ಏಪ್ರಿಲ್ 11. ಆತ್ಮೀಯ ಓದುಗರೇ ಇದೇನಪ್ಪಾ ಒಂದು ಟಿಕೇಟಿನ ಕಥೆ ಅಂತ ಹೇಳುತ್ತಿದ್ದೀರಲ್ಲ ಅಂತ ಅನಿಸಬಹುದು ಹಾಗಾದ್ರೆ ಇದು ಯಾವ ಟಿಕೆಟ್ ರೈಲ್ವೆ ಟಿಕೆಟ್ ಬಸ್ ಟಿಕೆಟ್ ಅಥವಾ ವಿಮಾನದ ಟಿಕೇಟ ಅಂತ ತಿಳ್ಕೋಬೇಡಿ ಇದು ನಮ್ಮ ಭತ್ತದ ನಾಡು ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಟಿಕೆಟ್ ಕಥೆ.
ಹೌದು ಇಡೀ ರಾಜ್ಯದಲ್ಲಿ ನಮ್ಮ ರಾಯಚೂರು ಜಿಲ್ಲೆಯ ಭತ್ತದ ನಾಡು ಸಿಂಧನೂರು ತಾಲೂಕು ವಿಶೇಷ ಅದರಲ್ಲೂ ಟ್ರ್ಯಾಕ್ಟರ್ ಮಾರಾಟದಲ್ಲಿ ಇಡೀ ಏಷ್ಯಾದಲ್ಲಿ ನಂಬರ್ ಒನ್ ತಾಲೂಕ್ ಎಂದು ಪ್ರಸಿದ್ಧಿಯಾಗಿದೆ ಅದೇ ರೀತಿ ಇಡೀ ರಾಜ್ಯದಲ್ಲಿ ಒಂದು ರೀತಿ ರಾಜಕೀಯ ನಡೆದರೆ ನಮ್ಮ ತಾಲೂಕಿನಲ್ಲಿ ಅಂದರೆ ನಮ್ಮ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಬಾರಿಗಿಂತ ಈ ಬಾರಿ ಬೇರೆ ರೀತಿ ರಾಜಕೀಯ ನಡೆಯುತ್ತೆ ಅಂತ ಮತದಾರ ಪ್ರಭು ಹೇಳುತ್ತಿದ್ದಾರೆ.
ಜೆಡಿಎಸ್ ಪಕ್ಷದವರು ಶ್ರೀ ವೆಂಕಟರಾವ್ ನಾಡಗೌಡ್ರು ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿ ಸುಮಾರು ದಿನಗಳ ನಂತರ ಕಾತುರದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ತೊರದು ಬಿಜೆಪಿ ಪಕ್ಷ ಸೇರ್ಪಡೆಗೊಂಡ ಕೆ ಕರಿಯಪ್ಪನವರು ಸಿಂಧನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.
ಆದರೆ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎಂದು ಇನ್ನೂ ಘೋಷಣೆ ಮಾಡದೇ ಕಾರ್ಯಕರ್ತರಿಗೆ ನಿದ್ದೆಗೆಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೈಲೆಂಟಾಗಿದೆ ಹಾಗಾದರೆ ಯಾವಾಗ ಮಾಡುತ್ತೆ ಯಾರಿಗೆ ಮಾಡುತ್ತೆ….?
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಸ್ವಲ್ಪ ದಿನಗಳು ತಮ್ಮ ಹಿರಿಯ ಮುಖಂಡರ ಜೊತೆ ಹಾಗೂ ಸನ್ಮಾನ್ಯ ಶ್ರೀ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೊಂದಿಗೆ ರಾಜಧಾನಿ ಬೆಂಗಳೂರಿನಲ್ಲಿ ಟಿಕಾಣಿ ಹೂಡಿದ್ದಾರೆ ಎಂದು ಕೇಳಿ ಬಂದಿತ್ತು.
ನಂತರದಲ್ಲಿ ಡೆಲ್ಲಿ ಚಲೋ ಎಂದು ದೆಹಲಿಗೆ ಹೋಗಿ ವಾರಗಳು ಕಳೆದರೂ ಇನ್ನೂ ಟಿಕೆಟಿನ ಗುಟ್ಟು ರಟ್ಟಾಗಿದೆ ಅವರ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೇಳುವುದಾದರೆ ನಾಳೆ ಅಥವಾ ನಾಡಿದ್ದರಲ್ಲಿ ನಮ್ಮ ಹಂಪನಗೌಡರು ಬಿ ಫಾರಂ ಜೊತೆಗೆ ಸಿಂಧನೂರಿಗೆ ಆಗಮಿಸಲಿದ್ದಾರೆ ನಾಮಿನೇಷನ್ ಫೈಲ್ ಕೂಡ ಮಾಡಲಿದ್ದೇವೆ ಅದಕ್ಕಾಗಿ ಇಡೀ ಕ್ಷೇತ್ರದಲ್ಲಿ ನಮ್ಮ ಗೌಡರ ಪರ ಪ್ರಚಾರ ಮಾಡುತ್ತಿದ್ದೇವೆ ಕಾದುನೋಡಿ ಎಂದು ಹೇಳುತ್ತಿದ್ದಾರೆ.
ಜೊತೆಗೆ ಅವರ ಸಂಬಂಧಿಯಾದ ಮತ್ತು ಯುವ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಶ್ರೀ ಬಸವನಗೌಡ ಬಾದರ್ಲಿ ಅವರು ತಮ್ಮ ಬಣದ ಮುಖಂಡರುಗಳು ಮತ್ತು ಉಳಿಯಳುಗಳ ಜೊತೆಗೆ ಕನಕಪುರ ಬಂಡೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಜೊತೆಗೆ ಡೆಲ್ಲಿಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಕಾರ್ಯನಿರತರಾಗಿದ್ದಾರೆ.
ಹಾಗೂ ಅವರ ಅಭಿಮಾನಿಗಳು ಮತ್ತು ಸಾವಿರಾರು ಕಾರ್ಯಕರ್ತರು ಮಾತ್ರ ನಮ್ಮ ಗೌಡರು ಇನ್ನೆರಡು ದಿನಗಳಲ್ಲಿ ಬಿ ಫಾರಂ ಜೊತೆ ಬರಲಿದ್ದಾರೆ ಇಡೀ ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರು ಎಲ್ಲರೂ ಸೇರಿ ದಿನಾಂಕ 17ರಂದು ಲಕ್ಷಾಂತರ ಜನ ಸೇರಿ ನಾಮಪತ್ರ ಸಲ್ಲಿಸಲಿದ್ದೇವೆ ಈಗಾಗಲೇ ನಾಮಪತ್ರವನ್ನು ಸಲ್ಲಿಸಲು ಎಲ್ಲಾ ತರಹದ ಸಿದ್ಧತೆಗಳನ್ನು ನಡೆಸಿದ್ದೇವೆ ಎಂದು ಮಾತನಾಡುತ್ತಿದ್ದಾರೆ.
ಹಾಗಾದರೆ ಈ ಟಿಕೇಟಿನ ಗುಟ್ಟೇನು…..,…….?