ರಾಯಚೂರು,ಮಾ.30,(ಕ.ವಾ):- ವೈದ್ಯಕೀಯ ತಳಿಶಾಸ್ತ್ರಜ್ಞ, ಸ್ತ್ರೀರೋಗ ತಜ್ಞ, ನೋಂದಾಯಿತ ವೈದ್ಯಕೀಯ ವೃತ್ತಿ ನಿರತರು ರೆಡಿಯೋಲಾಜಿಸ್ಟ್, ಸೋನಾಲಾಜಿಸ್ಟ್ನಂತಹ ಪರೀಕ್ಷೆ ಕೈಗೊಳ್ಳಲು ನೊಂದಣಿ ಕಡ್ಡಾಯವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರಬಾಬು ಅವರು ಹೇಳಿದರು.
ಅವರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಪಿ.ಸಿ.ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನೋಂದಾಯಿತ ವೈದ್ಯಕೀಯ ವೃತ್ತಿ ನಿರತರು ರೆಡಿಯೋಲಾಜಿಸ್ಟ್, ಸೋನಾಲಾಜಿಸ್ಟ್ನಂತಹ ಪರೀಕ್ಷೆ ಕೈಗೊಳ್ಳಲು ನೊಂದಣಿ ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ಒಟ್ಟು 9 ಅರ್ಜಿಗಳು ಬಂದಿದ್ದು, ಅದರಲ್ಲಿ 6 ಅರ್ಜಿಗಳು ನವೀಕರಣಕ್ಕೆ ಅರ್ಜಿಯನ್ನು ಸಲ್ಲಿಸಿವೆ. ಮೂರು ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದರು.
ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯನ್ವಯ ಜೆನಿಟಿಕ್ ಸಮಾಲೋಚನಾ ಕೇಂದ್ರಗಳು ಪ್ರಯೋಗಾಲಯಗಳು ಮತ್ತು ಚಿಕಿತ್ಸಾ ಕೇಂದ್ರಗಳನ್ನು ಸಂಬಂಧಿಸಿದ ಸುಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಲಾಬೇಕು ಜೊತೆಗೆ ಯಾವುದೇ ವ್ಯಕ್ತಿ ಯಾವುದೇ ಚಿಕಿತ್ಸಾಲಯಗಳನ್ನು ಅತ್ಯಾಧುನಿಕ ಯಂತ್ರೋಪಕರಣಗಳಾದ ಅಲ್ಟ್ರಾಸೋನೋಗ್ರಾಫಿ, ಇಮೇಜ್ ಮಿಷನ್, ಸ್ಕ್ಯಾನರ್ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳನ್ನು ಸ್ಥಾಪಿಸಬೇಕಾದರೆ ಕಡ್ಡಾಯವಾಗಿ ನೊಂದಣಿಯಾಗಲೇಬೇಕು ಎಂದು ಹೇಳಿದರು.
ಈ ನಿಯಮಗಳನ್ನು ಮೀರಿ ಯಾವುದೇ ವ್ಯಕ್ತಿಯು ಕಾಯ್ದೆಯ ಆಶಯಗಳ ವಿರುದ್ಧ ನಡೆದುಕೊಂಡಲ್ಲಿ ದಂಡ ವಿಧಿಸಿ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಅಧ್ಯಕ್ಷ ಡಾ.ಶಿವಪ್ಪ ಮಾಲಿಪಾಟೀಲ್, ಜಿಲ್ಲಾ ಕಾರ್ಯದರ್ಶಿ ಶಿವಗಿರೇಶ, ಸದಸ್ಯರಾದ ಲಲಿತಾ ನಾಲ್ವಾಡೆ, ರಂಗಲಿಂಗನಗೌಡ, ಲಿಂಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.