ಸಿಂಧನೂರು ಆಗಸ್ಟ್ 12. ನಮ್ಮ ದೇಶದ ಯುವಕರು ಭಾರತೀಯ ಸಂಸ್ಕೃತಿ ಸಂಪ್ರದಾಯವನ್ನು ಉಳಿಸುವಂತಾಗಿರಿ ಸದಾನಂದ ಶರಣರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ವೆಂಕಟಗಿರಿ ಸಿದ್ದಾಶ್ರಮದ ಶ್ರೀ ಸದಾನಂದ ಶರಣರ ದಿವ್ಯ ಸಾನಿಧ್ಯದಲ್ಲಿ “ಸಂಸ್ಕೃತಿಯ ಸಮ್ಮಿಲನ ” ಕಾರ್ಯಕ್ರಮದಲ್ಲಿ ಸಿಂಧನೂರು ತಾಲೂಕ ಬಜರಂಗ ದಳದ ಸಂಚಾಲಕರಾದ ಬಸವರಾಜ ಭಜಂತ್ರಿ ಸಾಲಗುಂದ ಇವರ 23ನೇ ವರ್ಷದ ಹುಟ್ಟುಹಬ್ಬದ ಸಮಾರಂಭ ಕಾರ್ಯಕ್ರಮ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ನೆರವೇರಿತು.
ನಂತರ ಮಾತನಾಡಿದ ವೆಂಕಟಗಿರಿ ಕ್ಯಾಂಪಿನ ಶ್ರೀ ಸದಾನಂದ ಶರಣರು ಇಡೀ ಜಗತ್ತಿನಲ್ಲಿ ನಮ್ಮ ದೇಶ ಕರುಣೆಯ ತವರು ಇಂದು ಸಂಸ್ಕೃತಿಯ ಸಮ್ಮಿಲನ ಕಾರ್ಯಕ್ರಮವು ತಂತ್ರಜ್ಞಾನ ಯುಗದಲ್ಲಿ ಬದುಕಿತ್ತಿರುವ ಗೊತ್ತಿರುವ ನಾವುಗಳು ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಮರೆಯಬಾರದು ನಮ್ಮ ದೇಶದ ಯುವಕರು ಭಾರತೀಯ ಸಂಸ್ಕೃತಿ ಸಂಪ್ರದಾಯವನ್ನು ಉಳಿಸುವಂತವರಾಗಿರಿ ಇಂದು ಬಸವರಾಜ ಬಜಂತ್ರಿ ನಮ್ಮ ಆತ್ಮೀಯ ಶಿಷ್ಯ ಸಮಾಜ ಕೊಂದು ಒಳ್ಳೆಯ ಸಂದೇಶ ನೀಡುವ ಈ ಕಾರ್ಯಕ್ರಮ ನಮ್ಮ ಶಿಷ್ಯ ವೃಂದದ ಗೌರವವನ್ನು ಹೆಚ್ಚಿಸಿದೆ. ಸ್ವಾರ್ಥ ಬದುಕಿನ ಮಧ್ಯೆ ನಿಸ್ವಾರ್ಥತೆಯ ದೋಣಿಯನ್ನು ಚಲಿಸುತ್ತಿರುವ ಸಿಂಧನೂರಿನ ಕಾರುಣ್ಯ ಆಶ್ರಮ ಕರುಣೆಯ ಪವಿತ್ರ ಮಂದಿರವಾಗಿದೆ.ಯುವ ಪೀಳಿಗೆ ಎಲ್ಲರು ಕೂಡಿ ಇಂತಹ ಸಮಾಜ ಪರ ಅನಾಥ ಪರ ಕಾರ್ಯಗಳಿಗೆ ಶಕ್ತಿ ನೀಡುವ ಮೂಲಕ ಮಾನವ ಜನ್ಮಕ್ಕೆ ಮಾದರಿಯಾಗಬೇಕು ಎಂದು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ವಿರೇಶ ಯಡಿಯೂರುಮಠ ಮಾತನಾಡಿ ನಮ್ಮ ಸಿಂಧನೂರಿನ ಯುವಕರು ಸಂಸ್ಕೃತಿ ಸಂಪ್ರದಾಯವನ್ನು ವೆಂಕಟಗಿರಿಯ ಸಿದ್ದಾಶ್ರಮದಿಂದ ಪಡೆದುಕೊಳ್ಳುವ ಹಲವಾರು ಕಾರ್ಯಕ್ರಮಗಳು ತಾವುಗಳು ಮಾಡುತ್ತಾ ಬಂದಿದ್ದೀರಿ. ತಮ್ಮೆಲ್ಲರ ಶರಣರ ಹಾಗೂ ಯುವ ಪೀಳಿಗೆಯ ಸಹಾಯ ಸಹಕಾರ ಈ ಕಾರುಣ್ಯ ಕುಟುಂಬಕ್ಕೆ ನಿರಂತರ ಪ್ರಾಪ್ತಿಸುತ್ತಿದೆ. ಸಿಂಧನೂರಲ್ಲದೆ ನಾಡಿನ ನಾಡಿನ ಸಮಸ್ತ ಜನತೆಯ ಆಶೀರ್ವಾದ ಸಹಾಯ ಸಹಕಾರ ನಾಡಿನ ಈ ಕಾರುಣ್ಯ ಆಶ್ರಮದ ಮೇಲಿರಲಿ ಇಂದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರುಗಳಿಗೆ ಬಜರಂಗಬಳಗ ಎಲ್ಲಾ ಕಾರ್ಯಕರ್ತರಿಗೆ ಕಾರುಣ್ಯ ಕುಟುಂಬದಿಂದ ಅಭಿನಂದನೆಗಳು ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬಸವರಾಜ ಭಜಂತ್ರಿ ಅವರಿಗೆ ವೆಂಕಟಗಿರಿ ಸಿದ್ದಾಶ್ರಮದಿಂದ ಹಾಗೂ ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಸಲಹಾ ಸಮಿತಿಯ ಸದಸ್ಯರಾದ ಅಯ್ಯನಗೌಡ ಆಯನೂರು. ಸಿದ್ದು ಜೀನೂರು ಸಂಪಾದಕರು ಬಡವರ ಬಾರಕೋಲು ಪತ್ರಿಕೆ, ಸಿದ್ದು ಹೂಗಾರ ಬಿಜೆಪಿ ಮಂಡಲ ಯುವ ಮೋರ್ಚಾ ತಾಲೂಕಾಧ್ಯಕ್ಷರು, ಸಂತೋಷ ಅಂಗಡಿ ರಾಜ್ಯಾಧ್ಯಕ್ಷರು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ರವಿ ಉಪ್ಪಾರ ನಗರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ವೆಂಕೋಬ ಭೂತಲದಿನ್ನಿ ಪತ್ರಕರ್ತರು, ಅಕ್ಷಯ ಗೌಡ ಸಿಂಧನೂರ ರವಿಕುಮಾರ ಮಾನ್ವಿ ಬಜರಂಗದಳ ಜಿಲ್ಲಾ ಸಹ ಸಂಯೋಜಕರು ರಾಯಚೂರು. ವಿಜಯಕುಮಾರ ಸಿಂಧನೂರು, ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ, ಗೀತಾ ಕುಲಕರ್ಣಿ ಇಂದುಮತಿ ಏಕನಾಥ ಮರಿಯಪ್ಪ. ಶರಣು ಸ್ವಾಮಿ ಬಸವರಾಜ ಹಚೋಳ್ಳಿ, ಪ್ರದೀಪ ಪೂಜಾರಿ ಮಾಸ್ಟರ್, ಮಾಂತೇಶ್ ರವುಡುಕುಂದ, ಹಾಗೂ ಪ್ರವೀಣ್ , ಚಿರಂಜೀವಿ, ವಿಜಯ , ಹನುಮೇಶ್, ರುದ್ರಯ್ಯ ಹಿರೇಮಠ್, ಬಸವರಾಜ್ ಜಿ , ಮೌನೇಶ್ , ಮನಿಕುಮರ್, ದೇವು ಗೊಬ್ಬರಕಲ್ಲು, ಯರಿಯಪ್ಪ, ಸಂತೋಷ್, ದೇವರಾಜ್ ಜಿನ್ನೂರ್, ಮಂಜುನಾಥ, ವೀರೇಶ ನಾಯಕ, ಉದಯ, ಆನಂದ, ಬಜರಂಗದಳದ ಹಲವಾರು ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು