ಬಡವರ ಬಾರುಕೋಲು ಸುದ್ದಿ
ಮಸ್ಕಿ : ಲಿಂ.ಚನ್ನಮಲ್ಲ ಶಿವಯೋಗಿಗಳ 69 ನೇ ಜಾತ್ರಾ ಮಹೋತ್ಸವವು ತಾಲ್ಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಭಾನುವಾರ ಸಹಸ್ರಾರು ಸಹಸ್ರಾರು ಜನ ಸಾಗರದಲ್ಲಿಯೂ ಶಾಂತಿಯುತವಾಗಿ ಜರುಗಿತು.
ಬೆಳಿಗ್ಗೆ ಚನ್ನಮಲ್ಲ ಶಿವಯೋಗಿಗಳ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಹಾಗೂ ಗಂಗಾ ಸ್ಥಳದಿಂದ ಕುಂಭ ಹಾಗೂ ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು.
ನಂತರ ನೇರವಾಗಿ ಕಾರ್ಯಕ್ರಮದ ವೇದಿಕೆಗೆ ಗಣ್ಯರನ್ನು ಬರ ಮಾಡಿಕೊಂಡು ಆಸನ ಸ್ವೀಕಾರ ಮಾಡಿದ ಗಣ್ಯರಿಗೆ ಶಾಲು ಹೊದಿಸಿ ಮಠದ ಹಿನ್ನೆಲೆ ಇರುವ ಪುಸ್ತಕ ಹಾಗೂ ನೆನೆಪಿನ ಕಾಣಿಕೆ ನೀಡಿ ವೇದಿಕೆಗೆ ಬರಮಾಡಿಕೊಂಡರು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನಾ ಭರತ ನಾಟ್ಯ ಮಾಡಲಾಯಿತು.
ವಿಶೇಷ ಎಂಬಂತೆ ತಮ್ಮ ಇಳಿ ವಯಸ್ಸಿನಲ್ಲೂ 3 ನವ ದಂಪತಿಗಳಿಗೆ ಹೊಸ ಸಮವಸ್ತ್ರ,ಬಂಗಾರ,ಹಸಿರು ಬಳೆ,ಹಾಗೂ ಮದುವೆ ಕಾರ್ಯಕ್ಕೆ ಬೇಕಾಗುವವನ್ನೂ ನೀಡಿ ತಮ್ಮ ಅಂತರಾಳದ ಚನ್ನಮಲ್ಲ ಸ್ವಾಮೀಜಿರವರ ಮೇಲಿನ ಭಕ್ತಿ ಮತ್ತು ಪ್ರೀತಿಗೆ ಹಾಗೂ ಅವರ ಸ್ಮರಣಾರ್ಥದ ಮಠಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದ ಬಸಮ್ಮ ಗಂಡ ದಿವಂಗತ ಮಲ್ಲಪ್ಪ ಕೋಸಗಿ ಅವರನ್ನು ವೇದಿಕೆಗೆ ಅಥಿತಿಯಾಗಿ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿದರು.
ನಂತರ ಶ್ರೀ ಮಠದ 501 ಬಾಲಮಕ್ಕಳಿಗೆ ಹಾಗೂ ಮುತ್ತೈದೆ ಮಹಿಳಾ ಭಕ್ತರಿಗೆ ಅತೀ ಶಿಸ್ತು ಬದ್ಧವಾಗಿ ಅತ್ಯಂತ ಗೌರವಯುತವಾಗಿ ಅಂದರೆ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಹೇಗೆ ಸಂಪ್ರದಾಯದಂತೆ ಹುಡಿ ತುಂಬಲಾಗುವದೋ ಅದೇ ಮಾದರಿಯಲ್ಲಿಯೇ ಅವರ ಹುಡಿಗಳಿಗೆ ಶ್ರೀಗಳೇ ಹುಡಿ ಸಾಮಾನುಗಳನ್ನು ಹಾಕುವ ಮೂಲಕ ಹೊಸತನ ಕಾರ್ಯಕ್ರಮವು 2 ನೇ ವರ್ಷವೂ ಯಶಸ್ವಿಯಾಗಿ ಜರುಗಿತು.
ಮಠದಲ್ಲಿಯೇ ಜರುಗಿದ 3 ಸಾಮೂಹಿಕ ವಿವಾಹವಾದ ನವ ದಂಪತಿಗಳಿಗೆ ಅಕ್ಷತೆ ಕಾಳು ಹಾಕುವ ಮೂಲಕ ವೇದಿಕೆಯ ಗಣ್ಯರು ಆಶೀರ್ವದಿಸಿದರು.
ಈ ಕಾರ್ಯಕ್ರಮದ ಕುರಿತು ಮಾನವಿ ಕಲ್ಮಠದ ಶ್ರೀಗಳು,ಕ್ಷೇತ್ರದ ಹಾಲಿ ಶಾಸಕ ಆರ್ ಬಸನಗೌಡ ತುರುವಿಹಾಳ ಹಾಗೂ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿದರು.
ಕಾರ್ಯಕ್ರಮದ ನಂತರ ಲಡ್ಡು,ಅನ್ನ – ಸಾಂಬಾರ್ ವನ್ನು ಪ್ರಸಾದ ರೂಪದಲ್ಲಿ ಸಹಸ್ರಾರು ಭಕ್ತರು ಸೇವಿಸಿದರು.
ಸಂಜೆ 6 ಗಂಟೆಗೆ ಶ್ರೀ ಮಠದ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಸಂಘದ ಅಧ್ಯಕ್ಷ ಮೈಬೂಬ ಸಾಬ್,ಎಲಿಗಾರ್ ಶರಣಪ್ಪ,ಬಸವ ಶರಣರು ಸಂತೆಕೆಲ್ಲೂರು ಮಠ,ಚನ್ನಮಲ್ಲ ಶಿವಯೋಗಿಗಳು ಮೆದಿಕಿನಾಳ ಹಾಗೂ ಗ್ರಾಮದ ಮತ್ತು ಮಠದ ಸಕಲ ಸದ್ಭಕ್ತರು ಇದ್ದರು.
ವರದಿ : ಎಚ್.ಕೆ.ಬಡಿಗೇರ್
ಗರ್ಭಿಣಿಯರ ಸರಣಿ ಸಾವಿನ ಹಿನ್ನೆಲೆ ಬಿಜೆಪಿಯ ಮುಖಂಡ ಕೆ ಕರಿಯಪ್ಪ ತಾ. ಸಾರ್ವಜನಿಕ ಆಸ್ಪತ್ರೆಗೆ ಭೇಟಿ