ಬಳ್ಳಾರಿ ಏ.02 ರಾಜ್ಯ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ತೊಗಲುಗೊಂಬೆ ಆಟ ಪ್ರಾತ್ಯಕ್ಷಿಕೆ ಕಲಾ ಶಿಬಿರ ನಡೆಸಿ ಹಲವಾರು ದೇಶ ವಿದೇಶಗಳಲ್ಲಿ ಗೊಂಬೆಯಾಟವನ್ನು ಗುರುತಿಸಿದಂತ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಪುತ್ರ, ತೊಗಲು ಗೊಂಬೆಯ ದಂತ ಕಥೆ, ಹಿರಿಯ ಕಲಾವಿದ ಶ್ರೀ ನಾಡೋಜ ಬೆಳಗಲ್ಲು ವೀರಣ್ಣನವರು ಅವರು (91) ಚಳ್ಳಕೆರೆ ಮಾರ್ಗದ ಬಳಿ ರಸ್ತೆಯಲ್ಲಿ ಇಂದು ಬೆಳಗ್ಗೆ ವಾಹನ ಅಪಘಾತಕ್ಕೀಡಾಗಿ ನಿಧನವಾಗಿದ್ದಾರೆ ಎಂದು ತಿಳಿದು ಬಂದಿದೆ
ಗೊಂಬೆ ಆಡ್ಸೋನು ಮೇಲೆ ಕುಂತವ್ನೆಂದು ಹಾಡಿನಲ್ಲಿ ಕೇಳಿದ್ದುಂಟು ಆದರೆ ಗೊಂಬೆ ಆಡ್ಸೋರು ಬಳ್ಳಾರಿಯಲ್ಲಿ ಇದ್ದರು
ಹೌದು ಆತ್ಮೀಯ ಓದುಗರೇ ಬಳ್ಳಾರಿಯ ಬೆಳಗಲ್ ವೀರಣ್ಣ ಅವರು ಸುಪ್ರಸಿದ್ಧ ಗೊಂಬೆ ಆಟದ ತಂಡ ಮಹಾತ್ಮ ಗಾಂಧಿ ಅವರ ಜೀವನವನ್ನು ಆಧರಿಸಿ ಆಟವನ್ನು ಪ್ರದರ್ಶಿಸುತ್ತಿದ್ದರು ಬೆಳಗಲ್ ವೀರಣ್ಣ ಅವರು ಕಲಾವಿದರ ಮನೆತನದಲ್ಲಿ ಜನಿಸಿ ವೀರಣ್ಣ ಅವರು ಚಿಕ್ಕವರಿಂದಲೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.
ಶ್ರೀ ಚಂದಯ್ಯ ಸ್ವಾಮಿಯವರು ತಮ್ಮ ನಾಟಕ ಕಂಪನಿಗೆ ಇವರನ್ನು ಆಹ್ವಾನಿಸಿದರು. ಅವರು ತಗೂಲುಗೊಂಬೆಯ ಆಟಗಳ ಕಲೆಯನ್ನು ಪುನರ್ಜೀವಗೊಳಿಸುವ ಚಟುವಟಿಕೆಗಳಲ್ಲಿ 1980 ರಿಂದ ತೊಡಗಿಕೊಂಡರು ರಾಮಾಯಣದ ಪಂಚವಟಿ ಕಥಾಭಾಗವನ್ನು ನಡೆಸಿಕೊಡುವಲ್ಲಿ ದಾಖಲೆಯನ್ನೇ ನಿರ್ಮಿಸಿದ್ದಾರೆ
ಇವರು ತಮ್ಮ ಗೊಂಬೆ ಆಟದ ಮೂಲಕ ಪ್ರವಾದಿ ಬಸವೇಶ್ವರ ಕಿತ್ತೂರು ಚೆನ್ನಮ್ಮ ಭಾರತ ಸ್ವತಂತ್ರ ಸಂಗ್ರಾಮ ಮಹಾತ್ಮ ಗಾಂಧಿ ಮುಂತಾದ ಕಥೆಗಳನ್ನು ನಿರೂಪಿಸುವಲ್ಲಿ ಪ್ರಸಿದ್ಧರು ಮತ್ತು ಗೌತಮ್ ಬುದ್ಧ ವಿವೇಕಾನಂದ ಮತ್ತು ಅಂಬೇಡ್ಕರ್ ಅವರ ಕಥೆಗಳನ್ನು ತೊಗಲು ಗೊಂಬೆಆಟ ಪ್ರದರ್ಶಿಸಿದ್ದರು
ಸ್ವಿಡ್ಜರ್ಲ್ಯಾಂಡ್ ಝಾರಿಚ್ ನ್ ರೆಯಿಡ್ ಬರ್ಗ್ ೬೦ನೇಯ ಭಾರತ -ಸ್ವಿಸ್ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಹ್ವಾನಿತರು ಜರ್ಮನಿಯ ಲಿಂಡನ್ ಮ್ಯೂಸಿಯಂ ಕೂಡ ಇವರನ್ನು ಆಹ್ವಾನಿಸಿತ್ತು ಜಗತ್ತಿನ ಇನ್ನೂ ಕೆಲವುಕಡೆ ಪ್ರದರ್ಶನ ನೀಡಿದ್ದಾರೆ
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಜಾನಪದ ಅಕಾಡೆಮಿಗಳ ಪ್ರಶಸ್ತಿಗಳು, ಕರ್ನಾಟಕ ಸರ್ಕಾರದ ಜಾನಪದ ಶ್ರೀ ಪ್ರಶಸ್ತಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಇನ್ನು ಹಲವು ಪ್ರಶಸ್ತಿಗಳ ಬಾಜಿನರು ಇವರ ಜನನ ಬಳ್ಳಾರಿ ಜಿಲ್ಲೆಯ ಬೆಳಗಲಿನಲ್ಲಿ ಅಕ್ಟೋಬರ್ ೦೬-೧೯೩೬ ರಂದು ಜನನವಾಯಿತು