ಬೆಂಗಳೂರು ಫೆಬ್ರುವರಿ 4. ಈ ಮೂರ್ಖ ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಗಾಂಧಿನಗರ ಸೇರಿದಂತೆ ಗಲ್ಲಿ ಗಲ್ಲಿಯಲ್ಲಿ ನಿಮಗೆ ಸಿಗುತ್ತಾನೆ ಸುಮಾರು 25 ರಿಂದ 30 ವರ್ಷದೊಳಗೆ ಇರುವ ಇವನು ಗಟ್ಟಿಮುಟ್ಟಿಯಾಗಿ ಆರೋಗ್ಯವಂತನಾಗಿದ್ದಾನೆ ಆದರೆ ಇವನು ಮಾಡುವ ಹ***** ಕೆಲಸ ಏನು ಎಂದರೆ ಉತ್ತರ ಕರ್ನಾಟಕ ಭಾಷೆ ಮಾತನಾಡುವವರು ಯಾರಾದರೂ ಸಿಕ್ಕರೆ ಥಟ್ ಅಂತ ನಿಮ್ಮ ಹತ್ತಿರ ಬರುತ್ತಾನೆ, ಸರ್, ದುಡಿಬೇಕು ಅಂತ ಬಂದಿದ್ದೇನೆ ಆದರೆ ಕೆಲಸ ಸಿಕ್ತಾ ಇಲ್ಲ ಆಧಾರ್ ಕಾರ್ಡ್ ತಂದಿಲ್ಲ ಯಾರು ಕೆಲಸ ಕೊಡ್ತಾ ಇಲ್ಲ ಊಟ ಮಾಡಿ ಎರಡು ದಿನ ಆಯ್ತು ಊಟ ಇಲ್ಲ ದಯವಿಟ್ಟು ನನಗೆ ಬಸ್ ಚಾರ್ಜ್ ಕೊಟ್ಟುಬಿಡಿ ನಾನು ನಮ್ಮ ಊರಿಗೆ ಹೋಗ್ತೀನಿ ಅಂತ ಹೇಳ್ತಾನೆ. ನೀವು ಪಾಪ ನಮ್ಮ ಭಾಗದವನು ಅಂತ ಹೇಳಿ ದುಡ್ಡು ಏನಾದರೂ ಕೊಟ್ರೆ ಆಯ್ತು ನಿಮ್ಮ ಕಥೆ ಮುಗಿದಂಗೆ.
ಯಾಕಂದರೆ ನಮಗೂ ಕೂಡ ಇವನು ಯಾಮಾರಿಸಿದ್ದಾನೆ ನಮ್ಮ ಹತ್ತಿರ ಬಂದು ಸರ್ ನಿಮ್ದು ಯಾವ ಊರು ಅಂದ ಸಿಂಧನೂರು ಅಂತ ಹೇಳಿದೀವಿ ಕುಷ್ಟಗಿ ಪಕ್ಕದಲ್ಲಿರುವ ಮುದೇನೂರು ಹತ್ತಿರ ಒಂದು ಹಳ್ಳಿಯ ಹೆಸರು ಹೇಳಿದ ಆಗ ನಮ್ಮ ಸ್ನೇಹಿತರೊಬ್ಬರು ಆ ಗ್ರಾಮಕ್ಕೆ ಕರೆ ಮಾಡಿ ಇವನ ಬಗ್ಗೆ ಕೇಳಿದರು ಆಗ ಅವರು ಬೆಂಗಳೂರಿಗೆ ದುಡಿತೀನಿ ಅಂತ ಹೋಗಿದ್ದಾನೆ ಇಲ್ಲಿವರೆಗೂ ಊರಿಗೆ ಬಂದಿಲ್ಲ ಅಂತ ಹೇಳಿದರು ಆಗ ನಿಮ್ಮ ಗ್ರಾಮದವನು ಹೌದೋ ಅಲ್ಲ ಅಂತ ಕೇಳಿದಾಗ ಹೌದು ಅಂತ ಹೇಳಿದರು ಆಗ ಇವನು ಫೋನು ತೆಗೆದುಕೊಂಡು ಅಣ್ಣ ನಾನು ಆಗ ದುಡಿಯಲು ಬಂದಿದ್ದೆ ಮತ್ತೆ ಊರಿಗೆ ಬಂದು ಮತ್ತೆ ದುಡಿಬೇಕು ಅಂತ ಬೆಂಗಳೂರಿಗೆ ಬಂದಿದ್ದೆ ಆದರೆ ಇಲ್ಲಿ ಯಾರು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ ಮತ್ತೆ ನಾನು ಆಧಾರ್ ಕಾರ್ಡ್ ತಂದಿಲ್ಲ ನನಗೆ ಇಲ್ಲಿ ಇರೋಕ್ ಆಗ್ತಾ ಇಲ್ಲ ಅಳು ಬರ್ತಾ ಇದೆ ಊರಿಗೆ ಬಂದುಬಿಡ್ತೀನಿ ಸ್ವಲ್ಪ ಹೇಳಿ ಅಣ್ಣ ಬಸ್ ಚಾರ್ಜಿಗೆ ಆದಷ್ಟು ದುಡ್ಡು ಕೊಟ್ರೆ ಸಾಕು ಅಂತ ಹೇಳುತ್ತಾನೆ ಆಗ ಪಾಪ ಗ್ರಾಮಸ್ಥರು ಹೌದು ನಮ್ಮೂರಿನ ಹುಡುಗ ಇದ್ರೆ ಕೊಡಿ ದುಡ್ಡು ಅಂತ ಹೇಳ್ತಾರೆ.
ಆಗ ಇಂದ ಮುಂದ ನೋಡ್ದೇನೆ ನನ್ನ ಸ್ನೇಹಿತ “ಗಂಗಾಧರ್ ಈಚನಾಳ್” ಥಟ್ಟಂತ ಬೇರೆಯವರ ಹತ್ರ ದುಡ್ಡು ತೆಗೆದುಕೊಂಡು 500 ಆ ಹುಡುಗನ ಕೈಯಲ್ಲಿ ಕೊಡ್ತಾನೆ ಅಣ್ಣ ಆಷ್ಟು ದುಡ್ಡು ಸಾಲಲ್ಲ 603 ರೂಪಾಯಿ ಚಾರ್ಜ್ ಇದೆ ಅಷ್ಟು ಕೊಡಿ ಅಂತ ಕೇಳ್ತಾನೆ. ಅಷ್ಟು ಬಸ್ ಚಾರ್ಜು ಇಲ್ಲಪ್ಪ ಇನ್ನು ಕಡಿಮೆ ಇದೆ ನಾವು ಟಿಕೆಟ್ ತೆಗೆಸಿ ಕೊಡ್ತೀವಿ ಬಾ ಅಂತ ಹೇಳಿದಾಗ ಬೇಡ ಬಿಡಿ ನಾನೇ ತೆಗೆದ್ಕೊಳ್ತೀನಿ ಏನಾದ್ರೂ ಮಾಡಿ ಇಷ್ಟೇ ದುಡ್ಡಲ್ಲಿ ಊರಿಗೆ ಹೋಗ್ತೀನಿ ಅಂತ ಹೇಳ್ತಾನೆ.
ಅಷ್ಟರಲ್ಲಿ ಸ್ಥಳೀಯ ಚಶ್ಮಾ ಅಂಗಡಿಯ ಮಾಲೀಕರೊಬ್ಬರು ಬಂದು ಹೇ ಗುರು ಅಣ್ಣ ಅವನಿಗೆ ಯಾಕೆ ದುಡ್ಡು ಕೊಡ್ತಾ ಇದ್ದೀರಾ ಅವನು ಇದೇ ರೀತಿ ದಿನಾಲು ದಂದೆ ಮಾಡಿಕೊಂಡಿದ್ದಾನೆ. ಅವನು ಹೇಳ್ತಾ ಇರೋದು ಎಲ್ಲಾ ಸುಳ್ಳು ಇನ್ನೂ 10 ನಿಮಿಷದಲ್ಲಿ ಆ ಬಾರಿನ ಮುಂದೆ ಬಂದು ಕುಡಿದು ತೇಲಾಡುತ್ತ ಬಿದ್ದಿರುತ್ತಾನೆ ನೋಡಿ ಬೇಕಾದರೆ ದಯವಿಟ್ಟು ದುಡ್ಡು ಕೊಡಬೇಡಿ ಎಂದು ಬಹಳ ಹೇಳುತ್ತಾರೆ ಆದರೆ ಇವರನ್ನು ನಂಬಬಾರದು ಎಂದು ನಮ್ಮ ಭಾಗದವರು ಅಲ್ವಾ ಹೋದರೆ 500 ಅಲ್ವಾ? ಹೋಗಲಿ ಬಿಡಿ ಎಂದು ದುಡ್ಡು ಕೊಟ್ಟು 20 ನಿಮಿಷ ನಂತರ ಟೀ ಕುಡಿದು ಬರುವಷ್ಟರಲ್ಲಿ ಈ ಮೂರ್ಖ ಕುಡಿದು ಬಂದು ತೇಲಾಡುತ್ತಾ ಬಿದ್ದಿರುತ್ತಾನೆ.
ಇವನನ್ನು ಕಂಡ ನಮಗೆ ಮೈಯಲ್ಲ ಉರಿಯುತ್ತದೆ ಯಾಕೆ ಅಂದ್ರೆ ಅಯ್ಯೋ ಪಾಪ ನಮ್ಮ ಭಾಗವಾದವನು ಅಳುತ್ತಾ ಇದ್ದಾನೆ ಊಟ ಮಾಡಿಲ್ಲ ಊರಿಗೆ ಬೇರೆ ಹೋಗ್ತೀನಿ ಅಂತ ಇದ್ದಾನೆ ಅಂತ ಹೇಳಿ ದುಡ್ಡು ಕೊಟ್ಟರೆ ಕುಡಿದ ಅಮಲನಲ್ಲಿ ತೇಲಾಡುತ್ತ ನಿಮ್ಮ ದುಡ್ಡು ನಿಮಗೆ ವಾಪಸ್ ಕೊಡುತ್ತೇನೆ ನಾಳೆ ಬನ್ನಿ ಎಂದು ಸೊಕ್ಕಿನಿಂದ ಹೇಳುತ್ತಾನೆ.
ಆಗ ಸಿಟ್ಟಿನಿಂದ ಎರಡು ಬಾರಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಇವನನ್ನು ಕಳಿಸಬೇಕು ಎಂದು ನಿರ್ಧಾರ ಮಾಡಿದಾಗ ನಮ್ಮ ಹಿರಿಯರೊಬ್ಬರು ಇರಲಿ ಬಿಡಿ ಅವನು ಮಾಡಿದ ಪಾಪವ ಅವನಿಗಿರಲಿ ಏನು ಮಾಡಬೇಡಿ ಪೊಲೀಸರಿಗೆ ಹೇಳಬೇಡಿ ಎಂದು ಹೇಳುತ್ತಾರೆ ತಕ್ಷಣ ಅಲ್ಲಿಯ ಸ್ಥಳೀಯರು ನಾಲ್ಕೈದು ಜನ ಬರುತ್ತಾರೆ “ಏನ್ ಸ್ವಾಮಿ ಇವನಿಗೆ ದುಡ್ಡು ಕೊಟ್ಟಿದ್ದೀರಾ…? ಎಂದು ಬೆಂಗಳೂರಿನ ಏರು ಭಾಷೆಯಲ್ಲಿ ಮಾತನಾಡಿದಾಗ ನಮಗೂ ಸ್ವಲ್ಪ ಭಯ ಬಂತು ಆದರೆ ಅವರು ಏನ್ ಗುರು ಹೋಗಿ ಹೋಗಿ ಇಂಥವರಿಗೆ ದುಡ್ಡು ಕೊಡುತ್ತೀರಾ ಇವನಿಗೆ ಏನು ಕಡಿಮೆ ಆಗಿದೆ ಇವನಿಗೆ ಯಾರು ಕೆಲಸ ಕೊಡಲ್ಲ ಹೇಳಿ ವಯಸ್ಸು ಇನ್ನು 30 ಕೂಡ ಆಗಿಲ್ಲ ಕಟ್ಟು ಮಸ್ತಾಗಿದ್ದಾನೆ ಎಲ್ಲಾದರೂ ಹೋಗಿ ಕಸಗುಡಿಸಿದರೂ ಕೂಡ ಇವನಿಗೆ ದಿನಾಲು ಐದು ನೂರು ರೂಪಾಯಿ ಕೊಡುತ್ತಾರೆ ಆದರೆ ಇವನು ಮಾಡೋ ಹಲ್ಕಾ ಕೆಲಸ ನಿಮಗೆ ಗೊತ್ತಿಲ್ಲ ಸ್ವಾಮಿ ಇದು ಒಂತರ ದಂದೆ ಮಾಡ್ಕೊಂಡಿದ್ದಾರೆ ನಿಮ್ಮ ಭಾಗದವರು ಯಾರಾದರೂ ಬಂದರೆ ಕೈ ಮುಗಿಯುವುದು ಕಾಲು ಹಿಡಿಯುವುದು ಅಳುವುದು ಕರೆಯೋದು ಮಾಡಿ ದುಡ್ಡು ಸುಲಿಯುತ್ತಾನೆ ನಂತರ ಕುಡಿದ ಅಮಲಿನಲ್ಲಿ ಓಣಿ ಓಣಿಯಲ್ಲಿ ಬಿದ್ದಿರುತ್ತಾನೆ. ಪಾಪ ಮೊನ್ನೆ ತಾನೇ ಅವರಪ್ಪ ಬಂದು ಹೋಗೋಣ ಬಾ ಮಗನೇ ಊರಿಗೆ ಹೋಗಿ ಬಿಡೋಣ ಇಲ್ಲಿ ಏನು ಮಾಡುತ್ತೀಯಾ ಅಂತ ಹೇಳಿದರೆ ಕುಡಿದು ಪಾಪ ಅವರಪ್ಪನಿಗೆ ಹೊಡೆದು ಕಳಿಸಿದ್ದಾನೆ ಎಂದು ಹೇಳಿದರು.
ಹೀಗಾಗಿ ದಯವಿಟ್ಟು ಸ್ನೇಹಿತರೆ ಇವನು ಇದೇ ರೀತಿ ಎಷ್ಟು ಜನರಿಗೆ ಮೋಸ ಮಾಡಿ ಕುಡಿದು ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡು ನಿಜವಾಗಲೂ ಸಹಾಯ ಬೇಕಾದವರಿಗೆ ಸಹಾಯ ಇಲ್ಲದಂತೆ ಮಾಡುತ್ತಿರುವ ಇವನು ಯಾರಿಗಾದರೂ ಸಹಾಯ ಮಾಡುವ ಮುನ್ನ ಒಮ್ಮೆ ಯೋಚಿಸಿ ಸಹಾಯ ಮಾಡಿ ವಿಶೇಷವಾಗಿ ಈ ವ್ಯಕ್ತಿ ನಿಮಗೆ ಎಲ್ಲೇ ಕಂಡು ಬಂದರೂ ಕೂಡ ಒಂದು ರೂಪಾಯಿ ಕೂಡ ಸಹಾಯ ಮಾಡಬೇಡಿ.