ಏ 05 ಕಲಬುರ್ಗಿ ಜಿಲ್ಲೆ ಅಫ್ಜಲಪುರ್ ತಾಲೂಕಿನ ಕ್ಯೂ ಕ್ಯೂ ಸರ್ಕಾರಿ ಪ್ರೌಢಶಾಲೆ ಗೊಬ್ಬುರ್ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೈಕ್ರೋ ಜೆರಾಕ್ಸ್ ಮತ್ತು ಚೀಟಿಗಳ ಸಹಾಯದಿಂದ ಸಾಮೂಹಿಕ ನಕುಲು ಮಾಡಿ ಮೈಕ್ರೋ ಜೆರಾಕ್ಸ್ ಪುಸ್ತಕ ಚೀಟಿಗಳನ್ನು ಎಸೆದಿದ್ದು ಕಂಡುಬಂದಿರುತ್ತದೆ.
ಪರೀಕ್ಷೆ ಕೇಂದ್ರದ ಸುತ್ತಲೂ ಎರಡು ನೂರು ಮೀಟರ್ ದೂರದೇವರಿಗೂ ಪರೀಕ್ಷಾ ನಿಯಮದಂತೆ ನಿಷೇಧ್ನೆ ಜಾರಿ ಇರುತ್ತದೆ ಆದರೆ ಈ ನಿಷೇಧಜ್ಞೆಯನ್ನು ಮೀರಿ ಹೊರಗಡೆಯಿಂದ ಸಾರ್ವಜನಿಕರು ನಿಷೇಧಿತ ಪ್ರದೇಶದಲ್ಲಿ ಪ್ರವೇಶ ಮಾಡುತ್ತಿದ್ದಲ್ಲಿ ವಿಷಯವನ್ನು ಕೂಡಲೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಾಗಿರುವುದು ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಕರ್ತವ್ಯ ಆಗಿರುತ್ತದೆ.
ಆದರೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಪರೀಕ್ಷೆಯ ಕೇಂದ್ರದ ಮುಖ್ಯಸ್ಥರ ಶಾಮೀಲಾ ಆಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ ಈ ರೀತಿ ಸಾಮೂಹಿಕ ನಕುಲು ಮಾಡಲು ಅವಕಾಶ ಕಲ್ಪಿಸಿದ ಈ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕಸ್ಟೋಡಿಯನ್ ಸ್ಥಾನಿಕ ಜಾಗೃತ ದಳ ಹಾಗೂ ಕೋಣೆ ಮೇಲ್ವಿಚಾರಕರಗಳ ಕರ್ತವ್ಯ ನಿರ್ಲಕ್ಷತಿ ಹಾಗೂ ಪರೀಕ್ಷೆಯ ಪಾವಿತ್ರತೆಯನ್ನು ಕಾಪಾಡುವಲ್ಲಿ ವಿಫಲತೆಯ ಕಾರಣ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಪರೀಕ್ಷಾ ಕೇಂದ್ರ ಸಂಖ್ಯೆ 005 ಕ್ಯೂ ಕ್ಯೂ ಸರ್ಕಾರಿ ಪ್ರೌಢಶಾಲೆ ಗೊಬ್ಬುರ್ ಬಿ ತಾಲೂಕು ಅಫ್ಜಲ್ ಪುರ್ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ ಮಾಡಿಕೊಟ್ಟ ಪರೀಕ್ಷಾ ಪಾವಿತ್ರಿತೆಯನ್ನು ವಿಫಲಗೊಳಿಸಿ ಕರ್ತವ್ಯ ಲೋಭಯಸಿದ ಆರೋಪದ ಮೇಲೆ ಕರ್ನಾಟಕ ಸೇವಾ ನಿಯಮಾವಳಿ (ವರ್ಗೀಕರಣ ನಿಯಂತ್ರಣ ಮತ್ತು ಅಪಿಲು) 1957ರ ನಿಯಮ 10(1) ಡಿ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತ ಅಪಾರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಕಲಬುರ್ಗಿ ಹಾಗೂ ಸಕ್ಷಮ ಪ್ರಾಧಿಕಾರಿಗಳು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಕಸ್ಟೋಡಿಯನ್ ಸ್ಥಾನಿಕ ಜಾಗೃತ ದಳ ಹಾಗೂ ಕೋಣೆ ಮೇಲ್ವಿಚಾರಕರಗಳ
ಅಧಿಕಾರಿ ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತು ಗೊಳಿಸಿ ಆದೇಶ ಹೊರಡಿಸಿದ್ದಾರೆ.