ಏಪ್ರಿಲ್ 27. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೊಮ್ಮನಾಳ (ಇಜೆ) ಗ್ರಾಮದಲ್ಲಿನ ಮಾದಿಗ ಸಮುದಾಯದ ಜನರು ಮೇ ಹತ್ತರಂದು ನಡೆಯುತ್ತಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ 70-80 ವರ್ಷಗಳಿಂದಲೂ ನಮ್ಮ ಗಾಮದಲ್ಲಿ ವಾಸ ಮಾಡುತ್ತಿರುವ ದಲಿತ (ಮಾದಿಗ) ಸಮುದಾಯದ ಜನರು ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮತ್ತು 150 ಮತದಾರರ ಕುಟುಂಬಸ್ಥರು ಇವತ್ತಿಗೂ ಸಾಮಾಜಿಕ ಸ್ಥಾನಮಾನ ಪಡೆಯದೇ ಆನೇಕ ಮೂಲಭೂತ ಸಮಸ್ಯೆಗಳ ಮಧ್ಯ ಜೀವನ ಮಾಡುತ್ತಿದ್ದು ಜನರಿಗೆ ನಿವೇಶನ ಮತ್ತು ವಸತಿ ಹಾಗೂ ರಸ್ತೆ ಚರಂಡಿ ನಿರ್ಮಾಣಗಳು ಬಹು ಅತ್ಯವಶ್ಯವಾಗಿವೆ ಎಂಬುದು ತಮ್ಮಗಳಿಗೆ ಮನದಟ್ಟು ಮಾಡುತ್ತಿದ್ದೇವೆ. ನಮ್ಮ ಮಾದಿಗ ಸಮುದಾಯದ ಜನರು ಇವತ್ತಿಗೂ ಪ್ರತಿಯೊಂದು ಪಕ್ಷಗಳ ಅಭ್ಯರ್ಥಿಗಳಿಗೆ ಮತಗಳನ್ನು ಹಾಕುತ್ತಾ ಬಂದಿದ್ದರು ಕೂಡ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ಬಗ್ಗೆ ಸುಳ್ಳು ಭರವಸೆಗಳನ್ನು ನೀಡುತ್ತಲೇ ಬಂದಿದ್ದಾರೆ ವಿನಹ ಇವತ್ತಿಗೂ ನಮ್ಮ ಮಾದಿಗ ಸಮುದಾಯಲ್ಲಿ ಯಾವುದೇ ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದೆ ಬರೆದಿರುವದು ಈ ಪ್ರಜಾ ಪ್ರಭುತ್ವದಲ್ಲಿ ದೊಡ್ಡ ದುರಂತವೇ ಸರಿ
ಕಳೆದ 3-4 ತಿಂಗಳಗಳ ಹಿಂದೆ ನಮ್ಮ ಬೊಮ್ಮನಾಳ (ಇಜೆ) ಗ್ರಾಮದಲ್ಲಿ ಡಿ.ಸಿ. ನಡೆ ಹಳ್ಳಿ ಕಡೆ ಕಾರ್ಯಕ್ರರು ಗೌರವ ನಿತವಾಗಿ ತಾವುಗಳು ಭಾಗವಹಿಸಿ ಪ್ರತಿ ಕಾಲೋನಿಗಳಲ್ಲಿ ಪಾದಯಾತ್ರೆ ಮಾಡಿದಂತೆ ನಮ್ಮ ಮಾದಿಗ ಸಮುದಾಯದ ಕಾಲೋನಿಯಲ್ಲಿ ಪಾದಯಾತ್ರೆ ಮಾಡಿ ಅನೇಕ ಮೂಲಭೂತ ಸೌಲಭ್ಯಗಳ ಕೊರತೆಯನ್ನು ತಾವುಗಳು ಸೇರಿದಂತೆ ತಹಶೀಲ್ದಾರರು ಸಿಂಧನೂರು ಹಾಗೂ ಶಾಸಕರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪರಿಹಾರ ನೀಡುವ ಭರವಸೆಯನ್ನು ಸಹ ಕೊಟ್ಟಿರುತ್ತಾರೆ, ಆದರೆ ಇದುವರಿಗೆ ಸರ್ಕಾರದಲ್ಲಿ ಮಾದಿಗ ಸಮುದಾಯದ ಜನರಿಗೆ ಸರ್ಕಾರದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಮಾತ್ರ ಶೂನ್ಯವಾಗಿ ಪರಿಣಮಿಸಿದೆ.
ಆ ನಿಟ್ಟಿನಲ್ಲಿ ಮಾದಿಗ ಸಮುದಾಯದ 150 ಮತದಾರರು ನಮ್ಮ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಯಾವುದೇ ಪಕ್ಷಗಳ ಅಭ್ಯರ್ಥಿಗಳಿಗೆ ಮತದಾನ ಮಾಡಬಾರದು ಎಂದು ಒಮ್ಮತದಿಂದ ನಿರ್ಧಾರವನ್ನು ಕೈಗೊಂಡಿರುವುದಾಗಿ ತಮ್ಮಲ್ಲಿ ಈ ಮೂಲಕ ತಿಳಿಸಲು ಬಯಸುತ್ತೇವೆ ಮತ್ತು ನಮ್ಮ ಸಮುದಾಯದ ಜನರಿಗೆ ಇರುವ ನಮ್ಮ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿದಲ್ಲಿ ಮಾತ್ರ ಮತದಾನ ಮಾಡಲು ಇಚ್ಚಿಸುತ್ತೇವೆಂದು ಎಂದು ತಸಿಲ್ದಾರರ ಮೂಲಕ ಮನವಿಪತ್ರ ಸಲ್ಲಿಸಿದರು.