ಸಿಂಧನೂರು ಜುಲೈ 5. ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಬಸನಗೌಡ ಬಾದರ್ಲಿ ಅವರಿಗೆ ಶುಕ್ರವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಬಸವನಗೌಡ ಬಾದರ್ಲಿ ಅಭಿಮಾನಿ ರಮೇಶ ಬಪ್ಪೂರು ಅವರು ಹಾಗೂ ಅಭಿಮಾನಿಗಳು ಹೂ ಗೂಚ್ಚ ನೀಡುವ ಮೂಲಕ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ನಂತರ ಮಾತನಾಡಿದ ರಮೇಶ ಬಪ್ಪೂರು, ಬಸನಗೌಡ ಬಾದರ್ಲಿ ಅವರು ಸಿಂಧನೂರು ಕ್ಷೇತ್ರಕ್ಕೆ ಬಹಳಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಮಹಮಾರಿಯಲ್ಲಿ ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಆಕ್ಸಿಜನ್ ಬೆಡ್ಡಿನ ವ್ಯವಸ್ಥೆ, ಆಂಬುಲೆನ್ಸ್ ಆಹಾರ ಕಿಟ್ ಹಾಗೂ ರೂಂ ಗಳ ವ್ಯವಸ್ಥೆ ಮಾಡಿದ್ದರು. ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಅವರಿಗೆ ವಿಧಾನ ಸಭಾ ಟಿಕೆಟ್ ಕೈತಪ್ಪಿತ್ತು. ಆದರೆ ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಹೈಕಮಾಂಡ್ ಜನ ಸೇವೆ ಗುರುತಿಸಿ ಇಂದು ಬಸನಗೌಡ ಬಾದರ್ಲಿ ಅಣ್ಣನವರನ್ನು ಅವಿರೋಧವಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ನಮಗೆ ಶುಭ ಸುದ್ದಿಯನ್ನು ನೀಡಿದ್ದಾರೆ.
ನೂತನವಾಗಿ ವಿಧಾನ ಪರಿಷತ್ಗೆ ಅವಿರೋಧ ಆಯ್ಕೆ ಆಗಿರುವ ಶ್ರೀ ಬಸವನಗೌಡ ಬಾದರ್ಲಿ ಅವರು ಇದೇ ತಿಂಗಳು ಜುಲೈ 12 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿರೇಶ್ ಉಪ್ಪಲದೊಡ್ಡಿ, ಹುಲ್ಲೇಶ್ ರೆಡ್ಡಿ ವಕೀಲರು ಸೇರಿದಂತೆ ಅಭಿಮಾನಿಗಳು ಕಾರ್ಯಕರ್ತರು ಇದ್ದರು.