ಸಿಂಧನೂರು ಅ೧೧.ನಗರವನ್ನು ಸ್ವಚ್ಚ ,ಸುಂದರವಾಗಿ ನಿರ್ಮಾಣ ಮಾಡುವಲ್ಲಿ ನಗರಸಭೆ ಆಡಳಿತ ಮಂಡಳಿ ಮತ್ತು ಜನ ಪ್ರತಿನಿಧಿಗಳು ಸಂಪೂರ್ಣ ವಿಫಲ ಆಗಿರುವುದು ದುರದೃಷ್ಟಕರ ಎಂದು ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ನಿರುಪಾದಿ ಕೆ ಗೊಮರ್ಸಿ ಮಾತನಾಡಿದರು.
ನಗರದ ವಾರ್ಡ್ ನಂಬರ್ 8 ರಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ಜನ ಸಾಮಾನ್ಯರು ಕಸ ಕಡ್ಡಿ ಬಟ್ಟೆ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುತಿದ್ದು ರಾಶಿ ರಾಶಿ ಕಸದ ಗುಡ್ಡೆಗಳು ನಿರ್ಮಾಣವಾಗಿ ಇದರಿಂದ ದುರ್ವಾಸನೆ ಸೃಷ್ಟಿಯಾಗಿ, ಡೆಂಗ್ಯೂ,ಮಲೇರಿಯಾ,ಚಿಕನ್ ಗುನ್ಯಾ, ಮುಂತಾದ ರೋಗಗಳು ಸೃಷ್ಟಿಯಾಗಿ ಸುತ್ತಲಿನ ವಾತಾವರಣ ಕಲುಷಿತಗೊಂಡು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಉದಾಹರಣೆಗಳು ಸಾಕಷ್ಟಿವೆ.
ಇದೆಲ್ಲವನ್ನೂ ಕಂಡು ಕಾಣದಂತೆ ಕಣ್ಣುಮುಚ್ಚಿ ಕುಳಿತು ಕೊಂಡ ನಗರಸಭೆಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗುತಿದ್ದಾರೆ,ಹಾಗೂ ಚುನಾವಣಾ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ಜನ ಸಾಮಾನ್ಯರಿಗೆ ಕೊಟ್ಟ ಮಾತು ತಪ್ಪಿ ಜನಕ್ರೋಷಕ್ಕೆ ಕಾರಣವಾಗುತ್ತಿರುವ ಸಂಗತಿ ತಾಲೂಕಿನಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ತಾಲೂಕ ಅಧ್ಯಕ್ಷ ದಾವಲ್ ಸಾಬ್ ದೊಡ್ಡಮನಿ ಹಾಗೂ ಶ್ರೀನಿವಾಸ ,ರಮೇಶ್,ಬಸವರಾಜಯ್ಯ ಇದ್ದರು