ರಾಯಚೂರು,ಆ.೧೦ (ಬುಧವಾರ)ದಂದು ರಾಯಚೂರು ಜಿಲ್ಲಾ ಪಂಚಾಯತಿಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ರಾಹುಲ್ ತುಕಾರಾಂ ಪಾಂಡ್ವೆ ರವರು ಕರ್ತವ್ಯಕ್ಕೆ ಹಾಜರಾಗಿ ದಿನದಂದು ಸರಕಾರಿ ನೌಕರರಾಗಿ ಆಯ್ಕೆಯಾದ ನೌಕರರೊಂದಿಗೆ ಜಿಲ್ಲಾ ಪಂಚಾಯತ್ ಕಛೇರಿ ಆವರಣದಲ್ಲಿ ಸಸಿಯನ್ನು ನೆಟ್ಟರು.
ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಮತ್ತು ಕರವಸೂಲಿಗಾರ ವೃಂದದಿAದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-೨ ಮತ್ತು ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ಪದನ್ನೂತಿ ಹೊಂದಿದ ಪ್ರಯುಕ್ತ ಆಯ್ಕೆಯಾದ ೫೦ ರಲ್ಲಿ ೪೭ ಜನ ನೌಕರರಿಗೆ ಉಪಕಾರ್ಯದರ್ಶಿಯವರು ಆದೇಶ ನೀಡಲಾಯಿತು .
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಶಶಿಕಾಂತ ಶಿವಪುರೆ, ಯೋಜನೆ ನಿರ್ದೇಶಕರು ಪ್ರಕಾಶ ವಿ ಮತ್ತು ಗ್ರಾ.ಪಂಯ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಸಂಘದ ರಾಜ್ಯಧ್ಯಕ್ಷರಾದ ಭೀಮರೆಡ್ಡಿ ಪಾಟೀಲ್, ಜಿಲ್ಲಾ ಅಧ್ಯಕ್ಷರಾದ ಅಶೋಕ ಗ್ರಾ.ಪಂಯ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹಾಗೂ ಕರವಸೂಲಿಗಾರರು ಇದ್ದರು.