ಆಗಸ್ಟ್ 29.ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನೋಬೆಲ್ ಪದವಿ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ ಆರನೇ ದಿನ ಸೋಮವಾರ ಎನ್ ಎಸ್ ಎಸ್ ಕಾರ್ಯಕ್ರಮದ ವಿಶೇಷ ವಾರ್ಷಿಕ ಶಿಬಿರದ ವಿಶೇಷ ಉಪನ್ಯಾಸಕರಾಗಿ ಮಹಿಬೂಬ್ ಮದ್ಲಾಪುರ ಗಿಡ ಮರಗಳನ್ನು ನಮ್ಮ ಸ್ವಂತ ಮಕ್ಕಳಂತೆ ಪಾಲನೆ ಪೋಷಣೆ ಮಾಡಿದಾಗ ಮಾತ್ರ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಕಾಣಲು ಸಾದ್ಯ ಸಸಿಯನ್ನು ನೆಡುವುದು ನಮ್ಮ ಆದ್ಯ ಕರ್ತವ್ಯ ಆದರೆ ಮರ ಗಿಡಗಳನ್ನು ಕಡಿಯುವುದು ನಮ್ಮ ಹಕ್ಕು ಅಲ್ಲ ನಾವು ಮುಂದಿನ ಪೀಳಿಗೆಗಾಗಿ ಏನಾದರು ಉಳಿಸುತ್ತೇವೆ ಅಂದರೆ ಅದು ಉತ್ತಮ ಪರಿಸರ ಒಮ್ಮೆ ರೂಡಿ ಮಾಡಿಕೊಂಡರೆ ಅದು ಪರಂಪಾರಿಕವಾಗಿ ನೆಡೆಯುತ್ತಾಹೊಗುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವುದು ಮುಖ್ಯ ಅದರಲ್ಲಿ ನೈಸರ್ಗಿಕ ಸಂಪತ್ತು ಉಳಿಸುವುದು ಅತೀಮುಖ್ಯ ಪರಿಸರ ನಾಶ ಮಾಡಿದರೆ ಮಾನವ ಕುಲಾ ನಶಿಸಿ ಹೋಗುತ್ತದೆ. ಪ್ರತಿ ಕಾರ್ಯಕ್ರಮಗಳಲ್ಲಿ ಉದ್ಘಾಟನೆಗೆ ಎಂದು ಬಳಸುವ ಗಿಡವನ್ನು ನೆಟ್ಟಿದ್ದರೆ ನಮ್ಮ ಭಾಗ ಮಲೇನಾಡು ಅಗುತ್ತಿತ್ತೇನೊ. ಮರ ಗಿಗಳು ತ್ಯಾಗ ಮಯಿ ಕಾರಣ ಅವು ಇದ್ದಾಗ ಹಣ್ಣು ಆಹಾರ ಆಶ್ರಯ ಕೊಡುತ್ತವೆ ಅವನ್ನು ಕಡೆದು ಸಾಯಿಸಿದಾಗ ಇದ್ದಿಲು, ಬೂದಿ ಗೊಬ್ಬರ ಕೊಡುತ್ತವೆ ಎಂದು ಪರಿಸರ ಬಗ್ಗೆ ಹಾಗೆನೇ ಯುವಜನತೆ ಬಗ್ಗೆ ಮಾತನಾಡುತ್ತ ಏಕಾಗ್ರತೆ ಗುರುತಿಸುವ ಚಟುವಟಿಕೆ ಮೂಲಕ ಯುವಕರು ಸದಾ ಕ್ರೀಯಾಶೀಲರಾಗಿ ಸೋಮಾರಿತನ ಸಾಯಿಸಬೇಕು, ಇತ್ತೀಚಿನ ದಿನಮಾನದಲ್ಲಿ ಮಾನಸಿಕರೋಗವಾಗಿ ಪರಿಣಾಮಿಸಿದ ಈ ಮೊಬೈಲ್ ರೋಗ ಎಂಬ ಮೊಬೈಲನ ಬಳಕೆ ಮಿತವಿರಬೇಕು, ಮೋಹದ ದೇಹ ಪ್ರೀತಿ ಬಿಟ್ಟು ದೇಶ ಪ್ರೇಮದ ಧ್ವಜ ಹೃದಯದಲ್ಲಿ ನೆಟ್ಟಿಕೊಳ್ಳಬೇಕು, ಯುವಕರನ್ನು ಹಾಳು ಮಾಡುವ ಆಯುದದಲ್ಲಿ ಅತಿಯಾದ ಹೊಗಳಿಕೆ ಕೂಡ ಒಂದು ಇದು ಒಳ್ಳೆಯದಲ್ಲ, ಸ್ವಪ್ರಯತ್ನ ಸ್ವಾಭಿಮಾನ ದಿಂದ ಬದುಕಲು ನಿರ್ಧರಿಸಬೇಕು. ತಂದೆ ತಾಯಿ ಗುರು ಹಿರಿಯರಿಗೆ ವಿದೆಯರಾಗಿರಬೇಕು.ಸಿಟ್ಟು ಡಿಲಿಟ್ ಮಾಡಬೇಕು ಮೌನವಾಗಿ ಜ್ಞಾನ ಗೆಲ್ಲಬೇಕು ನಾ ಏನಾದರು ಆಗಲಿಕ್ಕಿಲ್ಲ ಆದರೆ ಪೋಷಕರಿಗೆ ಉತ್ತಮ ಮಗ-ಮಗಳಾದರೆ ಸಾಕು ಜನ್ಮ ಸಾರ್ಥಕವಾಗುತ್ತದೆ. ದುಷ್ಚಟಗಳಿಗೆ ಬಲಿಯಾಗದಿರಿ ಅಮೂಲ್ಯ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಂಪನ್ಮೂಲ ವ್ಯಕ್ತಿ ಡಾ. ಮಹಿಬೂಬ್ ಮದ್ಲಾಪುರ ಸಂಪನ್ಮೂಲ ವ್ಯಕ್ತಿಗಳು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಸೂಗೂರು ಬಸವರಾಜ AEE ನೀರಾವರಿ ಇಲಾಖೆ ರವರು ಸೇವೆ ಎಂಬುದು ನಿಸ್ವಾರ್ಥದಿಂದ ಹೃದಯ ಪೂರಕವಾಗಿ ಮಾಡುವ ಕೆಲಸವೇ ಸೇವೆ, ವಿದ್ಯಾರ್ಥಿಗಳು ಶಿಕ್ಷಣ ಪಡೆಯುವೊಂದೇ ಮುಖ್ಯವಲ್ಲ ಅದರ ಜೊತೆಗೆ ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು ಬೆಳೆಸುವುದಕ್ಕಾಗಿ ಇರುವಂತಹ ಕಾರ್ಯಕ್ರಮ ಏನ್ ಎಸ್ ಎಸ್, ವಿದ್ಯಾರ್ಥಿಗಳು ತಮ್ಮ ದೌರ್ಬಲ್ಯವನ್ನು ಸರಿಪಡಿಸುವಕೊಳ್ಳುವುದಕ್ಕಾಗಿ ಇಂತಹ ಕಾರ್ಯಕ್ರದಲ್ಲಿ ಭಾಗಿ ಆಗಬೇಕು ಎಂದು ತಮ್ಮ ಉದ್ಘಾಟಕರ ನುಡಿಯನ್ನು ನುಡಿದರು.
ದೇವರಾಜ ಇತಿಹಾಸ ಉಪನ್ಯಾಸಕರು ಅಧ್ಯಕ್ಷತೆಯನ್ನು ವಹಿಸಿಕೊಂಡು ಎನ್ಎಸ್ಎಸ್ ಎಂಬ ಈ ಒಂದು ಕಾರ್ಯಕ್ರಮವು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಅಚ್ಚುಕಟ್ಟಾಗಿ ರೂಪಿಸಿಕೊಳ್ಳುವುದಕ್ಕೆ ಅತ್ಯಂತ ಸಹಾಯಕಾರಿಯಾಗಿದೆ ಎಂದು ಮಾತನಾಡಿದರು.
ನೋಬೆಲ್ ಕಾಲೇಜನ ಅಧ್ಯಕ್ಷರಾದ ಪರಶುರಾಮ ಮಲ್ಲಾಪೂರ, ಉಪಾಧ್ಯಕ್ಷರಾದ ಶಂಕರಪ್ಪ ಪತ್ತಾರ್, ಕಾರ್ಯದರ್ಶಿಗಳಾದ ಡಾ.ಅರುಣಕುಮಾರ ಬೇರ್ಗಿ ಮತ್ತು ಖಜಾಂಚಿಗಳಾದ ಜಯಪ್ಪ ಗೊರೇಬಾಳ
ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಕಮತಗಿ ಡಾ. ಶರಣಪ್ಪ ಗೊರೇಬಾಳ ಸಂತೋಷ ಕುಮಾರ ಆರ್ ಗ್ರಾ. ಪಂ. ಸದಸ್ಯರು,ಶ್ರೀಮತಿ ಲಕ್ಷ್ಮೀ ಗಂಡ ಪಕೀರಪ್ಪ ನಾಯಕ ಗ್ರಾ. ಪಂ. ಸದಸ್ಯರು,ಯಂಕನಗೌಡ ದೊಡ್ಡಣ್ಣನವರ್, ಟಿ.ಸಿದ್ದಲಿಂಗೇಶ ಸಾಹುಕಾರ,ಶರಣಬಸವೇಶ್ವರ ಸಪ್ಲಾಯ ಗೊರೇಬಾಳ,ಎನ್.ಚನ್ನಬಸವ ವಿ.ಎಸ್.ಎಸ್.ಎನ್ ನಿರ್ದೇಶಕರು,ಜವಾಲಿ ಕರೇಶ ಮಾಸ್ಟರ, ಓಬಳೇಶ ನಾಯಕ,
ದುಗ್ಗಪ್ಪ ವರದಿಗಾರರು, ಈಶಾನ್ಯ-ವಾಹಿನಿ ದಿನಪತ್ರಿಕೆ, ಚಿದನಂದ ದೊರೆ ವರದಿಗಾರರು, ಸಂಜೆವಾಣಿ ದಿನಪತ್ರಿಕೆ,
ಪ್ರಾಂಶುಪಾಲರಾದ ಆನಂದ ಎಸ್, ಎಂ ಎಸ್ ಎಸ್ ಅಧಿಕಾರಿಗಳಾಗಿರುವ ಹೊನ್ನಪ್ಪ ಬೆಳಗುರ್ಕಿ ಉಪನ್ಯಾಸಕರಾದ ಹನುಮೇಶ ಗುಡುದೂರು, ನಾಗರಾಜ ಮರಕುಂಬಿ, ವೆಂಕೋಬ ಬೂದಿವಾಳ, ನಾಗರಾಜ ನಾಯಕ, ಐಶ್ವರ್ಯ, ಶಾಂತ ಪಟೀಲ್, ಜ್ಯೋತಿ, ಜೀನತ್ ಬೇಗಂ, ಪಂಪಾಪತಿ, ಮೌಲಸಾಬ, ಪಂಚಾಕ್ಷರಯ್ಯ, ವೆಂಕಟೇಶ ತರಬೇತಿದಾರರು ನೋಬೆಲ್ ಕರಿಯರ್ ಅಕಾಡೆಮಿ,ಬಸವರಾಜ ತರಬೇತಿದಾರರು ನೋಬೆಲ್ ಕರಿಯರ್ ಅಕಾಡೆಮಿ,ವಸಂತಕುಮಾರ ಕನ್ನಡ ಭಾಗವಹಿಸಿದ್ದರು.