ದೇಶದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ವಿಷಯವನ್ನು ಮುಂದಿಟ್ಟುಕೊ೦ಡು ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಡಿತರ ಯೋಜನೆಯ ಮೂಲಕ ದೇಶದ ನಾಗರೀಕರಿಗೆ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ. ಆದರೆ ಆಹಾರ ಧಾನ್ಯ ಪೂರೈಕೆಗಾಗಿ ತಹಶೀಲ ಕಾರ್ಯಾಲಯದ ಮೂಲಕ ಆಹಾರ ಇಲಾಖೆಯಿಂದ ಪಡಿತರವನ್ನು ಆಯಾ ಗೋದಾಮಿಗೆ ಬರುತ್ತದೆ ನಂತರ ಅಲ್ಲಿಂದ ಆಯಾ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಗುತ್ತೇಗಾದರರ ವಾಹನದ ಮೂಲಕ ಪಡಿತರವನ್ನು ನ್ಯಾಯಬೆಲೆ ಅಂಗಡಿಗೆ ಕಳುಹಿಸುವದು. ಈ ವ್ಯವಸ್ಥೆ ಪಡಿತರ ಪ್ರಾರಂಭವಾದಾಗಿನಿ೦ದಲೂ ನಡೆದುಕೊಂಡು ಬಂದಿದ್ದು, ಗೋದಾಮಿಗೆ ಬಂದು ಬೀಳುವ ಪಡಿತರ ಧಾನ್ಯಗಳಿಗೆ ಮೊದಲು ಗುತ್ತಿ ಹಾಕಿ ೧ ರಿಂದ ೨ ಕೆಜಿಷ್ಟು ಪಡಿತರ ಧಾನ್ಯವನ್ನು ತೆಗೆಯುವದು ನಿರಂತರವಾಗಿ ನಡೆದಿದ್ದು, ನಂತರ ಇದನ್ನು ಶಾರ್ಟೇಜ ಎಂದು ಪರಿಗಣಿಸುವದು, ಹೀಗೆ ತೆಗೆದಿರುವ ಪಡಿತರವನ್ನು ಕಾಳ ಸಂತೆಗೆ ಕಳುಹಿಸುವದು ಒಂದು ಕೆಲಸವಾದರೆ, ಇನ್ನು ನ್ಯಾಯಬೆಲೆ ಅಂಗಡಿಗೆ ಬಂದರೆ ಅಲ್ಲದೆ ತಿಂಗಳಿನಲ್ಲಿ ಒಂದೇರಡು ದಿನ ಮಾತ್ರ ಪಡಿತರ ವಿತರಣೆ ಮಾಡುವದು, ಉಳಿದಂತೆ ನ್ಯಾಯಬೆಲೆ ಅಂಗಡಿಯನ್ನು ಮುಚ್ಚುವದು, ಸರಕಾರದ ಅದೇಶ ಸ್ಪಷ್ಟವಾಗಿ ಪ್ರತಿ ದಿನಾಲು ನಿಗದಿಪಡಿಸಿದ ಸಮಯದಲ್ಲಿ ನ್ಯಾಯಬೆಲೆ ಅಂಗಡಿ ತೆಗೆಯಬೇಕು ಎಂಬ ನಿಯಮವಿದೆ, ಅಗ್ರಿಮೆಂಟ್ ಗೆ ನ್ಯಾಯಬೆಲೆ ಅಂಗಡಿ ಸಂಚಾಲಕರು ಸಹಿ ಮಾಡಿದ್ದು ಇರುತ್ತದೆ. ಆದರೆ ತೆಗೆಯುವದಿಲ್ಲ, ಯಾಕೆಂದರೆ ಆಹಾರ ಇಲಾಖೆಯ ಅಧಿಕಾರಿಗಳ ಕೃಪಾ ಕಟಾಕ್ಷ ಇರುತ್ತದೆ. ಇದಕ್ಕೂ ಪೂರ್ವಲದಲ್ಲಿ ಪಡಿತರ ಪಡೆದುಕೊಳ್ಳುವ ಗ್ರಾಹಕರು ಹೆಬ್ಬಟ್ಟಿನ (ಥಂಬ್) ಹಾಕುವ ಸಮಯದಲ್ಲಿ ರೂ ೧೦/- ರಂತೆ ಸುಲಿಗೆ ಮಾಡುತ್ತಿದ್ದು, ಈ ವಿಷಯಗಳು ಮಾಧ್ಯಮದಲ್ಲಿ ಪ್ರಕಟಗೊಂಡ ನಂತರದಲ್ಲಿ ಇದು ನಿಯಂತ್ರಣಕ್ಕೆ ಬಂದಿರುತ್ತದೆ. ಎಲ್ಲವನ್ನು ಪರಿಶೀಲನೆ ಮಾಡುವ ಅಧಿಕಾರಿಗಳಿಗೆ ನ್ಯಾಯಬೆಲೆ ಅಂಗಡಿ ಸಂಚಾಲಕರಿAದ ಯಾವುದೋ ರೀತಿಯ ಹೊಂದಾಣಿಕೆ ಇರುವ ಸಾಧ್ಯತೆಗಳನ್ನು ಪಡಿತರದಾರರ ಬಹಿರಂಗವಾಗಿ ಮಾತನಾಡುತ್ತಿರುವದು ಕೂಡಾ ಕೇಳಿ ಬರುತ್ತದೆ.
ಇದಿಷ್ಟು ಒಂದೇಡೆಯಾದರೆ, ಇನ್ನು ಮುಂದಿನ ಹಂತಕ್ಕೆ ಈ ಪತ್ರಿಕೆ ಹೋಗಿ, ಎಲ್ಲವನ್ನು ಸಮಗ್ರವಾಗಿ ಸಾರ್ವಜನಿಕರಿಂದ ವಿವರ ಪಡೆದುಕೊಂಡಾಗ ಆಶ್ಚರ್ಯ ಮತ್ತು ಆಘಾತಕಾರಿ ವಿಷಯ ತಿಳಿದು ಬಂದಿದೆ. ಪಡಿತರ ವ್ಯವಸ್ಥೆ ಜಾರಿಗೆ ಬಂದಾಗಿನಿAದ ಸಿಂಧನೂರು ತಾಲೂಕಿನಲ್ಲಿ ಪಡಿತರ ಧಾನ್ಯಗಳು ನ್ಯಾಯ ಬೆಲೆ ಅಂಗಡಿಗೆ ಹೋಗಿ ಪಡಿತರ ವಿತರಣೆಯಾದ ಮೇಲೆ ಇರುವ ಖಾಲಿ ಚೀಲಗಳು ಎಲ್ಲಿಗೆ ಹೋಗುತ್ತವೆ ? ಎಂಬ ವಿಷಯದ ಜಾಡು ಹಿಡಿದುಕೊಂಡು ಹೋದಾಗ ಅಮರೇಶ ನಡಲಮನಿ ಎನ್ನುವ ಸಮಾಜ ಸೇವಕರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ವಿಷಯವನ್ನು ಕೇಳಿದ್ದು, ಮಾಹಿತಿ ಕೊಟ್ಟಿರುವ ಅಧಿಕಾರಿ “ ಆಹಾರ ಇಲಾಖೆ ಗೋದಾಮ ವ್ಯವಸ್ಥಾಪಕರು ಒಂದು ಪತ್ರವನ್ನು ಬರೆದಿದ್ದು, ಈ ಪತ್ರಕ್ಕೆ ನಂಬರ್ ಇರುವದಿಲ್ಲ, ಮೋಹರ ಹಾಕಿರುವದಿಲ್ಲ, ಮಾಹಿತಿದಾರರು ಕೇಳಿದ ಮೇಲೆ ಅದಕ್ಕೊಂದು ಮೊಹರ ಹಾಕಿ ಕೊಟ್ಟಿರುವದು ಕೂಡಾ ಹಾಸ್ಯಸ್ಪದ ಮತ್ತು ಬೇ ಜವಬ್ದಾರ ಉತ್ತರದಿಂದ ಕೂಡಿದ್ದು ಅದರ ಪ್ರತಿಯನ್ನು ಸಹಿತ ತಹಶೀಲ್ದಾರರು ಸಿಂಧನೂರು ಇವರಿಗೆ ಸಲ್ಲಿಸಿದ್ದಾರೆ.
ಈ ಪತ್ರದ ಒಕ್ಕಣೆ ಏನೆಂದರೆಃ
ಪಡಿತರಕ್ಕಾಗಿ ಬಂದಿರುವ ಗೋಣಿ ಚೀಲಗಳನ್ನು ದೃಢೀಕರಿಸಿ ಕೊಡಲು ನೀವುಗಳು ಕೇಳಿದ್ದು, ನಮ್ಮ ಗೋದಾಮಿಗೆ ಆಯಾ ತಿಂಗಳಿನ ಆಹಾರ ಧಾನ್ಯಗಳ ಹಂಚಿಕೆ ಅಂತೆ ಸಿಂಧನೂರು ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಎತ್ತುವಳಿಯಾಗುತ್ತದೆ. ತದನಂತರ ಎಲ್ಲ ನ್ಯಾಯಬೆಲೆ ಅಂಗಡಿಯವರೇ ಗೋಣಿಚೀಲಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ, ಸದರಿ ಗೋಣಿ ಚೀಲಗಳನ್ನು ವಾಪಸು ಪಡೆಯಬೇಕೆಂದು ಸರ್ಕಾರದಿಂದ ಇದುವರೆಗೂ ಯಾವುದೇ ಆದೇಶ ಬಂದಿರುವದಿಲ್ಲ, ಇದರಿಂದ ನಮ್ಮ ಗೋದಾಮಿನಲ್ಲಿ ಗೋಣಿಚೀಲಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ದಿಲ್ಲ ಎಂಬ ಮಾಹಿತಿ ಈ ಮೂಲಕ ತಮಗೆ ತಿಳಿಸಲಾಗಿದೆ.
ಪ್ರತಿಯನ್ನುಃ ಮಾನ್ಯ ತಹಶೀಲ್ದಾರರು ಸಿಂಧನೂರು.
ಸಹಿ
ಘಟಕ ವ್ಯವಸ್ಥಾಪಕರು
ಸಿಂಧನೂರು.
ಇಲ್ಲಿ ಗಮನಿಸಬೇಕಾದ ಅಂಶವೇನೆ0ದರೆ, ಗೋಣಿ ಚೀಲಗಳನ್ನು ವಾಪಸ್ಸು ಪಡೆಯುವಂತೆ ಸರಕಾರದ ಆದೇಶ ಇರುವದಿಲ್ಲ, ಅಂದರೆ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಯೋಜನೆ ಜಾರಿಗೆ ಬಂದಾಗಿನಿದ ಈ ಗೋಣಿ ಚೀಲಗಳನ್ನು ಸಂಗ್ರಹಿಸಿಟ್ಟಿದ್ದರೆ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ ಗೋಣೀ ಚೀಲಗಳ ಗೋದಾಮು ಬೇಕಾಗಿತ್ತು ಅಲವೆ. ಸಿಂಧನೂರು ತಾಲೂಕು ೧೭೫ ನ್ಯಾಯ ಬೆಲೆ ಅಂಗಡಿಯನ್ನು ಹೊಂದಲಾಗಿದೆ ಎಂದು ಹೆಸರು ಹೇಳಲು ಆಗದೇ ಇರುವ ನ್ಯಾಯಬೆಲೆ ಅಂಗಡಿ ಸಂಚಾಲಕರೊಬ್ಬರು ತಿಳಿಸಿದ್ದು, ಗಮನಿಸಿರಿ ಈ ಗೋಣಿಚೀಲಗಳ ಕುರಿತಂತೆ ಹಗರಣ ಎನ್ನಬೇಕೆ, ಸ್ಕಾö್ಯಂ ಎನ್ನಬೇಕೆ, ಇದರಲ್ಲಿ ಅಧಿಕಾರಿಗಳು (ಎಲ್ಲಾ ಹಂತದ) ಶಾಮೀಲಾಗಿದ್ದಾರೆ ಎಂಬ ಮಾಹಿತಿ ಕೂಡಾ ಕೇಳಿ ಬರುತ್ತದೆ. ಅಂದರೆ ಸಿಂಧನೂರಿನಲ್ಲಿ “ಪಡಿತರ ಗೋಣೀ ಚೀಲಗಳ ನುಂಗುಬಾಕ ಅಧಿಕಾರಿಗಳು ಇದ್ದಾರೆ ಎಂಬುದು ಮಾತ್ರ ಸತ್ಯದಿಂದ ಕೂಡಿದ ಸಂಗತಿಯಾಗಿದೆ.