ರಾಯಚೂರು.ಅ.೦೨ ಸರ್ಕಾರದ ಮಹತ್ತರವಾದ ಯೋಜನೆಯಾದ ಆಯುಷ್ಮಾನ ಭವ ಕಾರ್ಯಕ್ರಮವು ಸೆ.೧೩ರಂದು ರಾಷ್ಟçಪತಿಗಳಿಂದ ಉದ್ಘಾಟಿಸಲಾಯಿತು. ಮತ್ತು ರಾಯಚೂರು ಜಿಲ್ಲೆಯಲ್ಲಿ ಸೆ.೧೭ರಂದು ಅನುಷ್ಠನಗೊಂಡಿತು. ಆಯುಷ್ಮಾನ್ ಭವ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿಶೇಷ ಕಾರ್ಯಕ್ರಮವಾಗಿದೆ.
ಆಯುಷ್ಮಾನ್ ಆಪ್ಕೆ ದ್ವಾರ್ ಅಡಿಯಲ್ಲಿ ಎಲ್ಲಾ೧೯೭ ಗ್ರಾಮ ಒನ್ ಸೆಂಟರ್ ಮತ್ತು ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಎಬಿ ಪಿಎಂಜೆಎ ಕಾರ್ಡ ಸುೃಜನೆ ಮಾಡಲಾಗುತ್ತದೆ. ಇಲ್ಲಿಯವರೆಗೆ ೪೬,೦೦೦ ಜನರು ಇದರಲ್ಲಿ ನೊಂದಾಣಿ ಮಾಡಿಕೊಂಡಿರುತ್ತಾರೆ. ಈಗಾಗಲೇ ೬೭,೦೦೦ ಎಬಿ ಪಿಎಂಜೆಎ ಕಾರ್ಡಗಳು ಲಭ್ಯವಿದ್ದು ವಿತರಣೆ ಕಾರ್ಯ ನಡೆದಿದೆ. ಹಾಗೂ ಸಾರ್ವಜನಿಕರು ಡಿ.೩೧ ರವರೆಗೆ ಇದರ ಸದುಪಯೋಗ ಪಡೆಯಬಹುದಾಗಿದೆ.
ಆಯುಷ್ಮಾನ್ ಮೇಳಾ ಕಾರ್ಯಕ್ರಮದಡಿಯಲ್ಲಿ ಮೇಳಾಗಳನ್ನು ಪ್ರತಿ ಮಂಗಳವಾರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಉ.ಪ.ಕೇಂದ್ರ, ಪ್ರಾ.ಅ.ಕೇಂದ್ರ ನಗರ ಪ್ರಾ.ಆ.ಕೇಂದ್ರ, ನಮ್ಮ ಕ್ಲೀನಿಕ್ ಮತ್ತು ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ನಡೆಸಲಾಗಿದೆ. ಒಟ್ಟು ಇಲ್ಲಿಯವರೆಗೆ ೪೯೨ ಆರೋಗ್ಯ ಮೇಳಾ ಶಿಬಿರಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು೨೭,೭೯೨ ಪಲಾನುಭವಿಗಳು ಭಾಗವಹಿಸಿದ್ದು, ಎನ್.ಸಿ.ಡಿ ಸ್ಕಿçÃನಿಂಗ್ ೨೧,೬೫೫, ಕಣ್ಣಿನ ಪೋರೆಯ ಪರೀಕ್ಷೆ ೪೪೨೧, ಕ್ಷಯರೋಗ ಪರೀಕ್ಷೆ ೫೩೨೧, ಮತ್ತು ಕುಷ್ಠರೋಗ ಪರೀಕ್ಷೆ ೨೯೯೯ ಅಪೌಷ್ಠಕ ಮಕ್ಕಳು ೨೧೭ ಆಯುಷ್ ೨೧೦೬ ಪ್ರಕರಣಗಳು ಬಂದಿವೆ.
ಸಮುದಾಯ ಆರೋಗ್ಯ ಕೇಂದ್ರ ಮಟ್ಟದಲ್ಲಿ ನವೋದಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ರಿಮ್ಸ್ ರಾಯಚೂರಿನ ಸಹಯೋಗದೊಂದಿಗೆ ಪ್ರತಿ ಮಂಗಳವಾರ ಎಲ್ಲಾ ತಜ್ಞ ವೈದ್ಯರಿಂದ ಕೊಡಿದ ಆಯುಷ್ಮನ್ ಮೇಳಾ ೧೨ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಇದರಲ್ಲಿ ೨೮೪೯ ಹೊರ ರೋಗಿಗಳನ್ನು ಪರೀಕ್ಷಿಸಲಾಗಿದೆ. ಸರ್ಜರಿ ಅಡಿಯಲ್ಲಿ ೫೧ ಪ್ರಕರಣ ಪತ್ತೆ ಹಚ್ಚಿದೆ. ಕಣ್ಣಿನ ಪೊರೆ ೨೬೦, ಪ್ರಯೋಗಲಾಯದ ಪರೀಕ್ಷೆ ೧೦೬೫ ಮತ್ತು ೪೩ ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನಿರ್ದೇಶನ ಮಾಡಲಾಗಿರುತ್ತದೆ. ಈ ಮೇಳಾಗಳನ್ನು ಪ್ರತಿ ಮಂಗಳವಾರ ಆಯೋಜಿಸಲಾಗುತ್ತಿದ್ದು, ಡಿ.೩೧ರ ವರೆಗೆ ಮುಂದುವರೆಸಲಾಗುವುದು.
ಸ್ವಚತಾ ಹಿ ಸೇವಾ ಅಡಿಯಲ್ಲಿ ಸೆ.೨೭ ಮತ್ತು ಡಿ.೦೧ ರಂದು ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸ್ವಚತೆಯ ಅಭಿಯಾನವನ್ನು ಹಮ್ಮಿಕೊಂಡು ೫೦೦ ಆರೋಗ್ಯ ಸಂಸ್ಥೆ/ಕಛೇರಿಗಳಲ್ಲಿ ಸ್ವಚತೆ ಅಭಿಯಾನ ಕಾರ್ಯಕ್ರಮವನ್ನು ಮಾಡಲಾಗಿದೆ. ಅದಲ್ಲದೇ ಸೇವಾ ಪಕ್ವಾಡ ಅಡಿಯಲ್ಲಿ ಸೆ.೧೭ ರಿಂದ ಇಲ್ಲಿಯವರೆಗೆ ೧೬ ಬ್ಲಡ್ ಡೊನೆಷನ್ ಕ್ಯಾಂಪ್ ಗಳನ್ನು ಮಾಡಿ ೫೪೫ ಬ್ಲಡ್ ಯುನಿಟ್ಗಳನ್ನು ಸಂಗ್ರಹಿಸಲಾಗಿದೆ.
ಆರ್ಗನ್ಡೊನೆಷನ್ ಪ್ಲೇಡಜ್ ಅಡಿಯಲ್ಲಿ ಇಲ್ಲಿಯವರೆಗೆ ೮೮ ಜನರು ತಮ್ಮ ಅಂಗಂಗಾ ದಾನ ಮಾಡಲು ನೊಂದಾಣಿ ಮಾಡಿಸಿರುತ್ತಾರೆ. ಅ.೦೨.೧೦.೨೦೨೩ ರಂದು ಎಲ್ಲಾ ಗ್ರಾಮ/ ಗ್ರಾಮ ಪಂಚಾಯತ ಮತ್ತು ನಗರ ವಾರ್ಡಗಳಲ್ಲಿ ಆಯುಷ್ಮಾನ್ ಸಭೆಗಳಲ್ಲಿ ಆಯೋಜಿಸಲಾಗಿದೆ. ಒಟ್ಟು ೧೧೨೨. ಇದರಲ್ಲಿ ಎಬಿ ಪಿಎಂಜೆಎ ಕಾರ್ಡ ಫಲಾನುಭವಿಗಳ ನೊಂದಣಿ, ವಿತರಣೆ ಮತ್ತು ಇದರ ಉಪಯೋಗದ ಬಗ್ಗೆ ಆರೋಗ್ಯ ಶಿಕ್ಷಣ ಮತ್ತು ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಹಾಗೂ ಸರ್ವೇಕ್ಷಣಾಧಿಕಾರಿ ಡಾ.ಗಣೇಶ.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.