ಮಸ್ಕಿ ಜುಲೈ 22.ಅಭಿನಂದನ್ ಸಂಸ್ಥೆಯ ವತಿಯಿಂದ ಒಂದು ವಾರವು ಬಿಡದೆ ಸತತವಾಗಿ ನಡೆದುಕೊಂಡು ಬರುತ್ತಿರುವ ಸ್ವಚ್ಛತಾ ಅಭಿಯಾನ ಆಗಿರುವ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಮೂಲಕ ಹಲವಾರು ಸರ್ಕಾರಿ ಶಾಲೆಗಳು, ಬಸ್ ನಿಲ್ದಾಣಗಳು, ಉದ್ಯಾನಗಳು, ದೇವಾಲಯಗಳು ಮತ್ತು ಮುಂತಾದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೆ 106 ವಾರಗಳನ್ನು ಪೂರೈಸಿ ಭಾರತದ ಪ್ರತಿಷ್ಠಿತ ದಾಖಲೆಗಳಲ್ಲಿ ಒಂದಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರ್ಪಡೆಯಾಗಿದೆ.
ಈ ಒಂದು ಅಭಿಯಾನಕ್ಕೆ ಪ್ರೇರಣೆಯಾದ ಕೊಪ್ಪಳದ ಗವಿಶ್ರೀಗಳ ಸನ್ನಿಧಿಯಲ್ಲಿ ಅಭಿಯಾನದ ಕಾರ್ಣಿಕರ್ತರಾದ ಹಾಗೂ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ಎಲ್ಲಾ ಸ್ವಯಂಸೇವಕರ ಪರವಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪದಕ ಹಾಗೂ ಪ್ರಮಾಣ ಪತ್ರಗಳನ್ನು ಶ್ರೀಗಳ ಹಸ್ತದಿಂದ ಸ್ವೀಕರಿಸಿದರು. ವಿತರಿಸಿದ ನಂತರ ಶ್ರೀಗಳು ಈ ಒಂದು ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನ ಸೇವೆಯೇ ಪರಮೋ ಧರ್ಮ ಎಂಬ ತತ್ವದಲ್ಲಿ ಕಾರ್ಯನಿರ್ವಹಿಸುವುದು ಬಹಳ ಉತ್ತಮವಾಗಿದೆ ಇದರಿಂದ ಇನ್ನೂ ಹಲವಾರು ಯುವಕರಿಗೆ ಸ್ಪೂರ್ತಿಯಾಗಲಿ ಎಂಬುದಾಗಿ ಸಂದೇಶವನ್ನು ಬರೆದುಕೊಟ್ಟರು. ಈ ಸಂದರ್ಭದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಖಾಜಾ ಸಾಬ್, ಯುವ ಬ್ರಿಗೇಡ್ ನ ದೇವರಾಜ್, ಅಭಿನಂದನ್ ಪದಾಧಿಕಾರಿಗಳಾದ ಜಾಫರಮಿಯ, ಶ್ರುತಿ ಹಂಪರಗುಂದಿ, ಶೈನಾಜ್ ಬೇಗಂ, ದೇವರಾಜ ಎಚ್, ಮಲ್ಲಿಕಾರ್ಜುನ ಬಡಿಗೇರ, ರವಿಚಂದ್ರ, ಬಸಲಿಂಗಪ್ಪ ಬಾದರ್ಲಿ, ಅಮಿತ್ ಕುಮಾರ್ ಪುಟ್ಟಿ, ವೀರೇಶ್ ದೇವರಮನಿ, ಅಮರೇಶ್ ಕಿಲ್ಲಾರಹಟ್ಟಿ, ಕಾರ್ತಿಕ್ ಜೋಗಿನ್, ಕಿಶೋರ್, ಪ್ರಜ್ವಲ್ ಹಾದಿಮನಿ ಪಾಲ್ಗೊಂಡಿದ್ದರು.