ಅಗಸ್ಟ್ 26.ಗೊರೇಬಾಳ ಗ್ರಾಮದಲ್ಲಿ ನೊಬೆಲ್ ಪದವಿ ಮಹಾವಿದ್ಯಾಲಯ ಸಿಂಧನೂರು ವತಿಯಿಂದ ಹಮ್ಮಿಕೊಂಡಿರುವ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿರುವ ಶ್ರೀಮತಿ ಚನ್ನಬಸಮ್ಮ ಪರಶುರಾಮ ಮಲ್ಲಾಪುರ ಮಾಗಡಿ ಅವರು, ಆರೋಗ್ಯವೇ ಭಾಗ್ಯ, ಆರೋಗ್ಯ ಒಂದಿದ್ದರೆ ಬೇರೇನೂ ಬೇಡ ಅದೊಂದೇ ದೊಡ್ಡ ಸಂಪತ್ತು, ಆರೋಗ್ಯದ ಸಂಪತ್ತಿಗಿಂತ ಬೇರೇನೂ ಇಲ್ಲ ಎಂದು ಏನ್ ಎಸ್ ಎಸ್ ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣ ಪಡೆಯುವ ಉದ್ದೇಶದಿಂದ ಅಧ್ಯಯನದಲ್ಲಿ ತೊಡಗಿದ್ದೆ ಆದ್ರೆ ನೀವು ಕಂಡಿತಾ ಸಾಧಿಸುತ್ತೀರಿ ಎಂದು ಹೇಳಿದರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಯಾವುದನ್ನು ಪ್ರಾರಂಭ ಮಾಡಿರುತ್ತೀರೋ ಅದನ್ನು ನೀವೂ ಪೂರ್ಣಗೊಳಿಸಬೇಕು. ನಾವು ಪ್ರಾರಂಭ ಮಾಡ್ತೀವಿ, ಪೂರ್ಣಗೊಳಿಸದೆ ಪೇಲ್ ಅಗ್ತಿವಿ , ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲ ಉದ್ದೇಶವಾಗಿರಬೇಕು ಎಂದು ಸಲಹೆ ನೀಡಿದ್ದಲ್ಲದೆ, ಒಬ್ಬ ಸ್ತ್ರೀ ಈ ಸಮಾಜದಲ್ಲಿ ಎಲ್ಲಾ ಪಾತ್ರಗಳನ್ನು ನಿಭಾಯಿಸುತ್ತಾಳೆ. ಸ್ತ್ರೀಯನ್ನು ಕಾಮನಬಿಲ್ಲು ಗೆ ಹೋಲಿಕೆ ಮಾಡುತ್ತಾ ಕಾಮನಬಿಲ್ಲಿಗೆ ಏಳು ಬಣ್ಣಗಳು ಹೇಗೋ, ಹಾಗೆ ಒಬ್ಬ ಸ್ತ್ರೀ ಯು ಈ ಸಮಾಜದಲ್ಲಿ ಏಳು ಪಾತ್ರಗಳನ್ನು ನಿಭಾಯಿಸುತ್ತಾರೆ ಎಂದರು,ಮಹಿಳಾ ಸಬಲೀಕರಣ ಕುರಿತು ಮಾತನಾಡುತ್ತಾ ಗಂಡನ ಸಹಕಾರ ದಿಂದ ಹೆಣ್ಣು ಅಭಿವೃದ್ದಿ ಹೊಂದಲು ಸಾಧ್ಯ, ತವರ ಮನೆಯ ಸಂಸ್ಕಾರ, ಗಂಡನ ಮನೆಯ ಸಹಕಾರದಿಂದ ಇಂದು ನಾನು ಈ ತವರೂರಲ್ಲಿ ಮಾತನಾಡಲು ಸಾಧ್ಯವಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಶ್ರಿ ಶಿವನಗೌಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಉದ್ಘಾಟಿಸಿ ಈ ಎನ್ ಎಸ್ ಎಸ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಒಳ್ಳೆ ಭವಿಷ್ಯವನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ ಎಂದು ಮಾತನಾಡಿದರು.
ಪಂಪಾಪತಿ ಉಪನ್ಯಾಸಕರು ನಾವು ಈ ಎಲ್ಲಾ ಸಂದರ್ಭಗಳಲ್ಲು ಕೂಡ ಮೂರು ವ್ಯಕ್ತಿಗಳನ್ನು ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ, ಹಾಗೂ ಜ್ಞಾನ ನೀಡುವ ಶಿಕ್ಷಕನನ್ನು ನೆನಪಿಸಬೇಕು ಎಂದರು.
ಶ್ರಿ ಯಂಕೋಬ ಬೂದಿವಾಳ ಅಧ್ಯಕ್ಷತೆಯನ್ನು ವಹಿಸಿ ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕುಸಿತಿದ್ದಾವೆ ಅದನ್ನು ಸರಿಪಡಿಸುವಂತಹ ಕೆಲಸ ಈ ಎನ್ಎಸ್ಎಸ್ ಮಾಡುತ್ತದೆ ಅಲ್ಲದೆ ಸಂಸಾರದಲ್ಲಿ ಹೆಣ್ಣು ಮತ್ತು ಗಂಡು ಒಂದು ಬಂಡಿಯ ಎರಡು ಚಕ್ರಗಳಂತೆ, ಆ ಸಂಸಾರದ ಒಂದು ಬಂಡಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬೇಕು. ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಶಿಸ್ತು,ಸಮಯ ಪ್ರಜ್ಞೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಂತಹ ಒಂದು ಪ್ರಮುಖ ಕಾರ್ಯಕ್ರಮವಾಗಿದೆ ಎಂದು ಮಾತನಾಡಿದರು. ಅದೇ ರೀತಿಯಾಗಿ ಶಾಂತ ಮಾಲಿಪಾಟೀಲ್ ರವರು ಮಾತನಾಡಿ ಹೆಣ್ಣು ಒಂದು ಸಂಸಾರದ ಕಣ್ಣು, ಹೆಣ್ಣು ಮಕ್ಕಳಿಂದಲೇ ಮನೆಯ ಅಭಿವೃದ್ಧಿ, ಮನೆಗೆ ಬೆಳಕು ಅದಲ್ಲದೆ ಇವತ್ತು ಆಡುಮುಟ್ಟದ ಸೊಪ್ಪಿಲ್ಲ ಹೆಣ್ಣು ಕೆಲಸ ನಿರ್ವಹಿಸದ ಯಾವುದೇ ಕ್ಷೇತ್ರ ಇಲ್ಲ ಎಂದರು. ಪ್ರಾಚಾರ್ಯರಾದ ಆನಂದ್ ಎಸ್, ಶಿವನಗೌಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ರಾಗಲಪರ್ವಿ , ಶಿವನಗೌಡ, ಸಣ್ಣ ಶರಣೆ ಗೌಡ, ದೇವಿಂದ್ರ ಗೌಡ ನಾಗರಬಂಚಿ ಗ್ರಾಮ ಪಂಚಾಯತ ಸದಸ್ಯರು, ನಾಗಮ್ಮ ಗಂಡ ಬಸವರಾಜ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು, ಚೆನ್ನಮ್ಮ ಗಂಡ ನರಸರೆಡ್ಡಿ ನಿರ್ದೇಶಕರು ವಿಎಸ್ಎಸ್ಎನ್, ಹುಸೇನಪ್ಪ ಹೆಡಗಿಬಾಳು ನಿರ್ದೇಶಕರು ವಿ ಎಸ್ ಎಸ್ ಏನ್, ಹುಸೇನಪ್ಪ ತಂದೆ ಗಂಗಪ್ಪ ಜಿಲ್ಲಾಧ್ಯಕ್ಷರು ಅ. ಪ್ರಾ. ಶಾಲೆ, ಶರಣಪ್ಪ ತಂದೆ ಈರಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರು ಸ. ಪ್ರಾ.ಶಾಲೆ ಗೊರೇಬಾಳ, ವೀರೇಶ ಗುಡಿಯಾಳ ವರದಿಗಾರರು ಎಸ್ ಟಿ ವಿ, ಪಂಪಾಪತಿ ಹೂವಿನಬಾವಿ ವರದಿಗಾರರು ಪ್ರಜಾ ಸಾಕ್ಷಿ ದಿನಪತ್ರಿಕೆ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಹೊನ್ನಪ್ಪ ಬೆಳಗುರ್ಕಿ, ಉಪನ್ಯಾಸಕರಾದ , ಪಂಚಾಕ್ಷರಯ್ಯ, ಜ್ಯೋತಿ, ಸಿ ವಿಶ್ವನಾಥ, ಸಣ್ಣ ಯಲ್ಲಪ್ಪ, ಹನುಮೇಶ ಗುಡುದೂರು, ಕುಮಾರಿ ಝೀನತ್, ಪಂಪಾಪತಿ, ಮುಂತಾದವರು ಇದ್ದರು..