ಏಪ್ರಿಲ್ 07.ಸಿಂಧನೂರು 2023 – ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ನಿಮಿತ್ತ ಇಂದು ತಾಲ್ಲೂಕಿನ ಗಾಂಧಿನಗರದ 4 ನೇಯ ವಾರ್ಡಿನಲ್ಲಿ ಮಹಿಳಾ ಮುಖಂಡರನ್ನು, ಕಾರ್ಯಕರ್ತರನ್ನು ಬೇಟಿಮಾಡಿ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿನ ಬಗ್ಗೆ ಮನೆ-ಮನ ಮುಟ್ಟುವಂತೆ ವಿವರಿಸಿ ಅವರ ಜೊತೆಗೆ ಚರ್ಚಿಸಿದರು, ಜೊತೆಗೆ ಕಾಂಗ್ರೆಸ್ ಆಡಳಿತದ ಬಗ್ಗೆ ಜನರಿಗೆ ತಿಳಿಸಿ ಪಕ್ಷದ ಅಭ್ಯರ್ಥಿಯಾದ ಹಂಪನಗೌಡ ಬಾದರ್ಲಿ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿಗಳು,ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭೆ ಕ್ಷೇತ್ರದ ಮಹಿಳಾ ಘಟಕದ ಉಸ್ತುವಾರಿಯಾದ ಶ್ರೀಮತಿ ಶ್ರೀದೇವಿ ಗಂಡ ಶ್ರೀನಿವಾಸ, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಗಂಡ ಶಿವರಾಜ, ಶ್ರೀಮತಿ ಸರಸ್ವತಿ, ಸುಮಿತ್ರ ಸೇರಿದಂತೆ ಗ್ರಾಮದ ಮಹಿಳೆಯರು ಉಪಸ್ಥಿತರಿದ್ಧರು.