ಸಿಂಧನೂರು ನವಂಬರ್ 01.ನಗರದ ಎಲ್ ಬಿ ಕೆ ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿ 50ನೇ ವಸಂತದ ಸಂಭ್ರಮದ ಕನ್ನಡ ರಾಜ್ಯೋತ್ಸವದ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪರಶುರಾಮಲ್ಲಾಪುರವರು ಧ್ವಜಾರೋಹಣವನ್ನು ನೆರವೇರಿಸಿದರು ಹಾಗೆ ಕನ್ನಡಾಂಬೆಯ ಭಾವರೂಪಕ್ಕೆ ಮಾಲಾರ್ಪಣೆ ಮಾಡಿ ಕನ್ನಡ ನಾಡಿನ ಪರಂಪರೆಯನ್ನು ಬಿಂಬಿಸುವಂತಹ ಕುವೆಂಪು, ಬೇಂದ್ರೆ, ಅಡಿಗರು, ಡಿ.ಎಸ್ ಕರ್ಕಿ , ಮುಂತಾದ ಕನ್ನಡ ಕವಿಗಳು ರಚಿಸಿದ ಕನ್ನಡ ಗೀತೆಗಳಲ್ಲಿ ಮೂಡಿ ಬಂದಿರುವ ಕನ್ನಡಿಗರ ಭಾವನೆಗಳನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತಹ ಕನ್ನಡದ ಹಾಡುಗಳನ್ನು ಮಕ್ಕಳಿಗೆ ಕೇಳಿಸಿ, ಹಾಡಿಸಿ ನೃತ್ಯದ ಮೂಲಕ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕಿ ಶ್ರೀಮತಿ ಶಾಂತ ಪಾಟೀಲ್ ಅವರು ಮಾತನಾಡಿ ಕನ್ನಡ ನಾಡು ಕನ್ನಡ ಕನ್ನಡಿಗ ಮತ್ತು ಕರ್ನಾಟಕ ಈ ಪದಗಳು ಕನ್ನಡ ಸಾಂಸ್ಕೃತಿಕ ಅಸ್ಮಿತೆಗೆ ಸುದೀರ್ಘವಾದ ಇತಿಹಾಸವಿದ್ದು. ಇಂತಹ ನಾಡಲ್ಲಿ ಪಂಪ, ಪೊನ್ನ, ರನ್ನ, ಕುಮಾರವ್ಯಾಸ ಮುಂತಾದವರು ಕಟ್ಟಿಕೊಟ್ಟ ಕನ್ನಡಿಗರ ಸ್ವಾಭಿಮಾನದ ಕೆಚ್ಚು, ಕನ್ನಡ ನಾಡು, ಕನ್ನಡ ಭಾಷೆ ,ಜಲ, ಬಹುತ್ವ ಸಂಸ್ಕೃತಿಗೆ ಧಕ್ಕೆ ಬರದಂತೆ ಪರಭಾಷೆಗಳನ್ನು ಗೌರವಿಸುತ್ತಾ, ನಮ್ಮ ಕನ್ನಡ ಭಾಷೆಯನ್ನು ತನುಕನ್ನಡ, ಮನ ಕನ್ನಡ, ಎನ್ನುವ ಹಾಗೆ ಸದಾ ಕನ್ನಡದಲ್ಲಿ ಧ್ಯಾನಸ್ಥರಾಗಿ ಇರಬೇಕು. ಈ ಕನ್ನಡ ನಾಡಿನ ಅಸ್ಮಿತೆ ಉಳಿಸಲು ನಾವೆಲ್ಲರೂ ಹೆಚ್ಚೆಚ್ಚು ಕನ್ನಡವನ್ನು ಮಾತನಾಡಬೇಕು ಆ ಮೂಲಕ ಕನ್ನಡವನ್ನು ಬೆಳೆಸಬೇಕು ಕನ್ನಡವೇ ನಮ್ಮ ಉಸಿರಾಗಬೇಕು ಕನ್ನಡ ನಮ್ಮ ಅನ್ನದ ಭಾಷೆವಾಗಬೇಕು, ಉದ್ಯೋಗದ ಭಾಷೆಯಾಗಬೇಕು. ಕೇವಲ ಕನ್ನಡ ಎನ್ನಡ ಎನ್ನದೆ ಅದರಲ್ಲಿ ನಮ್ಮ ಕನ್ನಡ ಕಳೆದುಹೋಗದೆ, ಕನ್ನಡ ಮೈಗಟ್ಟಿದ ಚರ್ಮದಂತೆ ಪ್ರತಿಯೊಬ್ಬ ಕನ್ನಡಿಗನ ಕಣಕಣದಲ್ಲಿ ಕನ್ನಡದ ಕಂಪು ಹೆಸರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿ 50 ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ನೋಬೆಲ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಆಶುಭಾಷಣ, ನೃತ್ಯ ,ರಸಪ್ರಶ್ನೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರಥಮ, ದ್ವಿತೀಯ ,ತೃತೀಯ, ಸ್ಥಾನವನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಡಾ. ಅರುಣ್ ಕುಮಾರ್ ಬೇರ್ಗಿ ಉಪಾಧ್ಯಕ್ಷರಾದ ಶಂಕರ ಪತ್ತಾರ್ , ಖಜಾಂಚಿಗಳಾದ ಜಯಪ್ಪ ಗೊರೆಬಾಳ, ಪ್ರಾಂಶುಪಾಲರಾದ ಆನಂದ ಎಸ್ , ಎಲ್ ಬಿ ಕೆ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ನಾಗರಾಜ ಮರಕುಂಬಿ ಹಾಗೂ ಉಪನ್ಯಾಸಕರಾದ ಹೊನ್ನಪ್ಪ ಬೆಳಗುರ್ಕಿ ಶಿವರಾಜ, ವಸಂತ ಕುಮಾರ, ಶಿವ ಕುಮಾರ, ವೆಂಕೋಬ, ರವಿ ಸಿಂಧನೂರು, ವಿಶ್ವನಾಥ, ದೇವರಾಜ, ಉಪನ್ಯಾಸಕಿ ಜ್ಯೋತಿ , ಶ್ರೀಮತಿ ಗಿರಿಜಾ ಹಾಗೂ ಸಿಬ್ಬಂದಿಯಯೇತರ ಕೃಷ್ಣ, ಬಸವರಾಜ ಪದವಿ ಪೂರ್ವ ಮತ್ತು ಪದವಿ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.