ಸೆಪ್ಟಂಬರ್ 29.ಮೈಸೂರಿನಲ್ಲಿ ಭಾನುವಾರ ನಡೆದ ಬಿಸಿಎಂ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಿಡಿಗೋಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕೊಟ್ರೇಶ.ಬಿ ಅವರಿಗೆ ‘ಯುವ ಸಾಧಕ’ ಪ್ರಶಸ್ತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದರು ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ಜರುಗಿದ
ಬಿ.ಸಿ.ಎಂ ಹಾಸ್ಟೇಲ್ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಲಾಯಿತು.
ಬಿಸಿಎಮ್ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಹತ್ತು ಜನ ಸಾಧಕರನ್ನು ಗುರುತಿಸಿ ಈ ಯುವ ಸಾಧಕ ಪ್ರಶಸ್ತಿಯನ್ನು ನೀಡಲಾಯಿತು .ಕಲ್ಯಾಣ ಕರ್ನಾಟಕ ವಿಭಾಗದಿಂದ ಕೊಟ್ರೇಶ ಬಿ ಅವರನ್ನು ಆಯ್ಕೆಮಾಡಲಾಗಿತ್ತು.
ಶಿಕ್ಷಕ ಕೊಟ್ರೇಶ್ ಅವರ ಕ್ರಿಯಾಶೀಲ ಚಟುವಟಿಕೆಯಾದ ಪೆನ್ಸಿಲ್ ಮಕ್ಕಳ ಪತ್ರಿಕೆಯು ನಾಡಿನಾದ್ಯಂತ ಗಳಿಸಿರುವ ಖ್ಯಾತಿ ಮತ್ತು ಸಮುದಾಯವನ್ನು ಶಾಲೆಯ ಕಡೆಗೆ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯದ ಸಹಕಾರದಿಂದ ಶಾಲಾ ಅಭಿವೃದ್ಧಿ. ರಾಜ್ಯಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಹಾಗೂ ಶಿಕ್ಷಣ ಇಲಾಖೆಯ ಯೋಜನಾ ಸಮಿತಿಯಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಮಕ್ಕಳಿಗೆ ಬೇಕಾಗಿರುವಂತಹ ಕಲಿಕೋಪಕರಣಗಳನ್ನು ದಾನಿಗಳ ನೆರವಿನಿಂದ ಮಕ್ಕಳಿಗೆ ತಲುಪಿಸುವಲ್ಲಿ ಕಾರ್ಯದಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇವರ ಸಾಧನೆಯ ಪರಿಗಣಿಸಿ ಈ ಗೌರವ ಪುರಸ್ಕಾರ ನೀಡಲಾಗಿದೆ ಈ ಹಿಂದೆ202-21 ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಗುಜರಾತಿನ ಬರೋಡ ವಿಶ್ವವಿಧ್ಯಾಲಯದ ರಾಷ್ಟ್ರೀಯ ಯುವ ಸಾಧಕ ಪ್ರಶಸ್ತಿ ಹಾಗೂ ಪ್ರಜಾವಾಣಿ ಯುವಸಾಧಕ ಪ್ರಶಸ್ತಿ ಪಡೆದಿರುವುದನ್ನು ಇಲ್ಲಿ ನೆನಪಿಸಬಹುದಾಗಿದೆ ಈ ಗೌರವಕ್ಕೆ ಪಾತ್ರರಾಗಿರುವ ಕೊಟ್ರೇಶ ಬಿ ಅಚರಿಗೆ ತಿಡಿಗೋಳ ಪ್ರೌಢಶಾಲಾ ಮುಖ್ಯಗುರು ದಿನೇಶ.ಕೆ.ಪಿ.ಸಹಶಿಕ್ಷಕರು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾದ ಬೀರಪ್ಪ ಶಂಭೋಜಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ..