ಸಿಂಧನೂರು ಏಪ್ರಿಲ್ 05.ಭಾರತದ ರಾಷ್ಟ್ರಧ್ವಜವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಪ್ರತಿದಿನ ಹಾರಿಸಬೇಕೆಂದು ಸರ್ಕಾರದ ಆದೇಶವಿದೆ ಭಾರತದ ರಾಷ್ಟ್ರಧ್ವಜವು ಸಮಗ್ರ ಭಾರತೀಯರ ಭರವಸೆ ಭಾವೈಕ್ಯತೆ ಮಹಾತ್ವಕಾಂಕ್ಷೆ ಹಾಗೂ ಹೆಮ್ಮೆಯ ಪ್ರತೀಕವಾಗಿದೆ.
ರಾಷ್ಟ್ರಧ್ವಜದ ಬಗ್ಗೆ ಸಾರ್ವತ್ರಿಕ ವಾತ್ಸಲ್ಯ ಗೌರವ ಹಾಗೂ ಸ್ವಾಮಿನಿಷ್ಠೆಯನ್ನು ಭಾರತೀಯರು ವ್ಯಕ್ತಪಡಿಸಬೇಕಾಗಿದೆ ರಾಷ್ಟ್ರೀಯ ಸ್ವಾಭಿಮಾನ ವೈಭವ ಹಾಗೂ ಹೆಗ್ಗಳಿಕೆಯ ಪ್ರತಿಕವಾಗಿರುವ ರಾಷ್ಟ್ರಧ್ವಜವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳು ತಾಲೂಕು ಪಂಚಾಯಿತಿಗಳು ಹಾಗೂ ಜಿಲ್ಲಾ ಪಂಚಾಯಿತಿಗಳು ತಮ್ಮ ಕಾರ್ಯಾಲಯದ ಆವರಣದಲ್ಲಿ ನಿರ್ಮಿಸುವ ಧ್ವಜ ಸ್ತಂಭದಲ್ಲಿ ಪ್ರತಿದಿನ ಘನತೆ ಮತ್ತು ಗೌರವಿತವಾಗಿ ಹಾರಾಡಿಸಲು ಸರ್ಕಾರ ಸೂಚಿಸಲಾಗಿತ್ತು
ರಾಷ್ಟ್ರಧ್ವಜ ಪ್ರದರ್ಶನವನ್ನು ಲಾಂಛನ ಮತ್ತು ಅಭಿದಾನ ( ಅಸಮರ್ಪಕ ಬಳಕೆಯ ತಡೆ ) ಕಾಯಿದೆ 1950 ಮತ್ತು ರಾಷ್ಟ್ರ ಘನತೆಯಡೆಗಿನ ಅಪಮಾನ ತಡೆ ಕಾಯಿದೆ 1971 ಇವುಗಳ ಅನುಗುಣವಾಗಿ ಭಾರತದ ಧ್ವಜ ಸಹಿತ ಎರಡನ್ನು ರೂಪಿಸಿದ್ದು ಇದರಲ್ಲಿ ರಾಷ್ಟ್ರ ಧ್ವಜದ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಆಚರಣೆ ಸಂಪ್ರದಾಯ ಮತ್ತು 1971 ಇವುಗಳ ಅನುಗುಣವಾಗಿ ಭಾರತದ ಧ್ವಜ ಸಂಹಿತೆ 2002 ಅನ್ನು ರೂಪಿಸಿದ್ದು.
ಅದರ ಪ್ರಕಾರ ರಾಷ್ಟ್ರಧ್ವಜವನ್ನು ದಿನನಿತ್ಯ ಏರಿಸುವ ಹಾಗೂ ಇಳಿಸುವ ಪದ್ಧತಿಯು ಇದೆ. ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ಧ್ವಜ ಪ್ರದರ್ಶನಕ್ಕೆ ನಿಗದಿಪಡಿಸಿರುವ ನಿಬಂಧನೆಗಳ ಕಟ್ಟು ನಿಟ್ಟಾಗಿ ಅನುಸರಿಸುವುದು ಹಾಗೂ ಯಾವುದೇ ಸಂದರ್ಭದಲ್ಲಿ ಧ್ವಜದ ಗೌರವ ಮತ್ತು ಘನತೆಗೆ ಚ್ಯುತಿ ಬಾರದಂತೆ ಎಚ್ಚರ ಏರಿಸಬೇಕು ಎಂದು ಸರ್ಕಾರದ ಆದೇಶ ಇದೆ.
ಆದರೆ ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿದಿನ ರಾಷ್ಟ್ರಧ್ವಜವನ್ನು ಏರಿಸುವುದು ಇಳಿಸುವುದು ಜಾರಿಯಲ್ಲಿ ಇದೆ ಅದೇ ರೀತಿ ಪ್ರತಿನಿತ್ಯ ಧ್ವಜ ಏರಿಸುವುದು ಇಳಿಸುವ ಕಾರ್ಯ ಮಾಡುತ್ತಿದ್ದಾರೆ ಆದರೆ ಕಳೆದು ಒಂದು ತಿಂಗಳಿಂದ ಸಂಪೂರ್ಣವಾಗಿ ಮಾಸಿ ಹೋಗಿರುವ ದ್ವಜವನ್ನು ಹಾರಾಡಿಸುತ್ತಿದ್ದಾರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಬಡವರ ಬಾರುಕೋಲು ಪತ್ರಿಕೆಗೆ ಗಮನಕ್ಕೆ ಬಂದಾಗ ಖುದ್ದಾಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದೀರಿ ಮಾಸಿಹೋಗಿರುವ ಧ್ವಜವನ್ನು ಯಾಕೆ ಏರಿಸಿದ್ದೀರಿ ಅಂದಾಗ ಅಲ್ಲಿ ಇರುವಂತ ಸಿಬ್ಬಂದಿ ನಾವು ಏನು ಮಾಡುವುದು ಸರ್ ನಮ್ಮ ಸರ್ ಏನು ಹೇಳುತ್ತಾರೆ ಅದನ್ನೇ ಕೇಳುತ್ತೇವೆ ಒಂದು ತಿಂಗಳಾಯಿತು ಹೊಸ ರಾಷ್ಟ್ರಧ್ವಜವನ್ನು ತರಬೇಕು ತರಬೇಕು ಎನ್ನುತ್ತಿದ್ದಾರೆ ಆದರೆ ತಂದಿಲ್ಲ ಇನ್ನೊಂದು ಎರಡು ದಿನದಲ್ಲಿ ತಂದು ಹಾಕುತ್ತೇವೆ ಎನ್ನುತ್ತಾರೆ.
ನಂತರದಲ್ಲಿ ಸಿಂಧನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರಣ್ಣ ಕೌಲಗಿ ಅವರಗೆ ಕರೆ ಮಾಡಿ ಹೇಳಿದಾಗ ಆಯ್ತು ನೀವು ನಮ್ಮ ಗಮನಕ್ಕೆ ತಂದಿದ್ದೀರಿ ಅಲ್ವಾ ನಾನು ಮಾತನಾಡಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಮರುದಿನ ಪುನಹ ಮಾಸಿಹೋಗಿರುವ ರಾಷ್ಟ್ರಧ್ವಜವನ್ನು ಏರಿಸಿರುತ್ತಾರೆ ಇದಕ್ಕೆ ಸಂಬಂಧಿಸಿದಂತೆ ಮತ್ತೆ ತಾಲೂಕು ಪಂಚಾಯಿತಿಗೆ ಹೋಗಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರಣ್ಣ ಕೌಲಗಿ ಭೇಟಿ ಮಾಡಿ ಮಾಸಿಹೋಗಿರುವ ರಾಷ್ಟ್ರಧ್ವಜವನ್ನು ಪುನಹ ಏರಿಸಿದ್ದಾರೆ ಎಂದು ಕೇಳಿದಾಗ ಕನಿಷ್ಠ ಕನ್ನಡದಲ್ಲಿ ಮಾತನಾಡುವ ಸೌಜನ್ಯವನ್ನು ಕೂಡ ತೋರದೆ ನಾನೊಬ್ಬ ಬ್ರಿಟಿಷ್ ಪ್ರಜೆಯಂತೆ ವರ್ತಿಸಿ ಎಲ್ಲವನ್ನು ಇಂಗ್ಲಿಷ್ನಲ್ಲಿ ಮಾತನಾಡುತ್ತಾ. ನಾನು ಎಲ್ಲವನ್ನು ಸರಿಪಡಿಸುತ್ತೇನೆ ಹೋಗಿ ಎಂದು ಏರು ಧ್ವನಿಯಲ್ಲಿ ಮಾತಾಡುತ್ತಾರೆ ಸರ್ ಇದು ಸರಿಯಾದ ಕ್ರಮವಲ್ಲ ಕನ್ನಡದಲ್ಲಿ ಮಾತನಾಡಿ ಎಂದು ಪತ್ರಿಕೆ ಅವರು ಹೇಳಿದಾಗ ಸರಿ ನೀವು ಪತ್ರಿಕೆಯವರು ಇದ್ದರೆ ಇರಬಹುದು ನೀವು ಕೂಲಾಗಿ ಇರಿ ಸ್ವಲ್ಪ ಬಣ್ಣ ಮಾಸಿದೆ ಅಷ್ಟೇ ಅಲ್ವಾ ನಾನು ಹೇಳುತ್ತೇನೆ ಬಿಡಿ ಎಂದು ಉಡಾಫೆ ಉತ್ತರವನ್ನು ಕೊಟ್ಟು ರಾಷ್ಟ್ರಧ್ವಜದ ಬಗ್ಗೆ ಇವರಿಗಿರುವ ನಿಷ್ಕಾಳಜಿ ಮತ್ತು ಇಂಗ್ಲೀಷ್ ಮೇಲಿರುವ ಅಂದಭಿಮಾನವನ್ನು ಪತ್ರಿಕೆಯ ಮುಂದ ಎಚ್ಚೆತ್ತು ಗೊಳಿಸಿದ್ದಾರೆ.
ಹೊಸ ರಾಷ್ಟ್ರಧ್ವಜವನ್ನು ತರಿಸಿ ಏರಿಸಲು ಸೂಚಿಸುತ್ತೇನೆ ಮತ್ತು ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂಬುದು ಅವರ ಕರ್ತವ್ಯ ಆದರೆ ರಾಷ್ಟ್ರಧ್ವಜದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಎಷ್ಟರಮಟ್ಟಿಗೆ ಸರಿ …? ಸಂಬಂಧಪಟ್ಟ ಮೇಲಾಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅವಮಾನಿಸಿರುವ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.