರಕುಂಟಿ,ಕಿರಣ್ ವಿ.ಮುರಾರಿ,ಮೋಹನ್ ಎಮ್.ಮುರಾರಿ,ಹುಲುಗಪ್ಪ ಬೆಲ್ಲದಮರಡಿ,ಬಸವರಾಜ ಕುಣಿಕೆಲ್ಲೂರು,ಹುಲುಗಪ್ಪ ದೀನಸಮುದ್ರ,ರಮೇಶ ಉಸ್ಕಿಹಾಳ್,ಮೌನೇಶ ಸಾನಬಾಳ,ಶೇಖರಪ್ಪ ಅಮೀನಗಡ,ಜಮದಗ್ನಿ ಗೋನಾಳ್,ಹಾಗೂ ಇನ್ನಿತರ ಹಲವು ಮುಖಂಡರು,ಪ್ರಮುಖರು ಉಪಸ್ಥಿತರಿದ್ದರು.