ಸಿಂಧನೂರು ಜೂಲೈ 25. 900 ವರ್ಷಗಳ ಹಿಂದೆ ರಚಿತವಾದ 12ನೇ ಶತಮಾನದ ವಚನ ಸಾಹಿತ್ಯವು ಅಂದಿನ ವಿವಿಧ ಕಾಯಕಗಳನ್ನ ಅವಲಂಬಿಸಿದ ಡೋಹರ ಕಕ್ಕಯ್ಯ ,ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ ,ಮಾರಯ್ಯ ,ಮೇದಾರ ಕೇತಯ್ಯ, ಶರಣೆ, ಸತ್ಯಕ್ಕ, ಸೂಳೆ ಸಂಕವ್ವ ,ಇಂತಹ ಮಹಾನ್ ಶ್ರಮಜೀವಿಗಳು ತಮ್ಮ ತಮ್ಮ ಕಾಯಕದಲ್ಲಿ ದೈವವನ್ನು ಕಂಡು, ಕಾಯಕವೇ ಕೈಲಾಸ ಎಂದು ಬದುಕಿಬಾಳಿದವರು .ಇಂತವರಬದುಕು ಪ್ರಸ್ತುತ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಮಾಡಶಿರುವಾರ ಗ್ರಾಮದಲ್ಲಿ ನಡೆದ ನಾಲ್ಕನೇ ದಿನದ ಶರಣರ ವಚನಗಳಲ್ಲಿ ಕೃಷಿ ಎಂಬ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಬಸವ ಚಾರ್ಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುದ್ದಿನಗೌಡ ಪಾಟೀಲ್ ಮಾತನಾಡಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಂಸರಾಜ್ ಭೋವಿ ಮಾಡಸಿರವಾರ ಮಾತನಾಡುತ್ತಾ ,ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳ ಕಾರ್ಯದ ಬಗ್ಗೆ ಸಂತೋಷ ವ್ಯಕ್ತಪಡಿಸಿ ಇಂದಿನ ಯುವಕರಿಗೆ ದೇಶವನ್ನು ಕಟ್ಟುವ ನಾಯಕರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಂಪನಗೌಡ ಮಾಡಿಸಿರುವ ಮಾತಾಡಿ, ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಶಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಆದೇಪ್ಪ ಯಾದವ್ ಬಸವರಾಜ್ ಹಿರೇ ಕುರುಬರ ವಿರುಪಣ್ಣ ತಾತ ಪಂಚಾಕ್ಷರಯ್ಯ ಸ್ವಾಮಿಯವರು ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು. ಉಪನ್ಯಾಸಕ ಪಂಚಾಕ್ಷರಿ ಅಧ್ಯಕ್ಷತೆಯನ್ನು ಕಾರ್ಯಕ್ರಮದಲ್ಲಿ ವಸಂತ ಬಂಗಿ ,ಬಸವರಾಜ ಸರ್, ಕಾವೇರಿ ಮೇಡಂ, ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಸರೋಜಿನಿ ನಾಯ್ಡು ತಂಡದ ನಾಯಕಿ ಮಂಜುಳಾ, ಶಶಿಕಲಾ ಪ್ರಾರ್ಥಿಸಿದರು ದೇವರಾಜ್ ನಾಯಕ ಸ್ವಾಗತಿಸಿದರು ಸಂಗೀತ ವಂದಿಸಿದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.