ಬಡವರ ಬಾರುಕೋಲು ಸುದ್ದಿ
ಮಸ್ಕಿ : ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಪೂರ್ವಭಾವಿ ಸಭೆ
ನಡೆಯಿತು.
ಈ ಸಭೆಯಲ್ಲಿ ದಲಿತ ಸಮುದಾಯದ ಹಿರಿಯ ಹೋರಾಟದ ಒಡನಾಡಿಗಳು,ಯುವ ಮುಖಂಡರು,ಬುದ್ದಿ ಜೀವಿಗಳು ಭಾಗವಹಿಸಿ ಇದೆ ಡಿಸೆಂಬರ್ 14 2024 ರಂದು ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಲು ಸ್ಥಳೀಯ ಶಾಸಕ ಆರ್ ಬಸನಗೌಡ ತುರ್ವಿಹಾಳ್ ಅವರ ಮನೆಯ ಮುಂದೆ ತಮಟೆ ಚಳುವಳಿಯನ್ನು ಮಾಡುವುದರ ಮೂಲಕ ಮನವಿ ಪತ್ರ ಸಲ್ಲಿಸಲು ಹಾಗೂ ಒಳಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸದನದಲ್ಲಿ ತಾವುಗಳು ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತಲು ತಿಳಿಸಲು ಹಾಗೂ ಡಿಸೆಂಬರ್ 16 2024 ರಂದು ಒಳಮೀಸಲಾತಿಯನ್ನ ಜಾರಿ ಗೊಳಿಸಲು ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಬೆಳಗಾವಿಗೆ ತೇರಳಬೇಕೆಂದು ಪೂರ್ವಭಾವಿ ಸಭೆಯಲ್ಲಿ ನಿರ್ಧಾರಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಮತ್ತು ಯುವ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸಿದರು.