ಕಾಂಗ್ರೆಸ್ ಯುವ ಮುಖಂಡರು ಹಾಗೂ ಲಕ್ಕಿ ಗ್ರೂಪ್ಸ್ ಸಿಂಧನೂರು ಸಂಸ್ಥಾಪಕರಾದ ಶ್ರೀ ವೀರು ಹೂಗಾರ ಮಾಡಶಿರವಾರರವರ 25ನೇ ವರ್ಷ “ರಜತ ಮಹೋತ್ಸವ” ದ ಹುಟ್ಟು ಹಬ್ಬವನ್ನು ಸಿಂಧನೂರಿನ ಪುನಿತ್ ಪುಣ್ಯಾಶ್ರಮದಲ್ಲಿ ” ಅನ್ನಸಂತರ್ಪಣೆ ಮತ್ತು ಆರೋಗ್ಯ ತಪಾಸಣೆ ಶಿಬಿರ ” ಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಆರ್.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಸೋಮನಗೌಡ ಬಾದರ್ಲಿವರು ಮಾತನಾಡಿದ ಆತ್ಮೀಯ ಸಹೋದರರಾದ ವೀರು ಹೂಗಾರ ರವರ ಇಂದಿನ ಯುವಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ, 25 ನೇ ವರ್ಷದ ಹುಟ್ಟು ಹಬ್ಬವನ್ನು ವೀರು ಹೂಗಾರ ಗೆಳೆಯರ ಬಳಗ,ಕಲಾ ಬಳಗ ಮತ್ತು ಲಕ್ಕಿ ಗ್ರೂಪ್ಸ್ ಸಿಂಧನೂರಿನ ನೌಕರರೆಲ್ಲ ಸೇರಿ ಅನ್ನಸಂತರ್ಪಣೆ ಮತ್ತು ಆರೋಗ್ಯ ತಪಾಸಣೆ ಶಿಬಿರಗಳ ಮೂಲಕ ಅಂದ ಅನಾಥರಿಗೆ ಆಸರೆಯಾಗುವುದರ ಮೂಲಕ ಅರ್ಥಪೂರ್ಣವಾಗಿ ಆಚರಸಿದ್ದು ಸಂತಸ ತಂದಿದೆ, ವೀರು ಹೂಗಾರ ರವರ ರಾಜಕೀಯದಲ್ಲಿ ಮಾತ್ರವಲ್ಲದೆ ,ಸಂಗೀತ ,ಸಾಹಿತ್ಯ ವ್ಯವಹಾರಿಕ ಕ್ಷೇತ್ರಗಳಲ್ಲಿ ತಮ್ಮದೆಯಾದ ಕಠಿಣ ಪರಿಶ್ರಮದ ಮೂಲಕ ಬಂದ ನಮ್ಮ ಭಾಗದ ಬಹುಮುಖ ಪ್ರತಿಭೆಯಾಗಿದ್ದಾರೆ,ಬಸನಗೌಡ ಬಾದರ್ಲಿಯವರ ಆಪ್ತರಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತ ತಮ್ಮೆದೆಯಾದ ಅನೇಕ ಹಿಂಬಾಲಕರೊಂದಿಗೆ ಸದಾ ಜನಗಳ ಸೇವೆಯನ್ನು ಮಾಡುತ್ತಿದ್ದಾರೆ,ಭಗವಂತ ಮುಂದಿನ ದಿನಮಾನಗಳಲ್ಲಿ ವೀರು ಹೂಗಾರರಿಗೆ ಇನ್ನಷ್ಟು ಆಯುಷ್ಯ ಆರೋಗ್ಯಗಳ ಶಕ್ತಿಯನ್ನು ನೀಡಿ ಜನಗಳ ಸೇವೆ ಮಾಡುವ ಭಾಗ್ಯ ನೀಡಲೆಂದು ಆರೈಸುತ್ತೆನೆ ಎಂದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಶಿವನಗೌಡ ಗೊರೆಬಾಳ ಅವರು ಮಾತನಾಡಿ ವೀರು ಹೂಗಾರರು ಉತ್ತರ ಕರ್ನಾಟಕದ ಖ್ಯಾತ ಗಾಯಕ,ನಿರೂಪಕ,ಬರಹಗಾರ ಮತ್ತು ಹಾಸ್ಯ ಕಲಾವಿದರಾಗಿ ಲಕ್ಕಿ ಮೆಲೋಡಿಸ್ ಸಿಂಧನೂರಿನ ಮೂಲಕ ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿ ಎಲ್ಲರಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.ಪ್ರಸ್ತುತ ಸಿಂಧನೂರು ತಾಲ್ಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘ(ರಿ)ದ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಕಿ ಗ್ರೂಪ್ಸ್ ಸಿಂಧನೂರು ಸ್ಥಾಪನೆ ಮಾಡಿ ಅನೇಕರಿಗೆ ಉದ್ಯೋಗಗಳನ್ನು ನೀಡಿ,ಜನಗಳ ಸೇವೆ ಮಾಡುತ್ತ ರಾಜಕೀಯದಲ್ಲಿ ಎಲ್ಲರೊಡನೆ ಆತ್ಮೀಯ ಸಂಬಂಧಗಳನ್ನು ಹೊಂದಿದ್ದಾರೆ,ವೀರು ಹೂಗಾರರು ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಸಮುದಾಯಗಳೊಂದಿಗೂ ಪ್ರೀತಿ ವಿಶ್ವಾಸಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ರಾಜಕೀಯವಾಗಿ ಇನ್ನಷ್ಟು ಸಧೃಡರಾಗಿ ಜನಗಳ ಸೇವೆ ಮಾಡಲೆಂದು ಆರೈಸುವೆ.
ಮಾಜಿ ನಗರ ಸಭೆ ಸದಸ್ಯರಾದ ಲಿಂಗರಾಜ ಹೂಗಾರ ಅವರ ಮಾತನಾಡಿ ಅತಿಸಣ್ಣ ವಯಸ್ಸಿನಲ್ಲಿ ಬಡತನದಲ್ಲಿ ಬೆಳೆದ ಬಹುಮುಖ ಪ್ರತಿಭೆ ನಮ್ಮ ಅಳಿಯ ವೀರು ಹೂಗಾರ, ಸಂಗೀತ, ಸಾಹಿತ್ಯ ವ್ಯವಹಾರಿಕ ಕ್ಷೇತ್ರಗಳಲ್ಲಿ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಮೂಲಕ ಬೆಳೆದು,ಇಂದು ಲಕ್ಕಿ ಗ್ರೂಪ್ಸ್ ಸಿಂಧನೂರು ಸ್ಥಾಪನೆ ಮಾಡಿ ಅನೇಕರಿಗೆ ಉದ್ಯೋಗಗಳನ್ನು ನೀಡಿ ಎಲ್ಲಾ ರಂಗಗಳಲ್ಲಿ ತಮ್ಮದೆಯಾದ ಛಾಪುಮೂಡಿಸುತ್ತಿದ್ದಾರೆ,ನಮ್ಮ ಹೂಗಾರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ಜವಾಬ್ದಾರಿಗಳಿಗೆ ತಕ್ಕಂತೆ ಕೆಲಸಗಳನ್ನು ಮಾಡುತ್ತ, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ನಮ್ಮ ಹೂಗಾರ ಸಮಾಜಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆಂದು ಹೇಳಿದರು.
ಸಿಂಧನೂರು ತಾಲ್ಲೂಕು ಹೂಗಾರ ಸಂಘ(ರಿ)ದ ಅಧ್ಯಕ್ಷರಾದ ಶ್ರೀ ಭೀಮಣ್ಣ ಹೂಗಾರ ಮಾತನಾಡಿ ಸಣ್ಣವರಿದ್ದ ಸಂದರ್ಭದಲ್ಲಿ ದನಗಳನ್ನು ಕಾಯುತ್ತ,ಕೃಷಿ ಚಟುವಟಿಕೆಗಳ ಮಾಡುತ್ತಿದ್ದ ವ್ಯಕ್ತಿ, ಛಲದಂಕಮಲ್ಲನಂತೆ ಇಂದು ಅನೇಕ ಕ್ಷೇತ್ರಗಳಲ್ಲಿ ಬೆಳೆದು ಸಮಾಜಮುಖಿ ಕೆಲಸಗಳ ಮೂಲಕ ಅನೇಕರಿಗೆ ಉದ್ಯೋಗಗಳನ್ನು ನೀಡಿ ಸಣ್ಣವಯಸ್ಸಿಗೆ ಈ ಹಂತದ ವರೆಗೆ ಬೆಳೆದಿರುವುದು ನಮಗೂ ಮತ್ತು ನಮ್ಮ ಹೂಗಾರ ಸಮಾಜಕ್ಕೆ ಖುಷಿಯನ್ನು ತಂದಿದೆ.
ಉಪನ್ಯಾಸಕರಾದ ರಾಮಣ್ಣ ಬೇರ್ಗಿಯವರು ಮಾತನಾಡಿ ಕಾಲೇಜಿನ ಹಂತದಲ್ಲಿ ವೇದಿಕೆ ನಿರ್ವಹಣೆ,ಭಾಷಣ,ಗಾಯನ ,ಬರಹಗಳ ಮೂಲಕ ನಮ್ನೆಲ್ಲರ ಪ್ರೀತಿಗಳಿಸಿದ ಆತ್ಮೀಯ ಅಚ್ಚುಮೆಚ್ಚಿನ ವಿಧ್ಯಾರ್ಥಿ ನಮ್ಮ ವೀರು ಹೂಗಾರ,ನಮ್ಮ ಕೈಯಲ್ಲಿ ವಿಧ್ಯಾಭ್ಯಾಸ ಮಾಡಿದ ವ್ಯಕ್ತಿ ಇಂದು ತನ್ನ ಕಠಿಣ ಪರಿಶ್ರಮದ ಮೂಲಕ ರಾಜಕೀಯವಾಗಿ,ಸಾಮಾಜಿಕವಾಗಿ,ಸಂಗೀತ, ಸಾಹಿತ್ಯ ,ವ್ಯವಹಾರಿಕ ಕ್ಷೇತ್ರಗಳಲ್ಲಿ ತನ್ನದೆ ಹೆಸರನ್ನು ಮಾಡಿ ಇಂದು ಅನೇಕರಿಗೆ ಉದ್ಯೋಗಗಳನ್ನು ನೀಡಿ ಬಡವರ ಬಾಳಿಗೆ ಆಸರೆಯಾಗುತ್ತ,ಅನೇಕರ ಪ್ರೀತಿಗೆ ಪಾತ್ರರಾಗಿ ಯುವ ನಾಯಕನಾಗಿ ಬೆಳೆಯುತ್ತಿರುವುದು ನಮಗೆ ಖುಷಿಯನ್ನು ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಸೋಮನಗೌಡ ಬಾದರ್ಲಿ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಶಿವನಗೌಡ ಗೊರೆಬಾಳ, ಸಿಂಧನೂರು ತಾಲ್ಲೂಕು ಹೂಗಾರ ಸಂಘ(ರಿ)ದ ಅಧ್ಯಕ್ಷರಾದ ಶ್ರೀ ಭೀಮಣ್ಣ ಹೂಗಾರ, ಮಾಜಿ ನಗರ ಸಭೆ ಸದಸ್ಯರಾದ ಲಿಂಗರಾಜ ಹೂಗಾರ, ಹಾಲುಮತ ಸಮಾಜದ ಮುಖಂಡರಾದ ಶ್ರೀ ಎಮ್ ಲಿಂಗಣ್ಣ ,ಉಪನ್ಯಾಸಕರಾದ ಶ್ರೀ ರಾಮಣ್ಣ ಬೇರ್ಗಿ,ಜಯಪ್ಪ ಗೊರೇಬಾಳ ,ನರಸಣ್ಣ ಬೆಳಗುರ್ಕಿ ,ಮಂಜುನಾಥ, ಹೂಗಾರ ಸಮಾಜದ ಮುಖಂಡರಾದ ಶ್ರೀ ರವಿಕುಮಾರ್ ಹೂಗಾರ, ಅಮರೇಶ್ ಹೂಗಾರ ,ಶರಣಪ್ಪ ಹೂಗಾರ ,ಮಲ್ಲಿಕಾರ್ಜುನ ಹೂಗಾರ,ಶಿವರಾಜ್ ಹೂಗಾರ ,ಕಲಾವಿದರಾದ ಬಸವರಾಜ್ ಗಸ್ತಿ, ಶ್ರೀ ವೀರೇಶ ರಾರಾವಿ, ಶ್ರೀ ಪಂಪಯ್ಯ ಸ್ವಾಮಿ, ಶ್ರೀ ಮತಿ ಲತಾ ಹೂಗಾರ ,ರುದ್ರಮುನಿ ಗೊರೆಬಾಳ ,ಹುಸೇನ್ ಭಾಷ ,ನರ್ಸು ಹೂಗಾರ, ಬಸವರಾಜ್ ಹಾಗೂ ವೀರು ಹೂಗಾರ ಗೆಳೆಯರ ಬಳಗ,ಕಲಾ ಬಳಗ ,ಲಕ್ಕಿ ಗ್ರೂಪ್ಸ್ ಸಿಂಧನೂರಿನ ನೌಕರರು ಇನ್ನಿತರರು ಭಾಗಿಯಾಗಿದ್ದರು.