ಡಿಸೆಂಬರ್ 19 .ಕರ್ನಾಟಕ ರಾಜ್ಯ ಖಾಸಗಿ ಮತ್ತು ಟ್ಯಾಕ್ಸಿ ವಾಹನ ಚಾಲಕರ ಸಂಘ(ರಿ) ಬೆಂಗಳೂರು.ತಾಲೂಕು ಘಟಕ ಮಸ್ಕಿ* ವತಿಯಿಂದ ಈ ದಿನ ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿಕೊಂಡು ಮಸ್ಕಿ ತಾಲೂಕಿನ *ದಂಡಾಧಿಕಾರಿಗಳು ಮತ್ತು ತಹಶೀಲ್ದಾರರು, ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ರ* ಮುಂದೆ ಕರ್ನಾಟಕ ರಾಜ್ಯ ಖಾಸಗಿ ಮತ್ತು ಟ್ಯಾಕ್ಸಿ ವಾಹನ ಚಾಲಕರ ಸಂಘ(ರಿ) ಬೆಂಗಳೂರು. ತಾಲೂಕು ಘಟಕ ಮಸ್ಕಿ
ಮಸ್ಕಿ ತಾಲೂಕಿನ *ಎಲ್ಲಾ ಟ್ಯಾಕ್ಸಿ ,ಕಾರು ಮತ್ತು ಜಿಪುಗಳ ಚಾಲಕರು* ಸೇರಿಕೊಂಡು ತಮ್ಮ ಅಳಲನ್ನು ತೋಡಿಕೊಂಡು ನಾವು ಸುಮಾರು ವರ್ಷಗಳಿಂದ ಹಳೆ ಬಸ್ ನಿಲ್ದಾಣದ ಹತ್ತಿರವಿರುವ *ಗಚ್ಚಿನಮಠದ* ಹತ್ತಿರ ನಮ್ಮ ವಾಹನಗಳನ್ನು ನಿಲ್ಲಿಸುತ್ತಾ ಬಂದಿದ್ದು ಆದರೆ ಈಗ ವಿಭಜಕ ಬಂದಿರುವುದರಿಂದ ನಮ್ಮ ವಾಹನಗಳು ನಿಲ್ಲಲು ನೆಲೆ ಇಲ್ಲದಂತಾಗಿದೆ.
ಇದರಿಂದಾಗಿ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದರಿಂದ ನಮಗೆ ತೊಂದರೆ ಆಗುತ್ತಿದ್ದು ಅದಕ್ಕಾಗಿ *ಹಳೆ ಬಸ್ ನಿಲ್ದಾಣ* ಕ್ಕೆ ಹತ್ತಿರವಿರುವ ಸೂಕ್ತ ಜಾಗವನ್ನು ಶಾಶ್ವತವಾಗಿ ಖಾಸಗಿ ವಾಹನಗಳ ನಿಲ್ದಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯನ್ನು ಸಲ್ಲಿಸುತ್ತಾ ನಾವು ಇದೇ ವಿಚಾರಕ್ಕೆ ಸಂಬಂಧಿಸಿದಂತೆ *ನಮ್ಮ ಸಂಘಟನೆಯು ಸುಮಾರು ವರ್ಷಗಳಿಂದ* ಹೋರಾಟವನ್ನು ಮಾಡುತ್ತಾ ಸಂಬಂಧಪಟ್ಟವರಿಗೆ ಮನವಿಯನ್ನು ಸಲ್ಲಿಸುತ್ತಾ ಬಂದಿದ್ದೇವೆ ಎಂದು ನೆನಪಿಸಿಕೊಟ್ಟರು.
ಆದರೆ ಯಾವುದೇ ರೀತಿಯಲ್ಲಿ ಪ್ರಯೋಜನ ಆಗಿಲ್ಲ ಈಗಲಾದರೂ ತಾವುಗಳು ನಮ್ಮ ಮೇಲೆ ಕರುಣೆ ತೋರಿಸಿ ನಮ್ಮ ಖಾಸಗಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಈ *ಸಂಘಟನೆಯ ಅಧ್ಯಕ್ಷರಾದ ನೀರುಪಾದಯ್ಯ ಸ್ವಾಮಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನಾಯಕ* ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
*ಹನುಮಂತಪ್ಪ ಚಿಕ್ಕಕಡಬೂರ*