- ರಾಯಚೂರು ಅಕ್ಟೋಬರ್ 28. ರಾಜ್ಯಾದ್ಯಂತ ಹುಲಿ ಉಗುರಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೆಲವೇ ದಿನಗಳ ಹಿಂದೆ ಬಿಗ್ ಬಾಸ್ ಸ್ಪರ್ಧೆ ವರ್ತೂರ್ ಪ್ರಕಾಶ್ ಏಕಾಏಕಿ ಬಂದನದ ನಂತರ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಲವಾರು ಸೆಲೆಬ್ರಿಟಿಗಳು ರಾಜಕಾರಣಿಗಳು ಮತ್ತು ಕೆಲವು ಸ್ವಾಮೀಜಿಗಳು ಹುಲಿ ಉಗುರು ಧರಿಸಿರುವ ಫೋಟೋಗಳನ್ನು ಫೇಸ್ ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್ ಮತ್ತು ಇನ್ನಿತರ ಸಾಮಾಜಿಕ ಜಾಣರ ತಾಣಗಳಲ್ಲಿ ವೈರಲ್ ಮಾಡಿ ಇವರನ್ನು ಕೂಡ ಬಂದನ ಮಾಡಿ ಶಿಕ್ಷೆಗೆ ಒಳಪಡಿಸಿ ಅರಣ್ಯ ಆಯ್ದ ಕಾಯ್ದೆ ಪ್ರಕಾರ ಇವರಿಗೆ ಶಿಕ್ಷೆ ಕೊಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಹುಲಿ ಉಗರಿನ ನಂಟು ಸಿಂಧನೂರಿಗುಂಟ….?
ಹೌದು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾವೇರುತ್ತಿರುವ ಹುಲಿ ಉಗುರಿನ ಪ್ರಕರಣಗಳು ಸಿಂಧನೂರಿಗೆ ನಂಟಾಗಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಆನಂದ್ ಪಾಟೀಲ್ ಬೊಮ್ಮನಾಳ ಎಂಬ ಯುವಕ ಹುಲಿ ಉಗುರು ಧರಿಸಿರುವ ಸುದ್ದಿ ಕೇಳಿ ಬರುತ್ತಿದೆ ಮತ್ತು ಫೋಟೋ ಕೂಡ ವೈರಲಾಗುತ್ತಿದೆ ಇದರಿಂದ ಸಾರ್ವಜನಿಕರು ಹುಲಿ ಊರನ್ನು ಧರಿಸಿಕೊಂಡು ಸಚಿವರ ಜೊತೆಗೆ ಮತ್ತು ಶಾಸಕರ ಜೊತೆಗೆ ಹೋರಾಡುತ್ತಿರುವ ಇವರಿಗೂ ಕೂಡ ಅರಣ್ಯ ಕಾಯ್ದೆಯ ಪ್ರಕಾರ ಇವರನ್ನು ಬಂಧನ ಮಾಡಿ ಶಿಕ್ಷೆಗೆ ಒಳಪಡಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಪೋಸ್ಟರ್ ಗಳು ವೈರಲಾಗುತ್ತಿದೆ.
ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ
ಆತ್ಮೀಯ ಸಹೋದರ ಆನಂದ್ ಪಾಟೀಲ್ ಬೊಮ್ಮನಾಳ ಹುಲಿಯ ಉಗುರು ಧರಿಸಿರುವ ಸುದ್ದಿ ಹರಿದುದಾಡುತ್ತಿದೆ ಅದರ ಬಗ್ಗೆ ನನ್ನ ಗಮನಕ್ಕೆ ಬಂದ ನಂತರ ನಾನು ಅವರನ್ನು ವಿಚಾರಿಸಿದ್ದೇನೆ ನನ್ನ ಬಳಿ ಇರುವ ಹುಲಿಯ ಉಗುರು ಅಸಲಿ ಅಲ್ಲ ಇದು ನಕಲಿ (ಪ್ಲಾಸ್ಟಿಕ್) ಫ್ಯಾಷನ್ ಗಾಗಿ ನಾನು ಹಾಕಿಕೊಂಡಿದ್ದೇನೆ ಎಂದು ಆನಂದ್ ಹೇಳಿದ್ದಾರೆ ಯಾರು ಆಗದೆ ಇರುವವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಅದು ನಕಲಿಯಲ್ಲ ಅಸಲಿ ಎಂದರೆ ಕಾನೂನು ಪ್ರಕಾರ ಕ್ರಮವಾಗಲಿ ತಪ್ಪಲ್ಲ ಕಾನೂನು ಎಂದರೆ ಎಲ್ಲರಿಗೂ ಒಂದೇ.
ದ್ರಾಕ್ಷಾಯಿಣಿ ಬಿ ಮಾಲಿ ಪಾಟೀಲ್
ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ನಗರ ಘಟಕ