ಏಪ್ರಿಲ್ 23.ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಶ್ರೀ ಶರಣಬಸವೇಶ್ವರ ಮಂಟಪದಲ್ಲಿ ನಡೆದ ವಿಶ್ವ ಗುರು ಬಸವೇಶ್ವರ ಜಯಂತಿಯ ಅಂಗವಾಗಿ ವೀರಶೈವ ಸಮಾಜದ ಬಂಧುಗಳು ಹಾಗೂ ಚಂದ್ರಶೇಖರ ಸ್ವಾಮಿ ಅವರು ಶ್ರೀ ಬಸವೇಶ್ವರ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು.
ನಂತರ ಮಾತನಾಡಿದ ಚಂದ್ರಶೇಖರ ಸ್ವಾಮಿ ಜಗಜ್ಯೋತಿ ಬಸವಣ್ಣ, 12ನೇ ಶತಮಾನದಲ್ಲಿಯೇ ಅನುಭವ ಮಂಟಪದಡಿ ಎಲ್ಲ ಜಾತಿ, ವರ್ಗದ ಜನರನ್ನು ಒಂದುಗೂಡಿಸಿ ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಯುಗ ಪುರುಷ. ಅವರ ವಚನಗಳ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ದಾರ್ಶನಿಕ. ಅವರ ತತ್ವ ಸಿದ್ಧಾಂತಗಳನ್ನು 12ನೇ ಶತಮಾನದಲ್ಲಿಯೇ ಅನುಷ್ಠಾನಗೊಳಿಸಿದರೆ, ದೇಶದಲ್ಲಿ ಜಾತಿ, ಬೇಧ, ಅಸಮಾನತೆ, ಗಂಡು, ಹೆಣ್ಣು ಎಂಬ ತಾರತ್ಯಮವೇ ಇರುತ್ತಿರಲಿಲ್ಲ . 12ನೇ ಶತಮಾನದ ಬಸವಣ್ಣನವರು ಪತ್ರಿವಾದಿಸಿದ ತತ್ವ ಸಿದ್ದಾಂತಗಳು ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿ ಬೆಳಕನ್ನು ಬೀರುವಂತಿವೆ. ಅಸಮಾನತೆಯ ವಿರುದ್ದ ಸಮಾಜದ ಕ್ರಾಂತಿಕಾರಿ ಬದಲಾವಣೆಯಲ್ಲಿ ಬಸವಣ್ಣನವರ ಕೋಡುಗೆ ಅಪಾರ. ಸಮಾಜದಲ್ಲಿ ಜಾತಿ ಪದ್ದತಿ ನಿರ್ಮೂಲ ಮಾಡಿ ಸಾಮಾಜಿಕ ನ್ಯಾಯಕ್ಕೆ ಹೋರಾಡಿ ಇಡಿ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿವಲಿಂಗ ಸ್ವಾಮಿ, ಜಡೆ ಶಿವರುದ್ರಪ್ಪ , ಟಿ ಎಂ ಕಿರಣಕುಮಾರ್ ಸ್ವಾಮಿ , ವಿನಯ್ ವಕೀಲರು, ಡಿ ಮಲ್ಲಿಕಾರ್ಜುನ , ಬೆಳಗಲ್ ಮಲ್ಲಿಕಾರ್ಜುನ , ಗುರುಸಿದ್ದಪ್ಪ , ಪಂಪಾಪತಿ ಸೌಕಾರ್, ಬಿ.ಎಸ್.ಷಣ್ಮುಖ , ಜಡೆಬಸವರಾಜ , ಇನ್ನು ಮುಂತಾದ ವೀರಶೈವ ಸಮಾಜದ ಮುಖಂಡರು ಉಪಸಿದ್ಧರಿದ್ದರು.