ಮೇ 07.ಮಸ್ಕಿ ಅಭಿನಂದನ್ ಸಂಸ್ಥೆಯ ವತಿಯಿಂದ ಸತತವಾಗಿ ಒಂದು ವಾರವೂ ಬಿಡದೆ ನಡೆದುಕೊಂಡು ಬರುತ್ತಿರುವ ಸ್ವಚ್ಛತಾ ಅಭಿಯಾನ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಭಾಗವಾಗಿ ಈ ವಾರದ ಅಂದರೆ 96ನೇ ವಾರದ ಸೇವಾ ಕಾರ್ಯವನ್ನು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಜಿನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಯಿತು.
ಆವರಣದಲ್ಲಿ ಇದ್ದ ಕಸ ಕಡ್ಡಿ ಮತ್ತು ಪ್ಲಾಸ್ಟಿಕ್ ಗಳನ್ನು ತೆಗೆದು ಶಾಲೆಯ ಗೋಡೆಗಳಿಗೆ ಮತ್ತು ಕಂಬಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಶಾಲೆಯನ್ನು ಸುಂದರಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಭೀಮಣ್ಣ ಜಿನೂರು ಅವರು ರಜೆ ಅವಧಿಯಲ್ಲಿ ಹಸಾಗೆ ಆವರಣವನ್ನು ಹಾಗೂ ಬಹಳ ದಿನಗಳಿಂದ ಕಣ್ಣವನ್ನು ಕಾಣದ ಶಾಲೆಯ ಗೋಡೆಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಶಾಲೆಯನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಿ ಉತ್ತಮ ವಾತಾವರಣವನ್ನು ಕಲ್ಪಿಸಿದ ಅಭಿನಂದನ್ ಸಂಸ್ಥೆಗೆ ಮತ್ತು ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಸ್ವಯಂ ಸೇವಕರಿಗೆ ನಾವು ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇವೆ.
ಹಾಗೂ ಈ ಅಭಿಯಾನದ ಕೀರ್ತಿ ರಾಷ್ಟ್ರಮಟ್ಟದಲ್ಲಿ ವ್ಯಾಪಿಸಲಿ ಅದಕ್ಕಾಗಿ ಪ್ರಯತ್ನಿಸುವ ಎಲ್ಲಾ ಸ್ವಯಂಸೇವಕರಿಗೆ ಆ ಕೀರ್ತಿಗೊಳಿಸುವ ಸಾಮರ್ಥ್ಯ ಬರಲಿ ಎಂದು ಹರಸಿದರು. ಈ ಸೇವಾ ಕಾರ್ಯದಲ್ಲಿ ಮಹೇಶ್ ಬಾಬು, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಡಿಗೇರ, ಕಾರ್ತಿಕ್ ಜೋಗಿನ್, ಬಸಲಿಂಗಪ್ಪ ಬಾದರ್ಲಿ, ಕಿಶೋರ್, ಆಕಾಶ್ ಹಾದಿಮನಿ ಮತ್ತು ಶಾಲೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.