ಮೇ.04 ನಗರದ ನೊಬೆಲ್ ಪದವಿ ಮಹಾವಿದ್ಯಾಲಯದ ಎನ್.ಎಸ್ ಎಸ್ ಘಟಕದ ವತಿಯಿಂದ ಜೂನ 5, 2023 ರಂದು ವಿಶ್ವ ಪರಿಸರ ದಿನದ ನಿಮಿತ್ಯ ದತ್ತು ಗ್ರಾಮ ಮಲ್ಲಾಪುರ ಗ್ರಾಮದ ರಸ್ತೆಯಲ್ಲಿರುವ ರಾಮಕೃಷ್ಣ ಪರಮಹಂಸರ ಸ್ವಾಮಿ ವಿವೇಕಾನಂದ ಆಶ್ರಮದಲ್ಲಿ ಶ್ರಮಧಾನ ಹಾಗೂ ನೂರು ಸಸಿಗಳನ್ನು ನೆಡಯುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಆಶ್ರಮದ ಆವರಣದಲ್ಲಿ ಸಸಿ ನೆಟ್ಟು ನಿರೇರದು ಚಾಲನೆ ನೀಡಿ ಡಾ.ಶಿವರಾಜ ಮಕ್ಕಳ ತಜ್ಞರು ಮಾತಾನಾಡುತ್ತಾ, ಇಂದು ಪರಿಸರ ಕಲುಷಿತ ವಾಗುತ್ತಿರುವುದು ವಿಷಾದದ ಸಂಗತಿ ಇಂತಹ ಸಂದರ್ಭದಲ್ಲಿ ನೊಬೆಲ್ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಕಾರ್ಯ ಶ್ಲ್ಯಾಘನೀಯ ಎಂದರು.
ಒಂದು ಬೇವಿನ ಮರ ನೂರು ಎ.ಸಿ ಗಳಿಗೆ ಸಮ ಹಾಗಾಗಿ ಪುರಾತನದ ಜನತೆ ಹೊಂಗೆ ಮಾವು ಬೇವೂ ಮರಗಳು ಹೆಚ್ಚಿನ ಆಕ್ಸಿಜನ್ ನೀಡಬಲ್ಲವು ಇದರಲ್ಲಿ ವಿಜ್ಞಾನ ಅಡಗಿದೆ ಕಾರಣ ಇಂದಿನ ಯುವ ತಲೆಮಾರು ಮನೆಗೊಂದು ಮರ ಊರಿಗೊಂದು ವನ ನಿರ್ಮಾಣ ಮಾಡಿದರೆ ಅದುವೆ ಸ್ವರ್ಗ ಎಂದು ಕರೆ ನೀಡಿದರು.ಪ್ರಕೃತಿ ಸ್ನೇಹಿ ಬದಕಿನ ಕಡಗೆ ನಾವು ಮುಖಾಮುಕಿಯಾಗುಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾದ ಡಾ.ಚನ್ನನಗೌಡ ನೆತ್ರ ತಜ್ಞರು ಮಾತನಾಡುತ್ತಾ,ಮರಗಳನ್ನು ನೆಡುವುದು ಮಾತ್ರ ನಮ್ಮ ಜವಬ್ದಾರಿ ಅಲ್ಲ ಅವುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಬ್ದಾರಿವಾಗಬೇಕು ಕಾರಣ ಒಂದು ಸಸಿ ಹೇಳುತ್ತದೆ ನನ್ನ ಎರಡು ವರ್ಷ ಕಾಪಾಡಿ ನಿಮ್ಮನ್ನ ಕೊನೆಯವರಿಗೂ ಕಾಯುತ್ತೇನೆ ಅಂತ. ಅದ್ದರಿಂದ ಇಂತಹ ಕಾರ್ಯಗಳಲ್ಲಿ ತಾವುಗಳು ಭಾಗವಸಿದ್ದು ನನಗೆ ಸಂತಸ ತಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶರಣಪ್ಪ ಹೊಸಳ್ಳಿ ಕನ್ನಡ ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು ಸಿಂಧನೂರು,ಡಾ. ಹುಸೇನಪ್ಪ ಅಮರಾಪುರ ಕನ್ನಡ ಉಪನ್ಯಾಸರು ಸರಕಾರಿ ಪದವಿ ಪೂರ್ವ ಕಾಲೇಜು ಜಾಲಿಹಾಳ, ವೀರೇಶ ಕನ್ನಾರಿ ಕನ್ನಡ ಉಪನ್ಯಾಸಕರು ಹಾಗೂ ಬಿ.ರವಿಕುಮಾರ ಸಾಸಲಮರಿ ಸಮಾಜಶಾಸ್ತ್ರ ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು ಆಲಬನೂರ ಆಗಮಿಸಿದ್ದರು.
ಈ ಸಂದರ್ಭದಲ್ಲಿ ನಲವತ್ತುಕ್ಕೂ ಹೇಚ್ಚು ಸ್ವಯಂ ಸೇವಕರು ಆಶ್ರಮದ ಆವರಣವನ್ನು ಸುಚಿಗೊಳಿಸಿ ರಂಗೋಲಿ ಹಾಕಿ ಶೃಂಗಾರಗೊಳಿಸಿದರು.ನಂತರ ಮರಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಧ್ಯಕ್ಷರಾದ ಪರಶುರಾಮ ಮಲ್ಲಾಪುರು, ಕಾರ್ಯದರ್ಶಿ ಡಾ.ಅರುಣಕುಮಾರ ಬೇರ್ಗಿ, ಖಜಾಂಚಿಗಳಾದ ಜಯಪ್ಪ ಗೊರೆಬಾಳ, ಪ್ರಾಂಶುಪಾಲರಾದ ಆನಂದ, ಎಸ್ ಎನ್ ಎಸ್ ಎಸ್ ಅದಿಕಾರಿಗಳಾದ ಹೊನ್ನಪ್ಪ ಬೆಳಗುರ್ಕಿ, ಅರ್ಥಶಾಸ್ತ್ರ ಉಪನ್ಯಾಸಕರಾದ ರವಿ ಎಂ. ಹಾಗೂ ಆಂಗ್ಲ ಭಾಷೆ ಉಪನ್ಯಾಸಕರಾದ ನಾಗರಾಜ್ .