ಬಡವರ ಬಾರುಕೋಲು ಸುದ್ದಿ
ಮಸ್ಕಿ : ತಾಲೂಕಿನಲ್ಲಿ 2024-25 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಜೋಳವನ್ನು ರೈತರಿಂದ ಖರೀದಿ ಮಾಡುವ ಸಲುವಾಗಿ ಕರ್ನಾಟಕ ಸರ್ಕಾರದ ಆದೇಶದಂತೆ ಭತ್ತ ಮತ್ತು ಜೋಳವನ್ನು ನೀಡಲು ಇಚ್ಛಿಸುವ ರೈತಭಾಂದವರು ತಮ್ಮ ಹತ್ತಿರದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್,ಕೃಷಿ ಇಲಾಖೆಯವರು ನೀಡಿರುವ ಎಫ್ಐಡಿ ಸಂಖ್ಯೆಯೊಂದಿಗೆ ಸದರಿ ನೋಂದಣಿ ಕೇಂದ್ರಗಳಲ್ಲಿ ದಿನಾಂಕ:31.12.2024 ರೊಳಗಾಗಿ ನೊಂದಣಿ ಮಾಡಿಕೊಳ್ಳಲು ತಿಳಿಸಿದೆ ಹಾಗೂ ನೊಂದಣಿ ಮಾಡಿಕೊಂಡಿರುವ ರೈತರಿಂದ ಖರೀದಿ ಪ್ರಕ್ರಿಯೆಯನ್ನು ದಿನಾಂಕ : 01.01.2025 ರಿಂದ 31.03.2025 ರವರೆಗೂ ಕೈಗೊಳ್ಳಲಾಗುವುದು,ಆದ್ದರಿಂದ ರೈತಭಾಂದವರು ತಾವು ಬೆಳೆದ ಬೆಳೆಯನ್ನು ಮಾತ್ರ ಖುದ್ದಾಗಿ ಖರೀದಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿ ಮಾರಾಟ ಮಾಡಿಕೊಳ್ಳಬೇಕು.ಸದರಿ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸೂಚಿಸಿದೆ.
ಅದಕ್ಕೋಸ್ಕರ ರೈತಭಾಂದವರು 2024-25ನೇ ಸಾಲಿಗೆ ಮಸ್ಕಿ ತಾಲ್ಲೂಕಿನಲ್ಲಿ ಒಟ್ಟು 6 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.ಅವುಗಳ ವಿವರ ಈ ರೀತಿಯಾಗಿದೆ.
1.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಮಸ್ಕಿ ಮೊಬೈಲ್ ನಂ: 9902204028,
2.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಪಾಮನಕಲ್ಲೂರು ಮೊಬೈಲ್ ನಂ: 9731559317,
3.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಬಳಗಾನೂರು ಮೊಬೈಲ್ ನಂ: 9449799412,
4.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಗುಡದೂರು ಮೊಬೈಲ್ ನಂ: 8310483773,
5.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಹಾಲಾಪೂರು
ಮೊಬೈಲ್ ನಂ : 9686376577,
6.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ತೊರಣದಿನ್ನಿ ಮೊಬೈಲ್ ನಂ : 8431620131.
ಆದ್ದರಿಂದ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಗರಿಷ್ಠ 50 ಕ್ವಿಂಟಾಲ್ ಭತ್ತ ಹಾಗೂ ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ 150 ಕ್ವಿಂಟಾಲ್ ಬಿಳಿಜೋಳ ಖರೀದಿಸಲಾಗುವುದು.ಅದರಂತೆ ಧಾನ್ಯ ಹಾಗೂ ದರಗಳ ವಿವರ ಕೆಳಗಿನಂತಿದೆ.
ಧಾನ್ಯಗಳ ದರ(ಪ್ರತಿ ಕ್ವಿಂಟಾಲ್ಗೆ ರೂ.ಗಳಲ್ಲಿ)
ಭತ್ತ-ಸಾಮಾನ್ಯ-2300,
ಭತ್ತ-ಗ್ರೇಡ್-ಎ-2320,
ಬಿಳಿಜೋಳ-ಹೈಬ್ರಿಡ್-3371,
ಬಿಳಿಜೋಳ-ಮಾಲ್ದಂಡಿ-3421,ಇನ್ನೂ ಕೃಷಿ ಇಲಾಖೆಯವರು ಸಿದ್ದಪಡಿಸಿರುವ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಅಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು.ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆಯಿದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ಸೂಚಿಸಿದೆ.
ವರದಿ : ಎಚ್.ಕೆ.ಬಡಿಗೇರ್
ಗರ್ಭಿಣಿಯರ ಸರಣಿ ಸಾವಿನ ಹಿನ್ನೆಲೆ ಬಿಜೆಪಿಯ ಮುಖಂಡ ಕೆ ಕರಿಯಪ್ಪ ತಾ. ಸಾರ್ವಜನಿಕ ಆಸ್ಪತ್ರೆಗೆ ಭೇಟಿ