ಸಿಂಧನೂರು ಜೂನ್ 26.ಬಿಜೆಪಿ ಸರಕಾರವನ್ನು ಕಿತ್ತೆಸೆದು ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದಿದೆ. 5 ಗ್ಯಾರಂಟಿಗಳನ್ನು ನೀಡಿದೆ. ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲದ ಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅನ್ನಭಾಗ್ಯ, ಶಕ್ತಿ ಯೋಜನೆ ಗೃಹಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ ದಂತಹ ಸಾಮಾಜಿಕ ಕಾರ್ಯಕ್ರಮಗಳಡಿಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದೆ. ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಪ್ರಾರಂಭಿಸಿದೆ. 5 ಗ್ಯಾರಂಟಿಯ ಜೊತೆಗೆ ಭೂಮಿ- ವಸತಿ ಗ್ಯಾರಂಟಿಯನ್ನು ಸರಕಾರ ಘೋಷಣೆ ಮಾಡಬೇಕೆಂದು ಕರ್ನಾಟಕ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ, ಸಂತೋಷ ಹಿರೇದಿನ್ನಿ ಹೇಳಿದರು.
ಎಲ್ಲಾ ಸಂಪನ್ಮೂಲದ ಮೂಲ ಭೂಮಿ, ಭೂಮಿಯಲ್ಲಿಯೇ ಎಲ್ಲಾ ಇರುವುದು ಎಲ್ಲಾ ಸಿಗುವುದು, ಲಕ್ಷಾಂತರ ಜನ ದಲಿತ, ಆದಿವಾಸಿ, ಭೂಹೀನ ಬಡ ರೈತರು ಕಳೆದ 20-30 ವರ್ಷಗಳಿಂದ ರಾಜ್ಯದಲ್ಲಿ ಹಾಗೂ ನಮ್ಮ ಸಿಂಧನೂರು ತಾಲೂಕಿನಲ್ಲಿ ಸರಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ, ಭೂಮಿಗಾಗಿ ಫಾರಂ ನಂ. 53, 57 ನಿವೇಶನಕ್ಕಾಗಿ 94ಸಿ ಹಾಗೂ 94ಸಿಸಿ ಅರ್ಜಿ ಹಾಕಿದವರಿಗೆ ಪಟ್ಟಾ ಇಲ್ಲ ! ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರೀ ಶ್ರೀಮಂತರಿಗೆ ಸರಕಾರಿ ಭೂಮಿಯನ್ನು ಧಾರೆ ಎರೆಯಲಾಗುತ್ತಿದೆ. ಸರಕಾರಿ ಭೂಮಿ ಭೂಗಳ್ಳರ ಪಾಲಾಗಲು ರೈತ ವಿರೋಧಿ ಕಾಯ್ದೆಗಳನ್ನು ಹಿಂದಿನ ಬಿಜೆಪಿ ಸರಕಾರ ತಂದಿದ್ದಾರೆ. ಆ ರೈತ ವಿರೋಧಿ ಕಾಯ್ದೆಯನ್ನು ಸಿದ್ದರಾಮಯ್ಯ ಸರಕಾರ ಬೇಷರತ್ತಾಗಿ ರದ್ದುಗೊಳಿಸಬೇಕಾಗಿದೆ. ದಲಿತ ಆದಿವಾಸಿ ಭೂಹೀನ ಬಡವರಿಗೆ ಸರಕಾರಿ ಪರಂಪೋಕ, ಖಾರಿಜಖಾತಾ, ಗೋಮಾಳ, ಕೆರೆ ಅಂಗಳ, ಅರಣ್ಯ ಭೂಮಿ ಸೇರಿದಂತೆ ಇತರೆ ಸರಕಾರಿ ಭೂಮಿಯ ಒತ್ತುವರಿದಾರರನ್ನು ತೆರವುಗೊಳಿಸಿ, ಕಡು ಬಡವರಿಗೆ ಭೂಮಿಯನ್ನು ಸಾಗುವಳಿಗೆ ನೀಡಬೇಕಾಗಿದೆ. ತಾಲೂಕಿನಲ್ಲಿ ಬಸಾಪೂರ(ಇಜೆ) ಸುಲ್ತಾನಪುರ, ಸಿಂಧನೂರು, ಹೊಸಲಾಪೂರ(ಡಿ) ಸೇರಿದಂತೆ ತಾಲೂಕಿನಲ್ಲಿ ಕಂದಾಯ ಗ್ರಾಮಗಳ: ಸರಕಾರಿ ಭೂಮಿಗೆ ಫಾರಂ ನಂ. 1, 53,57, ಹಾಗೂ ನಿವೇಶನಕ್ಕಾಗಿ 24 & 94ಸಿಸಿ ಅಡಿಯಲ್ಲಿ ಅರ್ಜಿ ಹಾಕಿದ ಅರ್ಹ ಫಲಾನುಭವಿಗಳಿಗೆ ಭೂ ಪಟ್ಟಾ ಹಾಗೂ ಹಕ್ಕುಪತ್ರಗಳನ್ನು ನೀಡಲು ಒತ್ತಾಯಿಸಿ, *ದಿನಾಂಕ : 28.06 2023ರಂದು ಬುಧವಾರ ಸಿಂಧನೂರು, ತಹಶೀಲ್ದಾರರ ಕಛೇರಿ ಮುಂದೆ ಒಂದು ದಿನದ ಪ್ರತಿಭಟನಾ ಧರಣಿಯನ್ನು ಕರ್ನಾಟಕ ರೈತ ಸಂಘ-ಎಐಕೆಎಸ್ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.* ಈ ಧರಣಿಗೆ ಸರಕಾರಿ ಭೂಮಿಯಲ್ಲಿ ಅರ್ಜಿ ಹಾಕಿದ ಸಾಗುವಳಿ ಮಾಡುವವರು, ಸರಕಾರಿ ಜಾಗದಲ್ಲಿ ನಿವೇಶನಕ್ಕಾಗಿ ಅರ್ಜಿ ಹಾಕಿದವರೆಲ್ಲಾ ಭಾಗವಹಿಸಲು ವಿನಂತಿ, ಸದರಿ ದರಣೆ ಹೋರಾಟಕ್ಕೆ ರೈತ ಕಾರ್ಮಿಕರ ರಾಜ್ಯ ಮುಖಂಡರಾಗಿರುವ ಆ.ಮಾನಸಯ್ಯ ಮತ್ತು ರೈತ ಸಂಘದ ರಾಜ್ಯ ಮುಖಂಡರಾದ ಶ್ರೀನಿವಾಸ ಕಂದೇಗಾಲ ಅವರು ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷರಾದ, ಮಲ್ಲಯ್ಯ ಕಟ್ಟಿಮನಿ ಮತ್ತು ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿ ಮಾತನಾಡಲಿದ್ದಾರೆ. ಕಾರಣ ಈ ಧರಣಿ ಹೋರಾಟಕ್ಕೆ ತಾಲೂಕಿನ ದಲಿತ, ರೈತ, ಕಾರ್ಮಿಕ ಜನಪರ ಸಂಘಟನೆಗಳು ಬೆಂಬಲಿಸಿ ಭಾಗವಹಿಸಬೇಕೆಂದು ನಮ್ಮ ಕೋರಿಕೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ, ಕರ್ನಾಟಕ ರೈತ ಸಂಘದ ತಾಲೂಕು ಉಪಾಧ್ಯಕ್ಷರಾದ, ಹಂಪಮ್ಮ ಹನುಮನಗರ ಕ್ಯಾಂಪ್, ತಾಲೂಕು ಉಪಾಧ್ಯಕ್ಷರಾದ, ಹನುಮಂತಪ್ಪ ಗೋಡ್ಯಾಳ, ಪರಶುರಾಮ ಗೋಪಾಲನಗರ, ಖಜಾಂಚಿಯಾದ, ಉಷಾ ಎಂ.ಜಿ, ತಿರುಪತಿ ಗಂಗಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.