ಕಂದಾಯ ಇಲಾಖೆಯಲ್ಲಿ ಕಡತಗಳು ಮಾಯವಾಗುತ್ತದೆ, ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಾರೆ, ಇಂತಾಹ ಕೆಲಸಕ್ಕೆ ಇಷ್ಟು ಲಂಚ ಕೊಡಬೇಕು ಎಂಬುದು ಈಗ ಹಳೆಯ ಮಾತಾಗಿದ್ದು, ಮೂಲ ಮಾಲೀಕರ ಹೆಸರನ್ನು ಮನಬಂದoತೆ ತಿದ್ದುಪಡಿ ಮಾಡಿ ಬೇರೆಯವರ ಹೆಸರನ್ನು ಈ ಕಂದಾಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಪಂಪಾಪತಿ ಗೊರಲೂಟಿ ಇವರು ಬಡವರ ಬಾರಕೋಲು ಪತ್ರಿಕೆಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಎನಿದರ ಅಸಲಿಯತ್ತು
ಸಿಂಧನೂರು ತಾಲೂಕಿನ ತುರುವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗೊರಲೂಟ ಗ್ರಾಮದ ಜಮೀನು ಸರ್ವೆ ನಂ. ೧೩೫/*/೨ ಕ್ಷೇತ್ರ ೦೯ ಎಕರೆ ಏಳು ಗುಂಟೆ ಜಮೀನು ನಿಂಗಪ್ಪ ತಂದೆ ವಿರುಪಣ್ಣ (ಪಹಾಣಿಯಲ್ಲಿ ನಿಂಗಪ್ಪ ಎಂದು ನಮೂದಿಸಲಾಗಿದೆ) ಇವರ ಹೆಸರಿನಲ್ಲಿ ಈ ಜಮೀನು ಇದ್ದು, ಈ ಜಮೀನು ಅವರ ಪೂರ್ವಿಕರಿಂದ ಇವರಿಗೆ ಬಂದಿದ್ದು, ಸಾಗುವಳಿಯಲ್ಲಿ ಕೂಡಾ ಅವರೇ ಇರುತ್ತಾರೆ. ಮತ್ತು ಈ ನಿಂಗಪ್ಪÀ್ಪ ಇವರು ಅವಿದ್ಯಾವಂತರಾಗಿರುತ್ತಾರೆ. ಈ ನಿಂಗಪ್ಪÀ್ಪ ಇವರ ಮಾಲೀಕತ್ವದ ಹೆಸರು ಪಹಾಣಿ ಕಾಲಂ ನಂ. ೯ ರಲ್ಲಿ ೧೯೮೩ ನೇ ಸಾಲಿಗೆ ಮುಂದುವರೆದಿರುತ್ತದೆ. ನಂತರದಲ್ಲಿ ಅಂದಿನ ಕಂದಾಯ ಅಧಿಕಾರಿಗಳಾದ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿಕೊಂದು ಇನ್ನಿಲ್ಲದ ಆಮಿಷಕ್ಕೆ ಒಳಗಾಗಿ ಇವರ ಮೂಲ ಮಾಲೀಕತ್ವದ ಹೆಸರನ್ನು ರದ್ದುಪಡಿಸಿ ಇವರ ಬದಲಾಗಿ ಯಂಕಣ್ಣ ತಂದೆ ಹನುಮಂತಪ್ಪ ಇವರ ಹೆಸರನ್ನು ಸೇರ್ಪಡೆ ಮಾಡುತ್ತಾರೆ. ಈ ವಿಷಯ ಮೂಲ ಮಾಲೀಕರಿಗೆ ತಿಳಿದಿರುವದಿಲ್ಲ ಎಂದು ಪಂಪಾಪತಿ ತಿಳಿಸುತ್ತಾ, ಆ ಸಮಯದಲ್ಲಿ ಈ ಬದಲಾವಣೆಗಾಗಿ ವರ್ಗಾವಣೆ ಆಗಿರುವದಿಲ್ಲ, ಯಾವುದೇ ದಾಖಲೆಗಳ ಪುರಾವೆ ಇರುವದಿಲ್ಲ. ೨೦೧೯-೨೦ ನೇ ಸಾಲಿನಲ್ಲಿ ಬದಲಾವಣೆಯಾದವರ ಹೆಸರಿನಲ್ಲಿ ಮ್ಯೂಟೇಶನ್ ಆಗುತ್ತದೆ. ಅದರ ಸಂಖ್ಯೆ ಹೆಚ್- ೨ /೨೦೧೯-೨೦ ದಿನಾಂಕ ೧೮-೦೭-೨೦೧೯ ಇದ್ದು, ಅಲ್ಲಿಯವರೆಗೆ ಪಹಾಣಿಯಲ್ಲಿ ಕೇವಲ ಮಾಲೀಕತ್ವದ ಹೆಸರು ಮುಂದುವರೆದಿರುತ್ತದೆ. ಅಂದರೆ ತಮಗೆ ಅನುಕೂಲವಾದ ಸಮಯ ನೋಡಿಕೊಂಡು ಈ ವರ್ಗಾವಣೆ ಮಾಡಿರುವ ಸಾಧ್ಯತೆಗಳು ಇರುತ್ತದೆ ಎಂಬುದು ಮಾತ್ರ ಸತ್ಯ ಎಂದು ಪಂಪಾಪತಿ ತಮಗಾದ ಅನ್ಯಾಯವನ್ನು ಹೇಳುತ್ತಾರೆ., ಈ ಮಧ್ಯದಲ್ಲಿ ತಮ್ಮ ತಂದೆಯವರಾದ ನಿಂಗಪ್ಪ ಇವರು ೨೦೦೬ ನೇ ಸಾಲಿನಲ್ಲಿ ಮರಣ ಹೊಂದಿರುತ್ತಾರೆ. ನಾನು ಕೂಡಾ ಅವಿದ್ಯವಂತನಾಗಿದ್ದು, ಇದರ ಮಾಹಿತಿ ನನಗೆ ತಿಳಿದಿರುವದಿಲ್ಲ.
ನಂತರದಲ್ಲಿ ಸಂಬoಧಿಸಿದ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗೆ ಸಂಬoಧಿಸಿದ ದಾಖಲೆಗಳನ್ನು ಕೇಳಿದರೆ ಸರಿಯಾದ ಮಾಹಿತಿ ನೀಡುವದಿಲ್ಲ, ದಾಖಲೆಗಳು ಲಭ್ಯವಿರುವದಿಲ್ಲ ಎಂದು ಹೇಳಿ ಕಳಿಸುತ್ತಾರೆ. ಈ ಸಂದರ್ಭದಲ್ಲಿ ಗಣಕ ಯಂತ್ರದ ತತ್ರಾಂಶದಲ್ಲಿ ಸೇರ್ಪಡೆ ಮಾಡುವ ಕೆಲಸ ಇದ್ದಿಲ್ಲ, ಎಲ್ಲವನ್ನು ಬರಹದ ಮೂಲಕ ಮಾಡಬೇಕಾಗಿದ್ದು, ಇದನ್ನು ದುರುಪಯೋಗ ಪಡಿಸಿಕೊಂಡ ಈ ಅಧಿಕಾರಿಗಳು ಸಾಕಷ್ಟು ಹಣ ತಿಂದು ಬದಲಾವಣೆ ಮಾಡಿದ್ದಾರೆ ಎಂದು ಅವರು ತಿಳಿಸುತ್ತಾ, ಈ ಕುರಿತಂತೆ ಸಂಬoಧಿಸಿದ ನ್ಯಾಯಾಲಯದಲ್ಲಿ ಆರ್.ಆರ್.ಟಿ ಪ್ರಕರಣ ದಾಖಲಿಸಲಾಗಿದೆ.
ಈ ವಿಷಯವನ್ನು ಮುಂದಿಟ್ಟುಕೊoಡು ತಹಶೀಲ್ದಾರರು ಸಿಂಧನೂರು ಇವರನ್ನು ಈ ಪತ್ರಿಕೆ ಸಂಪರ್ಕಿಸಿ ವಿವರ ಕೇಳಿದಾಗ “ ಹೌದಾ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ತಹಶೀಲ ಕಾರ್ಯಾದಲಯದ ಪ್ರಕರಣದ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಕರೆಯಿಸಿ” ತಹಶೀಲ್ದಾರರು ವಿಚಾರಿಸಲಾಗಿ ಈ ವಿಷಯ ಹೇಗಾಯಿತು, ಎನೋ ಆಗಿಬಿಟ್ಟಿದೆ, ಬೇರೆಯವರ ಹೆಸರು ಸಿಕ್ಕಿಲ್ಲ, ಹೀಗಾಗಿ ಪ್ರಮಾದ ವಾಗಿದೆ” ಎಂಬ ಬೇ ಜವಬ್ದಾರಿ ಉತ್ತರವನ್ನು ತಹಶೀಲ್ದಾರರಿಗೆ ನಿಡುತ್ತಾರೆ. ಇದು ಮಾಡಲು ಬರುವದಿಲ್ಲ, ಯಾವ ರೀತಿ ಮಾಡಿದ್ದೀರಿ, ಇಷ್ಟು ಕಾಲ ವಿಳಂಬ ಆಗಲು ಕಾರಣವೇನು, ಇದು ಸಾಮಾನ್ಯ ವಿಷಯವಾಗಿರುವದಿಲ್ಲ, ಆಗಿನ ಅಧಿಕಾರಿಗಳು ಯಾರು ಇದ್ದರು, ಯಾರ ಬಳಿ ಈ ಫೈಲ ಇದೆ ಎಲ್ಲವನ್ನು ವಿಚಾರಣೆಗೆ ಒಳಪಡಿಸಿರಿ, ಅ ಸಮಯದಲ್ಲಿ ತಾವುಗಳು ಇದ್ದಿಲ್ಲ, ಹಿಂದಿನ ತಹಶೀಲ್ದಾರರು ಇದ್ದಾಗ ಆಗಿದ್ದು, ಈ ವಿಷಯವಾಗಿ ಕಂದಾಯ ನಿರೀಕ್ಷಕರಾದ ರಂಗಸ್ವಾಮಿಯವರನ್ನು ಕೇಳುತ್ತೇನೆ.