ಏಪ್ರಿಲ್ 09 . ಮಸ್ಕಿ ಪಟ್ಟಣದ ಅಭಿನಂದನ್ ಸಂಸ್ಥೆಯ ವತಿಯಿಂದ ನಡಯುತ್ತಿರುವ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಭಾಗವಾಗಿ 92ನೇ ವಾರದ ಸೇವಾ ಕಾರ್ಯವನ್ನು ಮಸ್ಕಿಯ ಗಾಂಧಿ ನಗರದಲ್ಲಿ ಇರುವ ಮಹಾತ್ಮ ಗಾಂಧಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಮೂರ್ತಿಗಳು ಇರುವ ಉದ್ಯಾನವನದಲ್ಲಿ ಪಕ್ಷಗಳಿಗೆ ನೀರಿನ ಅರವಟ್ಟಿಗೆಗಳನ್ನು ಕಟ್ಟುವ ಮೂಲಕ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಸಂತೋಷ್ ಅವರು ಬೇಸಿಗೆಯ ಬಿಸಿಲಿನ ವಾತಾವರಣದಲ್ಲಿ ಜನಗಳಿಗೆ ನೀರಿನ ತೊಂದರೆ ಹೆಚ್ಚಾಗಿರುವುದರಿಂದ ಅದರಲ್ಲೂ ಬಿಸಿಲ ಧಗೆಗೆ ಹಕ್ಕಿ-ಪಕ್ಷಿಗಳು ಬಾಯಾರಿ ಬಳಲುತ್ತಿರುತ್ತವೆ ಪಕ್ಷಿಗಳಿಗೆ ಇನ್ನಷ್ಟು ಕಷ್ಟಕರ ಸಂದರ್ಭ ಉಂಟಾದ ಈ ಸಮಯದಲ್ಲಿ ಪಕ್ಷಿಗಳಿಗಾಗಿ ಅರವಟ್ಟಿಗೆ ನಿರ್ಮಿಸಿ ನೀರನ್ನು ಪೂರೈಸುವ ಕಾರ್ಯಕ್ಕೆ ಮುಂದಾಗಿರುವ ಅಭಿನಂದನ್ ಸಂಸ್ಥೆಯ ಈ ಕಾರ್ಯ ಬಹಳಷ್ಟು ಶ್ಲಾಘನೀಯ ಇವರ ಈ ಕಾರ್ಯಗಳು ಹೀಗೆ ಮುಂದುವರೆಯಲಿ ಹಾಗೂ ಇನ್ನಷ್ಟು ಕೀರ್ತಿ ಇವರದಾಗಲಿ ಎಂದರು.
ಈ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಶೃತಿ ಹಂಪರಗುಂದಿ, ಜಾಫರಮಿಯ, ಮಲ್ಲಿಕಾರ್ಜುನ ಬಡಿಗೇರ, ಬಸಲಿಂಗಪ್ಪ ಬಾದರ್ಲಿ ಮತ್ತಿತರರು ಭಾಗವಹಿಸಿದ್ದರು.