ಏಪ್ರಿಲ್ 13 .ಸಿಂಧನೂರು ತಾಲೂಕಿನ ರಾಯಚೂರು ರೋಡ್ ನಿಂದ RH ನಂಬರ್ 3 (ಬಂಗಾಲಿ ಕ್ಯಾಂಪ್ 3) ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನೂತನವಾಗಿ 3 ಕಿಲೋ ಮೀಟರ್ ವರೆಗೂ ಡಾಂಬರೀಕರಣ ನಡೆದಿದ್ದು ಗುಣ ಮಟ್ಟದ ಕಂಕರ್ ,ಜಲ್ಲೆ,ಹಾಕದೆ ಕಳಪೆ ಕಾಮಗಾರಿ ನಡೆದ ವಿಷಯವನ್ನು ಅರಿತ KRS ಪಕ್ಷದ ಸೈನಿಕರು ಈ ವಿಷಯವನ್ನು ಲೈವ್ ಮಾಡುವ ಮೂಲಕ ಅಲ್ಲಿನ ಕಳಪೆ ಕಾಮಗಾರಿ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಟೆಂಡರ್ ದಾರರಿಗೆ ಸಂಪರ್ಕ ಮಾಡಿದರು ಯಾರು ಕೂಡ ಸಂಪರ್ಕಕ್ಕೆ ಸಿಗಲಿಲ್ಲ.
ಸಂಬಂಧ ಪಟ್ಟ ಶಾಸಕರು ,ಅಧಿಕಾರಿಗಳು ,JE,AEE ಗಳು ಪರ್ಷೆಂಟೆಜ್ ಲೆಕ್ಕಾಚಾರದಲ್ಲಿ ರಸ್ತೆ ಕಾಮಗರಿಗಳಿಗನ್ನು ಮಾಡುತ್ತಿದ್ದು ಈ ಕಾಮಗಾರಿಗೆ ಯಾವುದೇ ನಾಮ ಫಲಕ ಹಾಕದೆ ಯಾವ ಇಲಾಖೆಯಿಂದ ,ಯಾರು ಟೆಂಡರ್ ದಾರರು,ಅಂದಾಜು ಮೊತ್ತ ಎಸ್ಟು ಎನ್ನುವ ಮಾಹಿತಿ ಇಲ್ಲದೆ ಕಾಮಗಾರಿ ನಡೆಯುತ್ತಿದೆ ಇದನ್ನು ಇಂತಹ ಕಳಪೆ ಕಾಮಗಾರಿ ಕುರಿತು ಯಾರು ಕೂಡ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ ಎನ್ನುವಂತಾಗಿದೆ ಎಂದು KRS ಪಕ್ಷದ ಜಿಲ್ಲಾ ಅಧ್ಯಕ್ಷ ನಿರುಪಾದಿ ಗೋಮರ್ಸಿ ಆರೋಪಿಸಿದರು…
ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಆದಪ್ಪ ಅಂಕುಶ ದೊಡ್ಡಿ , ಸಿಂಧನೂರು ತಾಲೂಕ ಉಪಾಧ್ಯಕ್ಷ ಶರಣಪ್ಪ ಹಂಚಿನಾಳ ,ತಾಲೂಕ SC/ST ಘಟಕದ ಅಧ್ಯಕ್ಷ ದ್ಯವನ್ನ ಪುಲದಿನ್ನಿ ಇದ್ದರೂ