ಸಿಂಧನೂರು ಜುಲೈ.14.ಕೆ ಆರ್ ಎಸ್ ಪಕ್ಷ ರಾಯಚೂರು ಜಿಲ್ಲಾ ಹಾಗೂ ತಾಲೂಕ ಘಟಕ ಸಿಂಧನೂರು ವತಿಯಿಂದ ಕೆ. ಆರ್. ಎಸ್.ಪಕ್ಷದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ 49ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಹಣ್ಣು ಹಂಪಲು ಹಾಲು ಬ್ರೆಡ್ ಬಿಸ್ಕೆಟ್ ವಿತರಿಸುವ ಮೂಲಕ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿಕೆ.ಆರ್.ಎಸ್. ಪಕ್ಷದ ಜಿಲ್ಲಾಧ್ಯಕ್ಷರಾದ ನಿರುಪಾದಿ ಗೋಮರ್ಸಿ ಮಾತನಾಡಿ ನಮ್ಮ ಪಕ್ಷದ ಸಂಸ್ಥಾಪಕರಾದ ಹಿರಿಯರು ನಮ್ಮೆಲ್ಲರ ಮಾರ್ಗದರ್ಶಕರಾದ ರವಿ ಕೃಷ್ಣಾರೆಡ್ಡಿ ಅವರ 49ನೇ ವರ್ಷದ ಹುಟ್ಟುಹಬ್ಬವನ್ನು ಮುಂಜಾನೆ ಸಿಂಧನೂರಿನ ಸರ್ಕಾರಿ ತಾಲೂಕ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ರೋಗಿಗಳಿಗೆ ಹಾಲು ಬ್ರೆಡ್ ಹಣ್ಣುಗಳನ್ನು ವಿತರಿಸಿದವು. ನಂತರ ನಮ್ಮ ನಾಡಿನ ಕರುಣಾಮಯ ಕುಟುಂಬ ಎಂದೇ ಖ್ಯಾತಿ ಗಳಿಸಿರುವ ಕಾರುಣ್ಯ ಆಶ್ರಮದಲ್ಲಿ ನಮ್ಮ ರವಿ ಕೃಷ್ಣಾರೆಡ್ಡಿ ಅವರ ಅರ್ಥಪೂರ್ಣ ಹುಟ್ಟು ಹಬ್ಬದ ಆಚರಣೆ ನೆರವೇರಿಸುತ್ತಿರುವುದು ನಮ್ಮ ಪಕ್ಷದ ಸಾಮಾಜಿಕ ಜವಾಬ್ದಾರಿಯನ್ನು ಸಮಾಜಕ್ಕೆ ತೋರಿಸಿದೆ.
ಕಾರುಣ್ಯ ಆಶ್ರಮಕ್ಕೆ ಸರ್ಕಾರದ ಸೌಲಭ್ಯಕ್ಕಾಗಿ ನಿರಂತರ ಹೋರಾಟವನ್ನು ಹಮ್ಮಿಕೊಳ್ಳಲು ಪಕ್ಷದಿಂದ ನಿರ್ಧರಿಸಿದ್ದೇವೆ. ನೆಲೆ ಇಲ್ಲದ ಜೀವಿಗಳಿಗೆ ನೆಲೆ ಕಲ್ಪಿಸಿ ನಮ್ಮ ಸಿಂಧನೂರಿನ ಕರುಣಾಮಯಿ ಸಂಸ್ಕೃತಿಯನ್ನು ದೇಶಕ್ಕೆ ತೋರಿಸಿಕೊಟ್ಟ ಕೀರ್ತಿ ಕಾರುಣ್ಯ ಆಶ್ರಮಕ್ಕೆ ಸಲ್ಲುತ್ತದೆ. ನಾವು ಅದೆಷ್ಟೋ ಹೋರಾಟಗಳನ್ನು ನಮ್ಮ ಪಕ್ಷದಿಂದ ಹಮ್ಮಿಕೊಂಡಿದ್ದೇವೆ.
ಆದರೆ ಈ ಆಶ್ರಮಕ್ಕೆ ಹಮ್ಮಿಕೊಳ್ಳುವ ಹೋರಾಟ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಎಲ್ಲಾ ತಂದೆ ತಾಯಿಗಳ ಘನತೆ ಗೌರವವನ್ನು ಹೆಚ್ಚಿಸಿದಂತಾಗುತ್ತದೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಆಶ್ರಯ ಪಡೆದು ಜೀವನ ನಡೆಸುತ್ತಿರುವ ಈ ಕಾರುಣ್ಯ ಆಶ್ರಮದ ಜೀವಿಗಳನ್ನು ನಮ್ಮ ಸಿಂಧನೂರಿನ ಸಮಸ್ತ ನಾಗರಿಕರು ಅವರ ಹಿಂದಿನ ಘಟನೆಗಳನ್ನು ಮರೆಸುತ್ತಿದ್ದಾರೆ. ಇಂತಹ ಒಂದು ಕಾರುಣ್ಯ ಎನ್ನುವ ಕರುಣಾಮಯಿ ಕುಟುಂಬ ನಮ್ಮ ಸಿಂಧನೂರಿನಲ್ಲಿರುವುದು ನಮ್ಮ ತಾಲೂಕಿನ ಪುಣ್ಯಕ್ಷೇತ್ರ ಎಂದೆನಿಸಿಕೊಂಡಿದೆ. ಯಾವತ್ತಿಗೂ ಕೂಡ ಕೆಆರ್ಎಸ್ ಪಕ್ಷದಿಂದ ನಿರಂತರ ಸಹಾಯ ಸಹಕಾರ ಬೆಂಬಲ ಕಾರುಣ್ಯ ಆಶ್ರಮಕ್ಕೆ ದೊರೆಯುತ್ತದೆ.
ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಕೂಡ ಈ ಕಾರುಣ್ಯ ಆಶ್ರಮಕ್ಕೆ ಬೆನ್ನೆಲುಬಾಗಿರುತ್ತಾರೆ ಇಲ್ಲಿನ ಎಲ್ಲಾ ಹಿರಿಯ ಜೀವಿಗಳ ಆಶೀರ್ವಾದ ನಮ್ಮ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಮೇಲಿರಲಿ ಎಂದು ಭಾವನಾತ್ಮಕವಾಗಿ ಮಾತನಾಡಿ ಆಶ್ರಮದ ಸೇವೆಗೆ ಶಕ್ತಿ ತುಂಬಿದರು.
ನಂತರ ತಾಲೂಕಾಧ್ಯಕ್ಷರಾದ ಚನ್ನಬಸವ ಸೋಮಲಾಪುರ ಕಾರುಣ್ಯ ಆಶ್ರಮ ಹುಟ್ಟಿದಾಗಿನಿಂದಲೂ ಸಹ ವೈಯಕ್ತಿಕವಾಗಿ ನಾವು ಜೊತೆಗಿದ್ದೇವೆ ಆದರೆ ಮುಂದಿನ ದಿನಮಾನಗಳಲ್ಲಿ ನಾವು ಪಕ್ಷದ ವತಿಯಿಂದ ಬೃಹತ್ ಹೋರಾಟ ಸರ್ಕಾರದ ಸವಲತ್ತುಗಳನ್ನು ಕೊಡಿಸಲು ನಿರಂತರ ಪ್ರಯತ್ನ ಮಾಡುತ್ತೇವೆ. ಈ ಕಾರುಣ್ಯಾಶ್ರಮ ನಮ್ಮ ಸ್ವಂತ ಕುಟುಂಬ ಇದ್ದ ಹಾಗೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೆ.ಆರ್.ಎಸ್. ಪಕ್ಷದ ಕಾರ್ಯದರ್ಶಿಗಳಾದ ಶರಣಪ್ಪ ಗೊರೆಬಾಳ. ಶರಣಪ್ಪ ಬೇರ್ಗಿ. ಜಗದೀಶ ಸುಲ್ತಾನಪುರ. ಹಾಗೂ ತಾಲೂಕ ಉಪಾಧ್ಯಕ್ಷರಾದ ಶರಣಪ್ಪ ಹಂಚಿನಾಳ. ನಗರ ಘಟಕದ ಅಧ್ಯಕ್ಷರಾದ ಕೃಷ್ಣ ಸುಕಾಲಪೇಟೆ. ಮುಖಂಡರುಗಳಾದ ಸಿದ್ದರಾಮಪ್ಪ ಎಲೆಕೂಡ್ಲಿಗಿ ಬಸವರಾಜ ಹೆಗ್ಗಾಪುರ ಓಣಿ ಪಂಪಾಪತಿ ಸುಲ್ತಾನಪುರ, ದ್ಯವಣ್ಣ ಪುಲದಿನ್ನಿ ಮತ್ತು ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ.ಸುಜಾತ ಹಿರೇಮಠ. ಇಂದುಮತಿ ಏಕನಾಥ ಗೀತಾ ಕುಲಕರ್ಣಿ. ಬಸವರಾಜ ಸ್ವಾಮಿ ಹಚ್ಚೋಳ್ಳಿ ಹರ್ಷವರ್ಧನ. ಮಹಾನಂದಿ ಅನೇಕರು ಉಪಸ್ಥಿತರಿದ್ದರು