ರಾಯಚೂರು ಜುಲೈ 26. ಬಿಸಿಲು ನಾಡು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ರಾಯಚೂರು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಅವಮಾನ ವರದಿ ಆಧರಿಸಿ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಮತ್ತು ಸದ್ಯ ಒಂದು ದಿನಕ್ಕೆ ಮಾತ್ರ ರಜೆ ಘೋಷಿಸಿರುವ ಜಿಲ್ಲಾ ಆಡಳಿತ ಗ್ರಾಮೀಣ ಭಾಗದಿಂದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಹಿನ್ನೆಲೆ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.
ಬೆನ್ನು ಬಿಡದೆ ಕಳೆದು ಒಂದು ವಾರದಿಂದ ಜಿಟಿಜಿಟಿ ಸುರಿಯುತ್ತಿರುವ ಮಳೆ ಬಿಸಿಲು ನಾಡು ಮಲೆನಾಡಾಗಿ ಮಾರ್ಪಟ್ಟಂತೆ ಕಾಣುತ್ತಿದೆ ಹೌದು, ಆತ್ಮೀಯ ಓದುಗರೇ ಜಿಲ್ಲೆಯಾದ್ಯಂತ ಹಗಲು ರಾತ್ರಿ ಎನ್ನದೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಸಾರ್ವಜನಿಕರಿಗೆ ದಿನನಿತ್ಯದ ಚಟುವಟಿಕೆಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಸಹ ಜಿಟಿ ಜಿಟಿ ಮಳೆಯಲ್ಲಿ ಜರ್ಕಿನ್ (ಮಳೆಕಾಗದ) ಛತ್ರಿಗಳನ್ನು ಉಪಯೋಗಿಸಿಕೊಂಡು ಶಾಲಾ-ಕಾಲೇಜುಗಳಿಗೆ ಹೋಗುವಂಥ ಪರಿಸ್ಥಿತಿ ಎದುರಾಗಿತ್ತು ಗ್ರಾಮೀಣ ಪ್ರದೇಶಗಳಿಂದ ಬರುವಂತ ವಿದ್ಯಾರ್ಥಿಗಳು ಈ ಜಿಟಿ ಜಿಟಿ ಮಳೆಗೆ ಒದ್ದೆಯಾಗಿ ಶೀತ ನೆಗಡಿ ಕೆಮ್ಮು ಜ್ವರದಿಂದ ಅನಾರೋಗ್ಯರಾಗಿದ್ದಾರೆ.