ಬಡವರ ಬಾರಕೋಲು ಸುದ್ದಿ
ಮಸ್ಕಿ : 11 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ರಾಯಚೂರಿನಲ್ಲಿ ನಡೆಸಲು ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಗದಗ ಕಾರ್ಯಕಾರಿ ಸಮಿತಿಯು ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ನಿರ್ಣಯ ಮಾಡಿರುವುದರಿಂದ ಮಸ್ಕಿ ತಾಲೂಕ ದಲಿತ ಸಾಹಿತ್ಯ ಪರಿಷತ್ತು ಮತ್ತು ದಲಿತ ಸಾಹಿತ್ಯ ಪರಿಷತ್ತು ಯುವ ಘಟಕದ ವತಿಯಿಂದ ಪೂರ್ವ ಭಾವಿಸಭೆಯನ್ನು ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದ ಸಭಾಂಗಣದಲ್ಲಿ ಕರೆಯಲಾಗಿತ್ತು.
ಈ ಸಭೆಯಲ್ಲಿ 11 ನೇ ಸಮ್ಮೇಳನದ ರೂಪರೇಷಗಳ ಸ್ವರೂಪದ ಬಗ್ಗೆ ಚರ್ಚಿಸಲಾಯಿತು. ಇದಲ್ಲದೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇನ್ನಿತರ ಹಲವಾರು ವಿಷಯಗಳನ್ನು ಕುರಿತು ಚರ್ಚಿಸಿ 11ನೆಯ ಅ.ಭಾ.ದ.ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮಸ್ಕಿ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಕೋರಲಾಯಿತು.
ಇದೇ ಸಂದರ್ಭದಲ್ಲಿ ದ.ಸಾ.ಪರಿಷತ್ ತಾಲೂಕ ಅಧ್ಯಕ್ಷ ನಾಗೇಶ್ ಜಂಗಮರಹಳ್ಳಿ,ಸಿದ್ದಪ್ಪ ಸೆಳ್ಳೆದ್ ಉದ್ಬಾಳ,ಹನುಮಂತ ನಾಯಕ ರಂಗಾಪೂರು,ರಾಮನಗೌಡ ಮಸ್ಕಿ,ಪರಪ್ಪ ಭಂಡಾರಿ ಮಸ್ಕಿ,ಮುದುಕಪ್ಪ ಪರಾಪೂರು,ಗ್ಯಾನಪ್ಪ ಮೆದಿಕಿನಾಳ ವರದಿಗಾರರು,ಸೋಮನಾಥ ನಾಯಕ ಜಿನ್ನಾಪೂರು,ವೀರಪ್ಪ.ಡಿಮಸ್ಕಿ,ದೇವರಾಜ ಜಿ.ಘಂಟಿ,ಪ್ರಶಾಂತ ಉಪನ್ಯಾಸಕರು ಮಸ್ಕಿ,ಹನುಮಂತಪ್ಪ ಚಿಕ್ಕಕಡಬೂರು ಹಾಗೂ ಇತರರು ಉಪಸ್ಥಿತಿ ಇದ್ದರು.