ಸಿಂಧನೂರು ಅಕ್ಟೋಬರ್ 30. ಸಿಂಧನೂರು ನಗರದ ಗಂಗಾವತಿ ಮುಖ್ಯ ರಸ್ತೆಯ ರಾಮರಾಜ್ ಬಟ್ಟೆ ಅಂಗಡಿಯ ಮುಂದೆ ಬಿಡಾಡಿ ದನಗಳು ಅಡ್ಡಾದಿಡ್ಡಿ ಅಲೆದಾಡುತ್ತಿದ್ದು ಹಾಲಿನ ಕ್ಯಾನ್ ಸಾಗಿಸುವ ಟಾಟಾ ಏಸ್ ನೇರವಾಗಿ ಹಸಿವಿನ ಮೇಲೆ ಹಾದು ಹೋಗಿ ಸ್ಥಳದಲ್ಲಿ ಹಸು ಒಂದು ಮೃತಪಟ್ಟಿದೆ ಇನ್ನೊಂದು ಹಸುಬಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ರಾತ್ರಿ ನಡೆದಿದೆ.
ನಗರಸಭೆ ನಿರ್ಲಕ್ಷ್ಯವೆ ಈ ದುರ್ಘಟನೆಗೆ ಕಾರಣ ಸಾರ್ವಜನಿಕರಿಂದ ಆಕ್ರೋಶ
ನಗರದ ರಾಯಚೂರು ಮುಖ್ಯ ರಸ್ತೆ ಕುಷ್ಟಗಿ ಮುಖ್ಯ ರಸ್ತೆ ಗಂಗಾವತಿ ಮುಖ್ಯರಸ್ತೆ ಗಾಂಧಿ ಸರ್ಕಲ್ ಚನ್ನಮ್ಮ ಸರ್ಕಲ್ ಸೇರಿದಂತೆ ಪಟ್ಟಣದಲ್ಲಿ ವಾಹನ ಸವಾರರಿಗೆ ತಲೆ ನೋವಾಗಿ ಅಪಘಾತಕ್ಕೆ ಕಾರಣವಾಗುತ್ತಿರುವ ಬೀಡಾಡಿ ದನಗಳ ಬಗ್ಗೆ ಸ್ವ ವಿಸ್ತಾರವಾಗಿ ಬಡವರ ಬಾರು ಕೋಲು ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು ಇದನ್ನರಿತ ನಗರ ಸಭೆಯವರು ಕೆಲ ದಿನಗಳ ಹಿಂದೆ ಬೀಡಾಡಿ ದನಗಳ ಮಾಲೀಕರಿಗೆ ದಂಡ ವಿಧಿಸಿ ಇನ್ನುಳಿದ ಹಸುಗಳನ್ನು ಗೋಶಾಲೆಗೆ ಕಳುಹಿಸಿತ್ತು.
ಮತ್ತೆ ಅದೇ ರಾಗ ಅದೇ ಹಾಡು
ಇಷ್ಟಾದ ಮೇಲು ಕೂಡ ದಂಡ ಕಟ್ಟಿದ ನಂತರವೂ ಕೂಡ ಬಿಡಾಡಿ ದನಗಳ ಮಾಲೀಕರು ಪುನಃ ಅದೇ ರಾಗ ಅದೇ ಹಾಡು ಎನ್ನುವಂತೆ ಬಿಡಾಡಿ ದನಗಳನ್ನು ರಸ್ತೆಗೆ ಬಿಟ್ಟಿದ್ದಾರೆ ನಗರಸಭೆಯವರು ಮಾತ್ರ ಕಣ್ಣಿಗೆ ಕಂಡರು ಕಾಣದಂತೆ ಪೌರಾಯಿಕ್ತರ ನಡಿಗೆ ನೋಡಿದರೆ ಮತ್ತೆ ಯಾರಾದರೂ ಸುದ್ದಿ ಮಾಡಿದರೆ ಮಾತ್ರ ಕ್ರಮ ತೆಗೆದುಕೊಳ್ಳುತ್ತಾರಾ? ಅಲ್ಲಿಯವರೆಗೆ ಕೈಕಟ್ಟಿ ಕೂಡುತ್ತಾರಾ ಅನ್ಯಾಯವಾಗಿ ಹಸುಗಳು ಸಾಯುತ್ತಿವೆ ಈಕಡೆ ವಾಹನ ಸವಾರರು ಕೂಡ ಅಪಘಾತ ಕೀಳಾಗಿ ನೋವು ಅನುಭವಿಸುವಂಥ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.