ಮೇ 25. ಸಿಂಧನೂರು ಯೋಚನೆ ಮಾಡಿ ಯೋಜನೆಗಾಗಿ ನಿಮ್ಮ ಮತ ನನಗೆ ಕೊಡಿ ಶಿವಕುಮಾರ್ ಹಿರೇಮಠ ದಿನಾಂಕ 03-06-2024 ಸೋಮವಾರ, ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಸಮಯ ನಿಗದಿಯಾಗಿದ್ದು.
ಪದವೀಧರರ ಹಾಗೂ ಶಿಕ್ಷಣ ಕ್ಷೇತ್ರದ ಹಿತ ಕಾಪಾಡುವ ಉದ್ದೇಶದಿಂದ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ ಒಮ್ಮೆ ಅವಕಾಶ ನೀಡಿದರೆ ವಿಧಾನ ಪರಿಷತ್ನಲ್ಲಿ ನಿಮ್ಮ ಧ್ವನಿಯಾಗಿ,ಪದವೀಧರ ಸಮಸ್ಯೆಗಳ ಕುರಿತು ಮತ್ತು ಅವುಗಳ ಪರಿಹಾರಕ್ಕಾಗಿ ಪರಿಷತ್ತಿನಲ್ಲಿ ಹೋರಾಟ ಮಾಡುತ್ತೇನೆ.
ಇದುವರೆಗೂ ಪದವೀಧರರ ಬಗ್ಗೆ ಪರಿಷತ್ತಿನಲ್ಲಿ ನಮ್ಮ ಭಾಗದದಿಂದ ಆಯ್ಕೆಯಾದ ಪರಿಷತ್ತಿನ ಯಾವ ಸದಸ್ಯರು ಗಂಭೀರ ಚರ್ಚೆಯಾಗಲಿ ಅಥವಾ ಹೋರಾಟ ವಾಗಲಿ ಮಾಡದೇ,ಪದವೀಧರ ಕ್ಷೇತ್ರದ ಮತದಾರರ ಸಮಸ್ಯೆಗೆ ಸ್ಪಂದಿಸದೆ ಆಯ್ಕೆ ಮಾಡಿದ ಪದವೀಧರರಿಗೆ ಅನ್ಯಾಯ ಮಾಡಿದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದಿಂದ 6 ವರ್ಷಗಳ ಹಿಂದೆ ಗೆದ್ದು ಹೋದವರು ಮತ್ತೆ ಕ್ಷೇತ್ರದ ಕಡೆ ಮುಖ ಮಾಡಿಲ್ಲ ಇದಕ್ಕೆ ಜನಪ್ರತಿನಿಧಿಗಳ ಉದಾಸೀನತೆ ಕಾರಣ.ನಿಮ್ಮೆಲ್ಲರ ಭಾವನೆಗಳ ಅರಿತು ತಮ್ಮ ಧ್ವನಿಯಾಗಿ,ಪದವೀಧರ ಕ್ಷೇತ್ರದ ಪ್ರಾಮಾಣಿಕ ಸೇವೆ ಮಾಡಬೇಕೆಂಬ ಯೋಚನೆ-ಯೋಜನೆ ಯ ಅಭಿಲಾಷೆಯೊಂದಿಗೆ ಜನಸಾಮಾನ್ಯರ ಪ್ರತಿನಿಧಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಸಿದ್ದೇನೆ.ನನಗೊಂದು ಅವಕಾಶ ಕೊಡಿ ಎಂದು ಈಶಾನ್ಯ ಪದವಿಧರ ಕ್ಷೇತ್ರದ ಪ್ರಜ್ಞಾವಂತ ಪದವೀಧರ ಮತದಾರರಲ್ಲಿ ಸವಿನಯ ಪ್ರಾರ್ಥನೆ ಇಂತಿ ನಿಮ್ಮ ವಿಶ್ವಾಸಿ ಶಿವಕುಮಾರ ಹಿರೇಮಠ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ.