ಏಪ್ರಿಲ್ 22.ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಹೊರವಲಯದಲ್ಲಿರುವ ಸುನ್ನೀ ಈದ್ಗಾ ಮೈದಾನದಲ್ಲಿ ಮುಸ್ಲೀಂ ಬಾಂಧವರು ಸೇರಿ ಶ್ರದ್ಧೆ ಭಕ್ತಿ ದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಮರಿಗೆ ಪವಿತ್ರವಾದ ಮಾಸ ರಂಜಾನ್. ಈ ಒಂದು ತಿಂಗಳು ಮುಂಜಾನೆಯ ಸೂರ್ಯೋದಯ ಮುಂಚೆ ಯಿಂದ ಸೂರ್ಯಸ್ತದತನಕ ಹನಿ ನೀರನ್ನು ಸೇವಿಸದೆ ಅನ್ನ ಆಹಾರ ಪಾನಿಯವನ್ನು ತೊರೆದು ಅಲ್ಲಾಹನ (ದೇವನ) ಆದೇಶ ಪಾಲಿಸಿದ ಉಪವಾಸಿಗರಿಗಾಗಿ ಅಲ್ಲಾಹನು ಉಡುಗೊರೆಯ ರೂಪದಲ್ಲಿ ನೀಡಿದ ಈದುಲ್ ಫಿತರ್ (ರಂಜಾನ್) ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಹಗಲು ಹೊತ್ತಿನಲ್ಲಿ ಕಣ್ಣಮುಂದೆ ಅನ್ನ ಹಾರ ಇದ್ದರೂ, ದೇವನ (ಅಲ್ಲಾಹನ) ಮೇಲಿನ ಭಯದಿಂದ ಅದನ್ನು ಸಂಪೂರ್ಣ ತೆರೆಯುತ್ತಾರೆ.
ರಾತ್ರಿ ಹೊತ್ತಿನಲ್ಲಿ ವಿಶೇಷ ರೀತಿಯ ಪ್ರಾರ್ಥನೆ ಸಲ್ಲಿಸುತ್ತಾರೆ . ಈ ಪ್ರಾರ್ಥನೆಗೆ ತರಾವೀಹ್ ಎಂದು ಕರೆಯುತ್ತಾರೆ.
ಈ ತರವೀಹ್ ನವಾಜ್ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ಮುಸ್ಲಿಮರ ವಾಡಿಕೆ. ಈದುಲ್ ಫಿತರ್ ಹಬ್ಬದ ಸಂಭ್ರಮ ಆರಂಭವಾಗುತ್ತದೆ. ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳು ಮೆಹೆಂದಿ ಹಚ್ಚುವುದರಲ್ಲಿ ತುಳಿಸಿಕೊಳ್ಳುತ್ತಾರೆ. ಮನೆಯ ಮಹಿಳೆಯರು ವಿವಿಧ ರೀತಿಯ ಆಹಾರ ಖಾದ್ಯಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ ಹೀಗೆ ಹಬ್ಬದ ಸಂಭ್ರಮದಲ್ಲಿ ತೊಡಗುತ್ತಾರೆ.
ಈ ಹಬ್ಬದ ವಿಶೇಷ ಎಂದರೆ ಝಕಾತ್ ನೀಡುವುದು. ಝಕಾತ್ ಎಂದರೆ ಬಡವನಿರಲಿ, ಬಲ್ಲಿದನಿರಲಿ ಪ್ರತಿಯೊಬ್ಬ ಮುಸ್ಲಿಮನಿಗೆ ಕಡ್ಡಾಯವಾಗಿದೆ. ಈ ಝಕಾತ್ ಈದ್ ನವಾಜ್ ಗಿಂತ ಮುಂಚಿತವಾಗಿ ದಾನ ಮಾಡಬೇಕು. ಇದರ ಉದ್ದೇಶ ಯಾವ ಮುಸ್ಲಿಮರೂ ಹಬ್ಬದ ಸಂಭ್ರಮದಿಂದ ವಂಚಿತವಾಗಬಾರದೆಂದು ಆಗಿದೆ.
ಝಕಾತ್ ಎಂದರೆ ಎರಡುವರೆ ಕಿಲೋ ಗ್ರಾಂ ನಷ್ಟು ಆಯಾ ಪ್ರದೇಶದ ಪ್ರಮುಖ ಆಹಾರ ಧಾನ್ಯವನ್ನು ದಾನವಾಗಿ ಮಾಡಬೇಕು.ಇದರಲ್ಲಿ ಅಕ್ಕಿ ಬೇಳೆ ಗೋಧಿ ಇತ್ಯಾದಿ ಯಾವುದಾದರೂ ಒಂದು ಆಹಾರಧಾನ್ಯವನ್ನು ನೀಡಬಹುದು.ಇದು ತನ್ನ ದೈನಂದಿನ ಖರ್ಚಿನಿಂದ ಉಳಿದ ಮತ್ತದಿಂದ ನೀಡುವುದು ಪ್ರತಿಯೊಬ್ಬನ ಕರ್ತವವಾಗಿದೆ.
ಗಂಡು ಮಕ್ಕಳಾದರೂ ಹೆಣ್ಣು ಮಕ್ಕಳಾದರೂ ಝಕಾತ್ ನೀಡುವುದು ಅದು ಕಡ್ಡಾಯವಾಗಿದೆ. ಈ ಝಕಾತ್ ಬಡವರ ಮನೆಯನ್ನು ಹುಡುಕಿ ನೀಡುವುದು ಇದರ ವಿಶೇಷವಾಗಿದೆ. ಝಕಾತ್ ಮಾಡದೇ ಇದ್ದರೆ ಅವನಿಗೆ ಹಬ್ಬ ಆಚರಿಸಲು ನೈತಿಕ ಇರುವುದಿಲ್ಲ. ಇದಕ್ಕೆ ಇಸ್ಲಾಂ ಧರ್ಮದಲ್ಲಿ ಅಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತದೆ. ಹಬ್ಬಕ್ಕೆ ಈದ್ರ್ ಫಿತರ್ ಎಂದು ಕರೆಯಲಾಗುತ್ತದೆ. ಎಂದು
ಖತೀಬ (ಧರ್ಮ ಗುರು) ರಿಂದ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಸಮಸ್ತ ಮುಸ್ಲಿಂ ಬಂಧುಗಳು ಪ್ರಾರ್ಥನೆ ಸಲ್ಲಿಸಿದರು.