ಜುಲೈ 05.ಸಿಂಧನೂರು ನಗರದ ಬಪ್ಪೂರ ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸೋಮವಾರ ನಡೆದ ಎರಡನೇ ವಿವೇಕ ಪೂರ್ಣಿಮೆ ಕಾರ್ಯಕ್ರಮದಲ್ಲಿ ನಗರದಲ್ಲಿ ಸುಮಾರು 45ವರ್ಷಗಳಿಂದ ಕಟ್ಟಡ ಸಾಮಾಗ್ರಿಗಳನ್ನು ಕೊಂಡೊಯ್ಯುವ ಬಂಡಿ ಎಳೆದು ತಮ್ಮ ಬದುಕಿನ ಬಂಡಿ ಸಾಗಿಸುತ್ತಿರುವ ಶ್ರಮಜೀವಿಯಾದ 65ವರ್ಷದ ಫಕೀರ್ ಸಾಬ್ ತಂದೆ ಮಾಲೀಕ್ ಸಾಬ್ ಬಡಿಬೇಸ್ ನಿವಾಸಿಯನ್ನು ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ನಂತರ ಆಶ್ರಮದಲ್ಲಿ ಸಂಜೆ ಗುರುಪೂರ್ಣಿಮೆಯ ನಿಮಿತ್ತ ನಡೆದ ವಿವೇಕ ಪೂರ್ಣಿಮೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಡಾ. ವಿಶ್ವನಾಥ ರೆಡ್ಡಿ ವರದಾ ಆಸ್ಪತ್ರೆ ಇವರು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರರಥಕೆ ವಿವೇಕಾನಂದರ ವಿಚಾರಗಳೆ ಸಾರಥಿ ವಿಷಯದ ಕುರಿತು ಪ್ರವಚನಕಾರರಾದ ಕಿರಣಕುಮಾರ ವಿವೇಕವಂಶಿ ಇವರು ಪ್ರವಚನ ನೀಡಿದರು.
ವೈ. ನರೇಂದ್ರನಾಥ, ಅಧ್ಯಕ್ಷರು ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿ ಒಕ್ಕೂಟ, ಮುಖ್ಯ ಅಥಿತಿಗಳಾಗಿ ಮಾತನಾಡಿದರು, ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ನೇತ್ರ ತಜ್ಞ ಡಾ ಚನ್ನನಗೌಡ ಪೋಲಿಸ್ ಪಾಟೀಲ್, ಬಸವ ಮಕ್ಕಳ ಆಸ್ಪತ್ರೆ ವೈದ್ಯರಾದ ಡಾ.ಚನ್ನಬಸವ ಪಾಟೀಲ್, ಮಹಾಂತೇಶ್ ದೇಶನೂರು, ವಿರೇಶ ನಾಡಗೌಡ, ಕಳಕಪ್ಪ ಗಡದ್,ಬಸಿರ್ ಯತ್ಮಾರಿ, ಚನ್ನವೀರನಗೌಡ ಸಹ ಕಾರ್ಯದರ್ಶಿ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್, ಬಸವರಾಜ ಬಂಗಾರಶೆಟ್ಟರು ಸೇರಿದಂತೆ ಹಲವಾರು ಭಕ್ತರಿದ್ದರು.