ಬಡವರ ಬಾರುಕೋಲು ಸುದ್ದಿ
ಮಸ್ಕಿ : ಸಮೀಪದ ಹಿರೇಕಡಬೂರು ಗ್ರಾಮದ ಸ.ನಂ.75 ರ ಜಮೀನು ಒತ್ತುವರಿ ಮಾಡಿದ್ದನ್ನು ತೆರುವಗೊಳಿಸಿ ಒತ್ತುವರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳುಲು ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಒತ್ತಾಯ ಪಡಿಸುತ್ತದೆ.ತಾಲ್ಲೂಕಿನ
ಹಾಲಾಪೂರು ಹೋಬಳಿಯ ಹಿರೇಕಡಬೂರು ಗ್ರಾಮದ ಸ.ನಂ.75 ರಲ್ಲಿ 3 ಎಕರೆ 24 ಗುಂಟೆ ಸರಕಾರಿ ಜಮೀನನ್ನು ಹಿರೇಕಡಬೂರು ಗ್ರಾಮದ ಪ್ರಭಾವಿಗಳಾದ 1) ಶ್ರೀ ಆಲಂಭಾಷ ತಂದೆ ಭಾಷಾಸಾಬ,2) ಖಾಜಾ ಬಂದೇನವಾಜ ತಂದೆ ಉಮರ ಸಾಬ,3) ಮಹಿಬೂಬಸಾಬ ತಂದೆ ಉಮರ ಸಾಬ ಇವರು ಒತ್ತುವರಿ ಮಾಡಿಕೊಂಡಿದ್ದು,ಸದರಿ ಜಮೀನಿನಲ್ಲಿ 1 ಎಕರೆ 29 ಗುಂಟೆ ಜಮೀನಿನಲ್ಲಿ ಭತ್ತ ಬೆಳೆದಿರುತ್ತಾರೆ.
ಈ ವಿಷಯವು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು,ಗ್ರಾಮ ಸಹಾಯಕರು ಹಾಗೂ ಕಂದಾಯ ನಿರೀಕ್ಷಕರು ಇವರೆಲ್ಲರಿಗೂ ಗೊತ್ತಿದ್ದು,ಸರಕಾರಿ ನಿಯಮದ ಪ್ರಕಾರ ಕ್ರಮ ಕೈಗೊಳ್ಳದೇ ಒತ್ತುವರಿದಾರರಿಗೆ ಬೆಂಬಲವಾಗಿ ನಿಂತುಕೊಂಡು ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ.
ಇನ್ನೂ ಇಲ್ಲಿಯ ಬಡಬಗ್ಗರು ಬಣವೆ ಹಾಕಲು,ಧನ ಕರುಗಳನ್ನು ಮೇಯಿಸಲು,ಇನ್ನಿತರ ಚಟುವಟಿಕೆ ಮಾಡಲು ಹೋದಾಗ ಸದರಿಯವರು ಸಾರ್ವಜನಿಕರನ್ನು ಬೆದರಿಸಿ ದೌರ್ಜನ್ಯ ಮಾಡುತ್ತಾರೆ.ಅಲ್ಲದೇ ಸದರಿ ಜಮೀನು ಊರಿನ ಪಕ್ಕದಲ್ಲಿ ಇರುವುದರಿಂದ ಸಾರ್ವಜನಿಕರು ಯಾವುದಾದರು ಗಾಡಿ,ಬಂಡಿ,ವಾಹನಗಳನ್ನು ನಿಲ್ಲಿಸಿದಾಗ ಸದರಿಯವರು ವಿನ:ಕಾರಣ ಜಗಳ ತೆಗೆದು ತೊಂದರೆ ನೀಡುತ್ತಾ ಕಿರಿಕಿರಿ ಮಾಡುತ್ತಾರೆ…
ಇಷ್ಟೆಲ್ಲಾ ದಿನಂಪ್ರತಿ ನಡೆಯುತ್ತಿದ್ದರು ಸರಕಾರಿ ಆಸ್ತಿಯನ್ನು ರಕ್ಷಣೆ ಮಾಡಿಕೊಡಬೇಕಾದ ಸ್ಥಳೀಯ ಕಂದಾಯ ನಿರೀಕಕರು ತಮಗೆ ಏನು ಗೊತ್ತಿಲ್ಲ ಅನ್ನುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದು, ಅಧಿಕಾರಿಗಳ ನೀರ್ಲಕ್ಷ್ಯ ವಹಿಸಿರುತ್ತಾರೆ ಅನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಇನ್ನೂ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ 1) ಶ್ರೀ ಆಲಂಭಾಷ ತಂದೆ ಭಾಷಾಸಾಬ,2) ಖಾಜಾ ಬಂದೇನವಾಜ ತಂದೆ ಉಮರಸಾಬ,3) ಮಹಿಬೂಬಸಾಬ ತಂದೆ ಉಮರಸಾಬ ಇವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
ಹಾಗೂ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಅಡಿ ಸದರಿ ಜಮೀನನ್ನು ಹಿರೇಕಡಬೂರು ಗ್ರಾಮದ ಬಡಬಗ್ಗರಿಗೆ ನಿವೇಶನ ರಚನೆ ಮಾಡಿ ಹಕ್ಕು ಪತ್ರ ವಿತರಿಸಿ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಒತ್ತಾಯ ಪಡಿಸುತ್ತೇವೆ.
ಒಂದು ವೇಳೆ ತಾವುಗಳು ಈ ಸರಕಾರಿ ಜಮೀನು ಒತ್ತುವರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳದೇ ಯಾವುದೋ ಒತ್ತಡಕ್ಕೆ ಮಣಿದು ಈ ವಿಷಯವನ್ನು ಪರಿಗಣಿಸದೆ ಹೋದರೆ ಗ್ರಾಮದ ಸಾರ್ವಜನಿಕರು ಸೇರಿ ತಹಶೀಲ್ದಾರ ಕಾರ್ಯಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ತಮ್ಮಲ್ಲಿ ತಿಳಿಯಪಡಿಸುತ್ತೇವೆ.
ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ದಾದಾ ಸಾಹೇಬ್ ಡಾ।। ಎನ್. ಮೂರ್ತಿ ಸ್ಥಾಪಿತ) ಅಶೋಕ ನಂಜಲದಿನ್ನಿ ಜಿಲ್ಲಾಧ್ಯಕ್ಷರು ರಾಯಚೂರು,ಜಮದಗ್ನಿ ಗೋನಾಳ
ತಾಲ್ಲೂಕು ಅಧ್ಯಕ್ಷರು ಮಸ್ಕಿ,ಮಲ್ಲಿಕ್ ಮುರಾರಿ ನಗರ ಅಧ್ಯಕ್ಷರು ಮಸ್ಕಿ,ಸುಭಾಷ ಹಿರೇಕಡಬೂರು ಅಧ್ಯಕ್ಷರು ಹಾಲಾಪೂರು ಹೋಬಳಿ ಘಟಕ,ಶ್ರೀಕಾಂತ ಚಿಕ್ಕಕಡಬೂರು ಅಧ್ಯಕ್ಷರು ಗುಡದೂರು ಹೊಬಳಿ ಘಟಕ,ದಲಿತ ಮುಖಂಡರು ದೇವಪ್ಪ ಹಿರೇಕಡಬೂರು,ಮೌನೇಶ ಚಿಕ್ಕಕಡಬೂರು,ಹುಲ್ಲೇಶ ವಕ್ರಾಣಿ ತಾಲ್ಲೂಕು ಕಾರ್ಯದರ್ಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಎಚ್.ಕೆ.ಬಡಿಗೇರ್
ಸಿಂಧನೂರು ಖಾಲಿ -ಖಾಲಿ ; ಬೀದಿ ವ್ಯಾಪಾರಸ್ಥರ ಅಂಗಡಿ-ಮುಗ್ಗಟ್ಟು ತೆರವು