ರಾಯಚೂರು,ಏ.18(ಕವಾ):- ನರೇಗಾ ಕೂಲಿಕಾರರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಲಾದ ವಿಶೇಷವಾದ ಮತದಾನದ ಹಕ್ಕನ್ನು ಮತದಾನ ಮಾಡುವ ಮೂಲಕ ಚಲಾಯಿಸಬೇಕೆಂದು ಐಇಸಿ ಸಂಯೋಜಕ ಧನರಾಜ ಅವರು ಹೇಳಿದರು.
ಅವರು ಏ.18ರ(ಮಂಗಳವಾರ) ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಂದಕಗಳು ತೆಗೆಯುವ ಕೂಲಿಕಾರರಿಗೆ, ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆ ಮತ್ತು ಮಹಾತ್ಮ ಗಾಂಧಿ ನರೇಗಾ ಕೂಲಿಕಾರರಿಗೆ ಐಇಸಿ ಭಾಗವಾಗಿ ಉಚಿತ ಆರೋಗ್ಯ ತಪಾಸಣಾ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಮೇ 10 ರಂದು ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ, ಮತದಾನದ ಮೂಲಕ ಜಿಲ್ಲೆಯ ವಾಗ್ದಾನವನ್ನು ಯಶಸ್ವಿಯಾಗಿ ಪೂರೈಸೋಣ ಎನ್ನುವುದರೊಂದಿಗೆ ಮತದಾನದ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.
ಈ ಸಂದರ್ಭದಲ್ಲಿ ಪಿಡಿಒ ಮಹ್ಮದ್ ಜಹೀರ್, ಜಿಐಎಸ್ ಪರಿಣಿತ ಜಗದೀಶ್ ಆಪ್ತ ಸಮಾಲೋಚಕರ ಈರಣ್ಣ, ಐಸಿಟಿಸಿ ರಾಮಕೃಷ್ಣ, ಸಿಹೆಚ್ಒ ಅನೀಲ್ ಸ್ವಾಮಿ, ಕೆಹೆಚ್ಟಿಪಿ ಮಾರೆಪ್ಪ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಮತ್ತು ನರೇಗಾ ಮೇಟ್ ಕೂಲಿಕಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.