ಮಸ್ಕಿ : ತಾಲೂಕಿನ ಅಂಕುಶದೊಡ್ಡಿ,ಮಾರಲದಿನ್ನಿ,ಅಡವಿಬಾವಿ (ಮಸ್ಕಿ) ಗ್ರಾಮ ಪಂಚಾಯತಿಯಲ್ಲಿ ಗುರುವಾರ ಬೆಳಗ್ಗೆ 8 ಕ್ಕೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ ಯಾದವ್ ಅವರು ತೆರಿಗೆ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿದರು.
ತದ ನಂತರ ಮಾತನಾಡಿ,ಸ್ಥಳೀಯರು ತೆರಿಗೆ ಪಾವತಿಸಿದರೆ,ಮಾತ್ರ ಗ್ರಾಮ ಪಂಚಾಯತಿಗಳ ಸಿಬ್ಬಂದಿ ವೇತನ ಇನ್ನಿತರೆ ಆಡಳಿತಾತ್ಮಕ ವೆಚ್ಚಕ್ಕೆ ಅನುಕೂಲವಾಗಲಿದೆ.ಈ ಹಿನ್ನಲೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ಎರಡನೇ ಗುರುವಾರವಾದ ಇಂದು ತೆರಿಗೆ ವಸೂಲಾತಿ ಅಭಿಯಾನ ಜರುಗಿದೆ.
ಆದ್ದರಿಂದ ಸ್ಥಳೀಯರು ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಗ್ರಾ.ಪಂ ಕರ ವಸೂಲಿಗಾರರು ನಿಗದಿಪಡಿಸುವ ಮೊತ್ತವನ್ನು ಪಾವತಿಸಿ ಸಹಕರಿಸಬೇಕು ಎಂದರು.
ಇನ್ನೂ ಸಹಾಯಕ ನಿರ್ದೇಶಕರಾದ (ಪಂಚಾಯತ್ ರಾಜ್) ಸೋಮನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಹಾಲಾಪುರದಲ್ಲಿ ತೆರಿಗೆ ವಸೂಲಾತಿ ಅಭಿಯಾನ ಜರುಗಿತು.
ಒಟ್ಟಾರೆಯಾಗಿ ಮಸ್ಕಿ ತಾಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 15 ಲಕ್ಷ ರೂ.ಕ್ಕೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ.
ಹಾಗೂ ತಲೇಖಾನ್,ಮಟ್ಟೂರು,ಮೆದಕಿನಾಳ,ಸಂತೆಕಲ್ಲೂರು,ಗುಡದೂರು,ಬಪ್ಪೂರು ಗ್ರಾ.ಪಂಗಳು ತೆರಿಗೆ ವಸೂಲಾತಿಯಲ್ಲಿ ಮುಂಚೂಣಿಯಲ್ಲಿದ್ದು,ರಾತ್ರಿ 8 ರವರೆಗೆ ತೆರಿಗೆ ವಸೂಲಾತಿ ಅಭಿಯಾನ ಜರುಗಿತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು,ಕರವಸೂಲಿಗಾರರು,ಸಿಬ್ಬಂದಿ ವರ್ಗದವರು ಇದ್ದರು.
ವರದಿ : ಎಚ್.ಕೆ.ಬಡಿಗೇರ್
ಸಿಂಧನೂರಿನ ಸಾರ್ವಜನಿಕರು ಕುಡಿದಿದ್ದು ನೀರಲ್ಲ ಚರಂಡಿ ನೀರು.! || DRINAGE DRINKING WATER ||