ರಾಯಚೂರು,ಅ.೧೦- ಬರುವ ಈಶಾನ್ಯ ಪದವೀಧರ ಮತಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ಗೆ ನಡೆಯುವ ಚುನಾವಣೆ ಯಲ್ಲಿ ಮತ ಚಲಾಯಿಸಲು ಮತದಾ ರರು ತಮ್ಮ ಹೆಸರುಗಳನ್ನು ನೊಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಅಮರೇಶ ಸಾಗರ ಸಮಾಜಸೇವಕರು ಹಾಗೂ ಪತ್ರಿಕಾ ಪ್ರತಿನಿಧಿ ಅವರು ಮನವಿ ಮಾಡಿದರು.
ಮತದಾರರು ನೊಂದಣಿ ಈಗಾರಲೇ ಆರಂಭವಾಗಿದೆ ಕಡ್ಡಾಯವಾಗಿ ಈಶಾನ್ಯ ಪದವೀ ಧರರ ಮತಕ್ಷೇತ್ರದ ಎಲ್ಲ ಪದವೀಧರರು ತಮ್ಮ ತಮ್ಮ ಹೆಸರುಗಳನ್ನು ನೊಂದಣಿ ಮಾಡಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಈಗಾಗಲೇ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆ ಎಂದುಕೊAಡು ಪದವೀಧರರು ತಮ್ಮ ಹೆಸರು ನೋಂದಣಿ ಮಾಡಿ ಕೊಳ್ಳದೇ ಇದ್ದರೆ ಅವರು ಮತದಾ ನದಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪದವೀ ಧರರೂ ಸಹ ತಮ್ಮ ಹೆಸರು ನೊಂ ದಣಿ ಮಾಡಿಕೊಳ್ಳಬೇಕು .
ಈಶಾನ್ಯ ಪದವೀಧರ ಮತಕ್ಷೇ ತ್ರದ ವ್ಯಾಪ್ತಿಯಲ್ಲಿ ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ್, ಯಾದಗಿರಿ, ವಿಜಯನಗರ ಬಳ್ಳಾರಿ ಮುಂತಾದ ಏಳು ಜಿಲ್ಲೆಗಳು, ೫೧ ತಾಲ್ಲೂಕುಗಳು, ೪೯ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಈ ಎಲ್ಲ ಜಿಲ್ಲೆಗಳ ಅರ್ಹ ಪದವೀಧರರು ತಮ್ಮ ಹೆಸರುಗಳನ್ನು ಸಂಬAಧಿಸಿದ ಕಚೇರಿಗಳಲ್ಲಿ ನೊಂದಣಿ ಮಾಡಿಕೊ ಳ್ಳಬೇಕು ಎಂದು ಅವರು ಪದವಿಧ ರರಲ್ಲಿ ಮನವಿ ಮಾಡಿದರು.
ಏಳು ಜಿಲ್ಲೆಗಳಲ್ಲಿ ಕಲಬುರ್ಗಿ ಹಾಗೂ ಬಳ್ಳಾರಿ ನಗರಗಳಲ್ಲಿ ಮಹಾನಗರ ಪಾಲಿಕೆ ಇದ್ದು, ಆ ಪಾಲಿಕೆಯಲ್ಲಿ ಆಯಾ ವ್ಯಾಪ್ತಿಯ ಪದವೀಧರರು ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು. ಇನ್ನು ತಾಲ್ಲೂಕು ಕೇಂದ್ರಗಳಲ್ಲಿ ಆಯಾ ತಹಸಿಲ್ದಾರ್ ಕಚೇರಿಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳ ಬೇಕು ಎಂದು ಅವರು ಹೇಳಿದರು.
೨೦೨೦ರ ನವೆಂಬರ್ ೧ರೊಳಗೆ ಪದವಿ ಮುಗಿಸಿದವರು ತಮ್ಮ ಹೆಸರು ನೊಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಈ ಹಿಂದೆ ೨೦೧೮ರಲ್ಲಿ ಹಾಗೂ ಅದಕ್ಕಿಂತ ಮುಂಚಿತವಾಗಿ ನೊಂದಣಿ ಮಾಡಿಸಿಕೊಂಡವರೂ ಸಹ ಪುನ: ನೊಂದಣಿ ಮಾಡಿಸಿ ಕೊಳ್ಳಬೇಕು ಎಂದು ಅವರು ತಿಳಿಸಿದರು.