ಏಪ್ರಿಲ್ 08.ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ೧ ನೇ ವಾರ್ಡಿನ ಬಸವನಪೇಟೆಯ ಸಾರ್ವಜನಿಕರು ಮಾರ್ಚ್ ೨೩ ರಂದು ಸಿ.ಸಿ ರಸ್ತೆ,ಕುಡಿಯುವ ನೀರು,ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಎಚ್ಚರಕೆ ನೀಡಿದ್ದರು.ಸ್ಥಳಕ್ಕೆ ಗ್ರಾ.ಪಂ ಸದಸ್ಯರಾದ ಸುಜಾತ ಕುಮಾರ್ಗೌಡರನ್ನು ಕರೆಯಿಸಿ ಅವರ ವಿರುದ್ದ ಹೌಹಾರಿದ್ದರು.ಈ ಸಂಬಂಧ ಮಾರ್ಚ ೨೫ ರಂದು ವಿಜಯವಾಣಿಯ ಪತ್ರಿಕೆಯಲ್ಲಿ ವರದಿ ಬಿತ್ತರಿಸಿತ್ತು.ಶನಿವಾರ ಬಸವನಪೇಟೆಯ ಸ್ಥಳಕ್ಕೆ ಚುನಾವಣಾಧಿಕಾರಿಗಳು,ತಾಲೂಕು ಅಧಿಕಾರಿಗಳು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು.
ಗ್ರಾಮಸ್ಥರಾದ ವಡ್ಡರ ಹುಲಿಗೆಮ್ಮ ಮಾತನಾಡಿ ಜನಪ್ರತಿನಿಧಿಗಳಾಗಲೀ,ಅಧಿಕಾರಿಗಳಾಗಲೀ ಬರೀ ಜೊಳ್ಳು ಆಶ್ವಾಸನೆ ನೀಡಿ ಸಬೂಬು ನೀಡುತ್ತಾ ಬಂದವರೇ ಜಾಸ್ತಿ,ಇಲ್ಲಿ ಆಯ್ಕೆಯಾಗಿ ಬಂದವರು ಇದೇ ರೀತಿ ಹೇಳುತ್ತಾ ಬಂದಿದ್ದಾರೆ.ಸರಿಯಾದ ರೀತಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸದಿದ್ದಲ್ಲಿ ನಾವು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಚುನಾವಣಾ ಅಧಿಕಾರಿಗಳ ಮುಂದೆ ಜೋರಾಗಿ ಹೇಳಿದರು.
ತಾಲೂಕು ಚುನಾವಣಾಧಿಕಾರಿಗಳಾದ ಕೆ.ಹೆಚ್.ಸತೀಸ್ ಮಾತನಾಡಿ ಸಂವಿಧಾನಬದ್ದ ಹಕ್ಕಾದ ಮತದಾನವನ್ನು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಎಲ್ಲರೂ ಕೂಡ ಮತದಾನ ಮಾಡಿ,ಮಾಡಿಸಿ ಎಂದು ವಾಗ್ದಾನ ಮಾಡಿ ತಿಳಿಸಿದರು.ನಿಮಗೆ ೧೦ ದಿನಗಳೊಗೆ ಜೆಜೆಎಂ ಯೋಜನೆಯ ಮನೆಮನೆಗೆ ನಳದ ನೀರು,ನರೇಗಾದಡಿಯಲ್ಲಿ ಗ್ರಾಮಾಡಳಿತದ ಜೊತೆಗೆ ಮಾತನಾಡಿ ಸಿ.ಸಿ ರಸ್ತೆಯನ್ನು ಹಾಕಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.ಇನ್ಮುಂದೆ ಇತರಹದ ಸಮಸ್ಯೆ ಆಗದಂತೆ ಎಚ್ಚರ ವಹಿಸುತೇವೆ ಎಂದರು.
ನಂತರ ಎರಡು ವರ್ಷದ ಅಂದರೆ ಸೆ ೨ರಂದು ಬಸವನಪೇಟೆಯ ಕುಂಬಾರು ತಿಪ್ಪೇಶ್ನ ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದರು.ಕುಟುಂಬದ ಮಕ್ಕಳ ತಾಯಿಯಾದ ಶ್ರೀದೇವಿಯನ್ನು ಮಾತನಾಡಿಸಿ ಧೈರ್ಯ ತುಂಬಿದರು.ಇನ್ನೊಬ್ಬ ಮಗುವಿನ ಶಿಕ್ಷಣವನ್ನು ಜವಬ್ದಾರಿಯಿಂದ ಓದಿಸಿ ಎಚ್ಚರಿಕೆ ವಹಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ತಹಿಶಿಲ್ದಾರಾದ ಎನ್.ಆರ್ ಮಂಜುನಾಥ ಸ್ವಾಮಿ,ತಾ.ಪಂ ಇಒ ಮಡಗಿನ ಬಸಪ್ಪ,ಸೆಕ್ಟರ್ ಅಧಿಕಾರಿ ರಾಘವೇಂದ್ರವರ್ಮ,ಪಿಡಿಒ ಶಿವಕುಮಾರ್ ಕೋರಿ,ಗ್ರಾಮ ಲೆಕ್ಕಾಧಿಕಾರಿಗಳಾದ ಕರ್ಣಂ ನಾಗರಾಜ್ ಇತರರು ಇದ್ದರು.