ಆಗಸ್ಟ್ 23.ಮಸ್ಕಿ ತಾಲ್ಲೂಕಿನ ಹಾಲಪುರ ಗ್ರಾಮದ ದಿ ಬೆಸ್ಟ್ ಪಬ್ಲಿಕ್ ಶಾಲಾಯ ಮಕ್ಕಳು ಚಂದ್ರಯಾನ-3 ಸಕ್ಸಸ್ಗಾಗಿ.ದಿ ಬೆಸ್ಟ್ ಪಬ್ಲಿಕ್ ಶಾಲೆ ಮಕ್ಕಳು ಹಾಗೂ ಶಿಕ್ಷಕರು ಚಂದ್ರಯಾನ-3 ಯ ಭಾವ ಚಿತ್ರವನ್ನು ಹಿಡಿದು ಕೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ.
ಚಂದ್ರಯಾನ 3 ಲ್ಯಾಂಡಿಂಗ್ ಮಕ್ಕಳಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ
ಭಾರತದ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ ಜುಲೈ 14ರಂದು ಚಂದ್ರಯಾನ-3 ನೌಕೆ ಉಡಾವಣೆ ಆದಾಗಿನಿಂದ ಈವರೆಗೂ ಎದುರು ನೋಡುತ್ತಿದ್ದ ಆ ಕ್ಷಣ ಇಂದು ಬಂದೇ ಬಿಟ್ಟಿದೆ. ಇಂದು ಸಂಜೆ 6 ಗಂಟೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳನ್ನು ಸ್ಪರ್ಶಿಸಲಿದೆ. ಆದರೆ, ಇದೊಂದು ಸವಾಲಿನ ಕೆಲಸವಾಗಿದೆ. ಇಡೀ ಯೋಜನೆ ಯಶಸ್ಸು ಈ ಲ್ಯಾಂಡಿಂಗ್ ಮೇಲೆ ನಿಂತಿದೆ. ಒಂದು ವೇಳೆ ಭಾರತ ಇಂದು ತನ್ನ ಸವಾಲನ್ನು ಯಶಸ್ವಿಯಾಗಿ ಸಾಧಿಸಿದ್ದಲ್ಲಿ, ಇಡೀ ವಿಶ್ವದ ಎದುರು ತನ್ನ ಪರಾಕ್ರಮ ಪ್ರದರ್ಶಿಸಿದಂತಾಗುತ್ತದೆ. ಅಲ್ಲದೆ, ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಲಿದ್ದು, ಜಗತ್ತಿನ ಚರಿತ್ರೆಯ ಪುಟದಲ್ಲಿ ಭಾರತದ ಹೆಸರು ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುತ್ತದೆ. ಇಂಥದ್ದೊಂದು ಕ್ಷಣ ಯಾವುದೇ ಅಡ್ಡಿಯಿಲ್ಲದೆ, ಸುಸೂತ್ರವಾಗಿ, ಯಶಸ್ಸಿಯಾಗಲೆಂದು ಇಡೀ ದೇಶದ ಜನರು ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಪೂಜೆ-ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದಾರೆ.