ಸಿಂಧನೂರು ಜೂಲೈ 13.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಂಧನೂರು ಘಟಕದ ವತಿಯಿಂದ ತಾಲೂಕಾದ್ಯಂತ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಲಭ್ಯ ಇಲ್ಲ, ಅದರಲ್ಲೂ ದಿನ ನಿತ್ಯ ಬಸ್ ಗಳ ಸಂಪರ್ಕ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ,ಪ್ರಯಾಣಿಕರಿಗೆ,ಜನ ಸಾಮಾನ್ಯರಿಗೆ ಬಹಳಷ್ಟು ಅನಾನುಕೂಲ ಆಗುತ್ತಿದ್ದು ಅದರಲ್ಲೂ ಗೋರೆಬಾಳ ಗ್ರಾಮದ ವಿದ್ಯಾರ್ಥಿಗಳಿಗೆ ದಿನನಿತ್ಯ ಬಸ್ ಗಾಗಿ ಕಾಯುವಂತ , ಶಾಲಾ ಕಾಲೇಜುಗಳ ಎರಡು ಮೂರು ತರಗತಿಗಳು ತಪ್ಪಿಸುವ ಪರಿಸ್ಥಿಸಿ ನಿರ್ಮಾಣ ಆಗುತ್ತಿದ್ದು ಈಗಾಗಲೇ ಸಂಭಂದಪಟ್ಟ ಸಾರಿಗೆ ಸಂಸ್ಥೆಯ ಇಲಾಖೆಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರವಾಗಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಕೆ ಗೊಮರ್ಸಿ ರಾಜ್ಯ ಸರ್ಕಾರದ ಸ್ತ್ರೀಶಕ್ತಿ ಯೋಜನೆಯಿಂದ ಬೆಳಗಿನ ಸಮಯದಲ್ಲಿ ಸರ್ಕಾರಿ ಬಸ್ ಗಳು ತುಂಬಿ ತುಳುಕುತಿದ್ದೂ ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ನಗರ ಪ್ರದೇಶಕ್ಕೆ ಹೋಗಿ ತಮ್ಮ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಅವಕಾಶದಿಂದ ವಂಚಿತಾರಾಗುತ್ತಾರೆ .ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆ ಸೇರಿ ರಾಜ್ಯದ ಬೋಕ್ಕಸವನ್ನು ಯಾವುದು ಯಾವುದೋ ಕೆಲಸಕ್ಕೆ ಉಪಯೋಗಿಸುತ್ತಿದ್ದು ಅದರಿಂದ ಯಶಸ್ಸು ಕಾಣದೆ ಇದ್ದು ರಾಜ್ಯ ಸರ್ಕಾರ ಹಾಗೂ ಇಲಾಖೆಗೆ ವಿದ್ಯಾರ್ಥಿಗಳ ಮೇಲೆ ಪ್ರೀತಿ ,ಕಾಳಜಿ ವಿಶ್ವಾಸ ಇದ್ದರೆ ಮಕ್ಕಳ ಉನ್ನತ ಶೈಕ್ಷಣಿಕ ಭವಿಷ್ಯಕ್ಕಾಗಿ ಸಾರಿಗೆ ಇಲಾಖೆಯಿಂದ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು . ನಮ್ಮ ಮನವಿಗೆ ಆದಷ್ಟು ಬೇಗ ಪರಿಹಾರ ನೀಡದಿದ್ದರೆ ವಿದ್ಯಾರ್ಥಿಗಳು,ಮತ್ತು ಅವರ ಪಾಲಕರ ಜೊತೆ ಸೇರಿ ಸಿಂಧನೂರು ಟು ಗಂಗಾವತಿ ಮುಖ್ಯ ರಸ್ತೆ ತಡೆಗಟ್ಟವುದು ಅನಿವಾರ್ಯ ಆಗುತ್ತದೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಶರಣಬಸವ,ಅಯ್ಯಪ್ಪ,ಕನಕ್ಕಪ್ಪ,ವೀರೇಶ್ ,ಅಭಿಷೇಕ್ ,ರಾಜೇಶ್ವರಿ,ಕಲ್ಪನಾ,ಲಕ್ಷಿ ,ಜ್ಯೋತಿ ಇದ್ದರು